ಮಂಗಳವಾರ, ಮೇ 11, 2021
27 °C

ಫ್ಯಾಕ್ಟ್ ಚೆಕ್: ಸಚಿವ ವಿ.ಕೆ. ಸಿಂಗ್ ಸೋದರನಿಗೆ ಬೆಡ್ ಸಿಗಲಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಜಿಯಾಬಾದ್‌ನ ಸಂಸದ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಸಹೋದರ ಕೋವಿಡ್‌ ಪೀಡಿತನಾಗಿದ್ದು, ಹಾಸಿಗೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಸಿಂಗ್ ಅವರೇ ಟ್ವೀಟ್ ಮಾಡಿ, ಸಹಾಯ ಮಾಡುವಂತೆ ಜಿಲ್ಲಾಧಿಕಾರಿಗೆ ಕೇಳಿಕೊಂಡಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಕಷ್ಟು ವೈರಲ್ ಆಗಿದೆ. ಮಾಜಿ ಸಚಿವರ ಸ್ಥಿತಿಯೇ ಹೀಗಿದೆ ನೋಡಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಗಾಜಿಯಾಬಾದ್‌ನಲ್ಲಿ ಕೊರೊನಾ ಭೀಕರ ರೂಪ ತಾಳಿದೆ ಎಂಬುದಾಗಿ ಚರ್ಚೆಯಾಗುತ್ತಿದೆ.

ವಿ.ಕೆ. ಸಿಂಗ್ ಟ್ವೀಟ್‌ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ತಂಡವು ಪರಿಶೀಲನೆ ನಡೆಸಿದೆ. ಸಿಂಗ್ ಅವರು ಮತ್ತೊಬ್ಬ ವ್ಯಕ್ತಿಯ ಪರವಾಗಿ ಟ್ವೀಟ್ ಮಾಡಿದ್ದರು. ಆ ವ್ಯಕ್ತಿಯ ಸಹೋದರನಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಅಗತ್ಯವಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಎಂದು ಅವರು ಜಿಲ್ಲಾಧಿಕಾರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ಗೊಂದಲ ಮೂಡಿಸುವಂತಿತ್ತು. ಸಿಂಗ್ ಅವರ ಸ್ವಂತ ಸಹೋದರನಿಗೇ ಈ ಸಮಸ್ಯೆ ಆಗಿದೆ ಎಂಬ ಅರ್ಥ ಕೊಡುವಂತಿತ್ತು. ವಿವಾದ ಆಗುತ್ತಿದ್ದಂತೆ ಎಚ್ಚೆತ್ತ ಅವರು ಟ್ವೀಟ್ ಅಳಿಸಿ ಹಾಕಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡುವ ಟ್ವೀಟ್ ಅನ್ನೂ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು