ಸೋಮವಾರ, ಸೆಪ್ಟೆಂಬರ್ 27, 2021
22 °C

ಫ್ಯಾಕ್ಟ್ ಚೆಕ್: ಬ್ಯಾಂಕ್ ಹೆಸರಿನಲ್ಲಿ ಆನ್‌ಲೈನ್‌ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಸರ್ಕಾರ ಆರಂಭಿಸಿರುವ ಹೊಸ ಯೋಜನೆಯೊಂದು ಚರ್ಚೆಯಾಗುತ್ತಿದೆ. ಈ ಕುರಿತ ಸಂದೇಶವೊಂದರಲ್ಲಿ ತಾವು ಭಾರತೀಯ ರಿಸರ್ವ್ ಬ್ಯಾಂಕ್‌ನ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಯೋಜನೆಯನ್ನು ವಿವರಿಸಿದ್ದಾರೆ. ₹12,500 ಹೂಡಿಕೆ ಮಾಡಿದರೆ, ಹಿಂತಿರುಗಿ ₹4.62 ಕೋಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆನ್‌ಲೈನ್ ಬ್ಯಾಂಕ್ ಮ್ಯಾನೇಜರ್‌ ಅವರು ಹೂಡಿಕೆ ಮಾಡಿದವರ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಪತ್ರದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಚಿತ್ರವೂ ಇದೆ. 

ಈ ಸಂದೇಶ ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಿಳಿಸಿದೆ. ಹಣ ಹೂಡಿದರೆ ಅದನ್ನು ದುಪ್ಪಟ್ಟು ಮಾಡುವುದಾಗಿ ವಂಚಕರು ಜನರಿಗೆ ಭರವಸೆ ನೀಡಲು ಆರಂಭಿಸಿದ್ದಾರೆ. ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಈ ದಂಧೆ ಮಾಡಲಾಗುತ್ತಿದೆ. ತಮ್ಮನ್ನು ಸರ್ಕಾರಿ ಅಧಿಕಾರಿಗಳು ಎಂದೇ ವಂಚಕರು ಹೇಳಿಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದು, ಜನರು ಇಂತಹ ಮೋಸದ ಜಾಲಕ್ಕೆ ಬೀಳಬಾರದು ಎಂದು ಸಲಹೆ ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು