ಮಂಗಳವಾರ, ಸೆಪ್ಟೆಂಬರ್ 28, 2021
21 °C

ಫ್ಯಾಕ್ಟ್‌ಚೆಕ್: ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಯಿಂದ ಮುಸ್ಲಿಮರ ಓಲೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಅವರು ಮುಸ್ಲಿಮರ ಓಲೈಕೆ ಆರಂಭಿಸಿದ್ದಾರೆ. ಕೇಸರಿಯಿಂದ ಹಸಿರಿಗೆ, ಮರಾಠಿಯಿಂದ ಉರ್ದುಗೆ ಮತ್ತು ಶಿವಸೇನಾದಿಂದ...? ಎಂದು ಬಿಜೆಪಿ ವಕ್ತಾರೆ ಚಾರು ಪ್ರಜ್ಞಾ ಅವರು ಟ್ವೀಟ್ ಮಾಡಿದ್ದಾರೆ. ಹಲೋ ವರ್ಲಿ ಎಂದು ಉರ್ದುವಿನಲ್ಲಿ ಬರೆದಿರುವ ಪೋಸ್ಟರ್‌ನಲ್ಲಿ ಆದಿತ್ಯ ಅವರ ಚಿತ್ರವೂ ಇರುವ ಹೋರ್ಡಿಂಗ್‌ನ ಚಿತ್ರವನ್ನು ಅವರು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಬಿಜೆಪಿಯ ಕಾರ್ಯಕರ್ತರು ಸಾವಿರಾರು ಬಾರಿ ಹಂಚಿಕೊಂಡಿದ್ದಾರೆ. ಆದಿತ್ಯ ಠಾಕ್ರೆ ಮುಸ್ಲಿಮರೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಸಖ್ಯದ ನಂತರ ಆದಿತ್ಯ ಬದಲಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸತ್ಯವನ್ನು ತಿರುಚಿ ಆದಿತ್ಯ ಠಾಕ್ರೆ ಅವರನ್ನು ಲೇವಡಿ ಮಾಡಲಾಗುತ್ತಿದೆ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. 2019ರಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ನಮಸ್ತೆ ವರ್ಲಿ ಎಂಬ ಅರ್ಥದ ಹಲವು ಹೋರ್ಡಿಂಗ್‌ಗಳನ್ನು ಹಾಕಿದ್ದರು. ಈ ಪೋಸ್ಟರ್ ಹಾಕಿದಾಗ ಶಿವಸೇನಾ ಬಿಜೆಪಿಯ ಜತೆಗೇ ಇತ್ತು. ಉರ್ದು, ಕನ್ನಡ, ತೆಲುಗು, ಮರಾಠಿ ಭಾಷೆಗಳಲ್ಲಿ ಈ ಹೋರ್ಡಿಂಗ್‌ ಹಾಕಲಾಗಿದೆ. ಎಲ್ಲಾ ಭಾಷೆಯ ಹೋರ್ಡಿಂಗ್‌ನ ಬಣ್ಣ ಹಸಿರೇ ಆಗಿದೆ. ಆದರೆ ಉರ್ದು ಭಾಷೆಯಲ್ಲಿ ಹಾಕಲಾಗಿರುವ ಚಿತ್ರವನ್ನು ಮಾತ್ರ ಆಯ್ಕೆ ಮಾಡಿಕೊಂಡು ಈ ಟ್ವೀಟ್ ಮಾಡಲಾಗಿದೆ. ಆದಿತ್ಯ ಠಾಕ್ರೆ ಅವರು ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಎಂದು ತೋರಿಸಲು ಯತ್ನಿಸಲಾಗಿದೆ ಎಂದು ಆಲ್ಟ್‌ನ್ಯೂಸ್ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು