ಶನಿವಾರ, ಮೇ 15, 2021
23 °C

Fact Check| ಬೇಕಿಂಗ್‌ ಸೋಡಾಗೆ ವೈರಾಣು ಕೊಲ್ಲುವ ಗುಣವಿದೆಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ದೇಶದ ಉದ್ದಗಲಕ್ಕೂ ಕೊರೊನಾ ಸೋಂಕಿನ ಎರಡನೇ ಅಲೆ ಅಪ್ಪಳಿಸಿ ಜನರಲ್ಲಿ ಭೀತಿ ಮೂಡಿಸಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ ಸಿಗದೆ ರೋಗಿಗಳು ಒದ್ದಾಡುತ್ತಿದ್ದಾರೆ. ಸೋಂಕು ಬರುವುದಕ್ಕಿಂತ ಮುನ್ನ ಅದನ್ನು ತಡೆಯುವುದು ಅತಿಮುಖ್ಯ. ಹೇಗೆಲ್ಲಾ ಸೋಂಕು ತಡೆಬಹುದು ಎಂಬ ಕುರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಸಿನೀರಿನಲ್ಲಿ ನಿಂಬೆಯ ಹೋಳುಗಳು ಹಾಗೂ ಬೇಕಿಂಗ್ ಸೋಡಾ ಸೇರಿಸಿ ಕುಡಿಯುವುದರಿಂದ ವೈರಾಣು ಸಾಯುತ್ತದೆ ಎಂಬ ಸಂದೇಶವೊಂದು ಎಲ್ಲೆಡೆ ಹರಿದಾಡತ್ತಿದೆ.

ಈ ಸಂದೇಶದ ಸತ್ಯಾಸತ್ಯಾತೆಯನ್ನು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಪರಿಶೀಲಿಸಿದೆ. ಬಿಸಿನೀರಿಗೆ ನಿಂಬೆ ಹೋಳು ಹಾಗೂ ಬೇಕಿಂಗ್ ಸೋಡಾ ಸೇರಿಸಿ ಕುಡಿದರೆ ವೈರಾಣು ಸಾಯುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಇದಕ್ಕೆ ಸ್ಪಷ್ಟ ಪುರಾವೆಗಳು ಲಭ್ಯವಿಲ್ಲ ಎಂದು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು