ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್ | ಸ್ವಿಟ್ಜರ್ಲೆಂಡ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ: ಯಾಕೆ?

Last Updated 22 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸ್ವಿಟ್ಜರ್ಲೆಂಡ್‌ನ ಮೌಟರ್‌ಹಾರ್ನ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜವನ್ನು ಬೆಳಕಿನ ಮೂಲಕ ಇತ್ತೀಚೆಗೆ ಚಿತ್ರಿಸಲಾಗಿತ್ತು. ಎಚ್‌ಸಿಕ್ಯೂ ಮಾತ್ರೆಗಳನ್ನುಸ್ವಿಟ್ಜರ್ಲೆಂಡ್‌ಗೆ ಪೂರೈಸಿದ ಭಾರತವನ್ನು ಈ ಮೂಲಕ ಗೌರವಿಸಲಾಗಿದೆ ಎಂದು ಸುದ್ದಿಯಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಇದು ಭಾರಿ ಸದ್ದು ಮಾಡಿತ್ತು.

ಪರ್ವತದ ಮೇಲೆ ಸ್ವಿಸ್ ಸರ್ಕಾರವು ತಿರಂಗಾ ಮೂಡಿಸಿದ್ದು ನಿಜ. ಆದರೆ ಎಚ್‌ಸಿಕ್ಯೂ ಮಾತ್ರೆಗಳನ್ನು ಪೂರೈಸಿದಕ್ಕೆ ಗೌರವಾರ್ಥವಾಗಿ ಹೀಗೆ ಮಾಡಲಾಗಿದೆ ಎಂಬ ಉಲ್ಲೇಖ ಸುಳ್ಳು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಭಾರತವೂ ಸೇರಿದಂತೆ ಹತ್ತಾರು ದೇಶಗಳ ರಾಷ್ಟ್ರ ಧ್ವಜಗಳನ್ನು ಬೆಳಕಿನಲ್ಲಿ ಮೂಡಿಸಲಾಗಿದೆ.

ಚೀನಾ, ಅಮೆರಿಕ, ಜಪಾನ್, ಜರ್ಮನಿ, ಸ್ಪೇನ್, ಬ್ರಿಟನ್, ಫ್ರಾನ್ಸ್, ಜರ್ಮನಿ ಈ ಪಟ್ಟಿಯಲ್ಲಿವೆ. ಮೌಟರ್‌ಹಾರ್ನ್‌ ಪ್ರವಾಸೋದ್ಯಮ ವೆಬ್‌ಸೈಟ್ ಪ್ರಕಾರ, ಭಾರತವಷ್ಟೇ ಅಲ್ಲದೆ, ಜಗತ್ತಿನ ವಿವಿಧ ದೇಶಗಳ ಹೋರಾಟಕ್ಕೆ ಈ ಮೂಲಕ ಬೆಂಬಲ ಸೂಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.ಅಲ್ಲಿನ ಭಾರತದ ರಾಯಭಾರ ಕಚೇರಿ ಸಹ ಇದೇ ಅರ್ಥದಲ್ಲಿ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT