Fact check: ಎಎಪಿ ಶಾಸಕನಿಗೆ ಮಹಿಳೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದರೇ?

‘ಪಂಜಾಬ್‌ನ ಮಹಿಳೆಯೊಬ್ಬರು ಎಎಪಿ ಶಾಸಕನಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಹೊಡೆದಿದ್ದಾರೆ. ಕೆಲಸ ಮಾಡದ ಎಎಪಿ ಶಾಸಕನನ್ನು ಈ ರೀತಿ ಪ್ರಶ್ನಿಸುತ್ತಿರುವ ಮಹಿಳೆಯ ಧೈರ್ಯವನ್ನು ಮೆಚ್ಚಬೇಕು. ಎಎಪಿ ಸರ್ಕಾರ ಮತ್ತು ಶಾಸಕರು ಕೆಲಸ ಮಾಡುತ್ತಿಲ್ಲ ಎಂಬುದನ್ನು ಜನರ ಈ ಆಕ್ರೋಶ ತೋರಿಸುತ್ತದೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಪೋಸ್ಟ್‌ಗಳ ಜತೆಯಲ್ಲಿ ಒಂದು ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ. ಆದರೆ, ಇದು ಸುಳ್ಳು ಸುದ್ದಿ.
‘ಇದು ಸುಳ್ಳು ಸುದ್ದಿ. ವಿಡಿಯೊದಲ್ಲಿ ಇರುವ ದೃಶ್ಯಗಳಿಗೂ, ಅದರ ಜತೆಗೆ ಪೋಸ್ಟ್‌ಗಳಲ್ಲಿ ನೀಡಲಾಗಿರುವ ವಿವರಕ್ಕೂ ಸಂಬಂಧವಿಲ್ಲ. ಪಂಜಾಬ್‌ನ ಯುಟ್ಯೂಬ್ ಚಾನೆಲ್ ‘ಲೋಕ್ ಆವಾಜ್ ಪಂಜಾಬಿ’ ನಿರ್ಮಿಸಿರುವ ಕಿರುಚಿತ್ರದ ದೃಶ್ಯಗಳಿವು. ಈ ವಿಡಿಯೊವನ್ನು ಬಳಸಿಕೊಂಡು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.