Fact Check| ಪೆಟ್ರೋಲ್ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಲಿಲ್ಲವೇ ಮೋದಿ?

ದೇಶದಲ್ಲಿ ದಿನೇ ದಿನೇ ಪೆಟ್ರೋಲ್ ದರ ಏರಿಕೆಯಾಗುತ್ತಿರುವ ವಿದ್ಯಮಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಲು ನಿರಾಕರಿಸಿದ್ದಾರಾ? ಹೌದು ಎನ್ನುತ್ತಿದೆ ಈ ವಿಡಿಯೊ. ಮಹಾರಾಷ್ಟ್ರದ ಜನರ ಜೊತೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹರಿ ಎಂಬುವರು ಪ್ರಶ್ನೆ ಕೇಳಿದ್ದಾರೆ. ಹರಿ ಅವರ ಪ್ರಶ್ನೆಗೆ ಪ್ರಧಾನಿ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ನಯವಾಗಿ ಅವರ ಪ್ರಶ್ನೆಯನ್ನು ತಿರಸ್ಕರಿಸಿದ್ದಾರೆ. ಈ ದೃಶ್ಯ ಇರುವ ವಿಡಿಯೊ ವೈರಲ್ ಆಗಿದೆ.
ಆಲ್ಟ್ ನ್ಯೂಸ್ ಈ ವಿಡಿಯೊದ ಮೂಲ ಪರೀಕ್ಷಿಸಿದೆ. ಇದು 2018ರಲ್ಲಿ ಮುದ್ರಾ ಯೋಜನೆಯ ಫಲಾನುಭವಿಗಳ ಜೊತೆ ಪ್ರಧಾನಿ ನಡೆಸಿದ್ದ ಕಾನ್ಫರೆನ್ಸ್ನ ವಿಡಿಯೊ ಎಂಬುದು ಗೊತ್ತಾಗಿದೆ. ಜೊತೆಗೆ ವಿಡಿಯೊದ ಕೆಲವು ಭಾಗಗಳನ್ನು ತಿರುಚಲಾಗಿದೆ. ಪ್ರಧಾನಿ ಕಚೇರಿ ಪ್ರಕಟಿಸಿರುವ ಮೂಲ ವಿಡಿಯೊ ಹಾಗೂ ವೈರಲ್ ಆಗಿರುವ ವಿಡಿಯೊಗಳನ್ನು ಪರಿಶೀಲನೆ ನಡೆಸಿದಾಗ ಅದನ್ನು ತಿರುಚಿರುವುದು ದೃಢಪಟ್ಟಿದೆ. ಪೆಟ್ರೋಲ್ ಬಗ್ಗೆ ಹರಿ ಅವರು ಪ್ರಸ್ತಾಪಿಸಿಲ್ಲ ಎಂಬುದು ಮೂಲ ವಿಡಿಯೊದಿಂದ ತಿಳಿದುಬಂದಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.