ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: 500 ರೂಪಾಯಿಯ ಎಲ್ಲ ನೋಟುಗಳೂ ಅಸಲಿಯಲ್ಲವೇ?

Last Updated 7 ಡಿಸೆಂಬರ್ 2021, 19:32 IST
ಅಕ್ಷರ ಗಾತ್ರ

ಈಗ ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟಿನ ಬಳಕೆ ಕುರಿತ ವಿಡಿಯೊವೊಂದು ಚರ್ಚೆಗೆ ಗ್ರಾಸವಾಗಿದೆ. 500 ರೂಪಾಯಿಯ ಎಲ್ಲ ನೋಟುಗಳೂ ಅಸಲಿಯಲ್ಲ ಎಂದು ತಿಳಿಸಲು ಈ ವಿಡಿಯೊ ಯತ್ನಿಸುತ್ತದೆ. ನೋಟಿನ ಒಂದು ಬದಿಯಲ್ಲಿ ಮಹಾತ್ಮಾ ಗಾಂಧೀಜಿ ಅವರ ಚಿತ್ರ ಹಾಗೂ ಆರ್‌ಬಿಐ ಗವರ್ನರ್ ಅವರ ಸಹಿಯ ನಡುವಿನ ಮಧ್ಯದ ಜಾಗದಲ್ಲಿ ಹಸಿರು ಪಟ್ಟಿಯೊಂದು ಇದೆ. ಇದರ ಮೇಲೆ ಇಂಗ್ಲಿಷ್‌ನಲ್ಲಿ ‘ಆರ್‌ಬಿಐ’ ಎಂದೂ, ಹಿಂದಿ ಭಾಷೆಯಲ್ಲಿ ‘ಭಾರತ್’ ಎಂದೂ ಮುದ್ರಿಸಲಾಗಿದೆ. ‘ಈ ಹಸಿರು ಪಟ್ಟಿಯು ಗವರ್ನರ್ ಸಹಿಯ ಸಮೀಪದಲ್ಲಿದ್ದರೆ ಅದು ಅಸಲಿ ನೋಟು. ಗಾಂಧೀಜಿ ಚಿತ್ರದ ಸಮೀಪ ಇದ್ದರೆ ಅದು ನಕಲಿ ನೋಟು’ ಎಂಬುದಾಗಿ ವಿಡಿಯೊದಲ್ಲಿ ವಿವರಿಸಲಾಗಿದೆ.

ಗಾಂಧೀಜಿ ಚಿತ್ರದ ಸಮೀಪ ಹಸಿರುಪಟ್ಟಿ ಹೊಂದಿರುವ ₹500 ಮುಖಬೆಲೆಯ ನೋಟುಗಳು ಚಲಾವಣೆಗೆ ಯೋಗ್ಯವಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ‘ಎರಡೂ ರೀತಿಯ ನೋಟುಗಳು ಚಲಾವಣೆಗೆ ಅರ್ಹವಾಗಿವೆ. ದಾರಿ ತಪ್ಪಿಸುವಂತಹ ಇಂತಹ ವಿಡಿಯೊಗಳ ಬಗ್ಗೆ ಎಚ್ಚರಿಕೆಯಿಂದ ಇರಿ’ ಎಂದು ಪಿಐಬಿ ಫ್ಯಾಕ್ಟ್‌ ಚೆಕ್ ಜನರಿಗೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT