ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಂತನ ಬಗ್ಗೆ ಕನ್ಹಯ್ಯಾ ಕುಮಾರ್ ಹಿಂದೂ ವಿರೋಧಿ ಹೇಳಿಕೆ: ಇದು ಸುಳ್ಳು ಸುದ್ದಿ

Last Updated 4 ಮೇ 2019, 15:56 IST
ಅಕ್ಷರ ಗಾತ್ರ

ಬೆಂಗಳೂರು: ಬೇಗುಸರಾಯ್ ಲೋಕಸಭಾ ಕ್ಷೇತ್ರದ ಸಿಪಿಐ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಹಿಂದೂ ವಿರೋಧಿ, ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ.

ಟ್ವಿಟರ್ ಹ್ಯಾಂಡಲ್ @squintneon, ಕನ್ಹಯ್ಯಾ ಕುಮಾರ್ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಕನ್ಹಯ್ಯಾ ಭಾಷಣದ ತುಣುಕು ಟ್ವೀಟ್ ಮಾಡಿ ಈ ಆರೋಪ ಮಾಡಿದೆ.

ಹನುಮಾನ್ ದೂಸರೇ ಕಿಬೀಬಿ ಕೆ ಅಪ್‌ಮಾನ ಕೆ ಲಿಯೇ ಲಂಕಾ ಜಲಾ ದಿಯೇ (ಇನ್ನೊಬ್ಬರ ಪತ್ನಿಯ ಅವಮಾನಕ್ಕಾಗಿ ಹನುಮಂತ ಲಂಕಾ ಸುಟ್ಟ)ಎಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಇದು ಹಿಂದೂ ವಿರೋಧಿ ಮಾತ್ರವಲ್ಲ ಮಹಿಳಾ ವಿರೋಧಿಯೂ ಆಗಿದೆ.ಮಹಿಳೆಯರು ಅತ್ಯಾಚಾರಕ್ಕೊಳಗಾದಾಗ ಅಥವಾ ದೌರ್ಜನ್ಯಕ್ಕೊಳಗಾದಾಗ ನಿಂತು ನೋಡುವ ಜನರು ಇವರೇ.ಇಂತವರು ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಇದೇ ವಿಡಿಯೊ ಹಲವಾರು ಫೇಸ್‌ಬುಕ್ ಪುಟಗಳಲ್ಲಿಯೂ ಶೇರ್ ಆಗಿದೆ.

ಕನ್ಹಯ್ಯಾ ಹಿಂದೂ, ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿರುವ ಈ ವಿಡಿಯೊ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ಫ್ಯಾಕ್ಟ್‌ಚೆಕ್
ಅಂದಹಾಗೆ ಕನ್ಹಯ್ಯಾ ಕುಮಾರ್ ಈ ರೀತಿಯ ಹೇಳಿಕೆ ನೀಡಿಲ್ಲ. ಈ ವಿಡಿಯೊದಲ್ಲಿ ಕನ್ಹಯ್ಯಾ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥ ತಿಳಿಯುತ್ತದೆ.

ಕನ್ಹಯ್ಯಾ ಹೇಳಿದ್ದೇನು?
ದೂಸ್ರೇ ಕಿ ಪತ್ನಿ ಜೋ ಹೈ ಉನ್‌ಕಾ ಅಪಹರಣ್ ಹುವಾ ಉಸ್‌ಕೇ ಲಿಯೇ ಲಂಕಾ ಜಲಾದಿ, ಔರ್ ಯಹಾ ಹನುಮಾನ್ ಜೀ ಕೆ ನಾಮ್ ಪೆ ಅಪ್ನೇ ದೇಶ್ ಕೇ ಲೋಗೊಂಕಾ ಘರ್ ಜಲಾ ರಹೇ ಹೈ (ಇನ್ನೊಬ್ಬರ ಪತ್ನಿಯ ಅಪಹರಣ ಆಯಿತು ಎಂದು ಹನುಮಂತ ಲಂಕೆಯನ್ನು ಸುಟ್ಟ, ಆದರೆ ಇಲ್ಲಿ ಹನುಮಂತನ ಹೆಸರಿನಲ್ಲಿ ತಮ್ಮದೇ ದೇಶದ ಜನರ ಮನೆಯನ್ನು ಸುಡುತ್ತಿದ್ದಾರೆ) ಎಂದು ಕನ್ಹಯ್ಯಾ ಹೇಳಿದ್ದಾರೆ.ಇಲ್ಲಿ ಕನ್ಹಯ್ಯಾ ಅಪಹರಣ್ ಎಂದು ಹೇಳಿದ್ದು, ಅಪಮಾನ್ ಎಂದು ಅಲ್ಲ.

ಟ್ವೀಟ್‌ ಮಾಡಿರುವ ವಿಡಿಯೊ ಕೂಡಾ ಹಳೇದ್ದು.'Kahnaiya Kumar Hanuman speech'ಎಂಬ ಹುಡುಕು ಪದ ಬಳಸಿ ಗೂಗಲಿಸಿದಾಗ ಸಿಕ್ಕಿದ ವಿಡಿಯೊ ಇಲ್ಲಿದೆ. ಇಲ್ಲಿ ಕನ್ಹಯ್ಯಾ ಕುಮಾರ್ ಹನುಮಂತನ ಬಗ್ಗೆ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT