ಇದೇ 6ರಂದು ದೆಹಲಿಯಲ್ಲಿ ನೂರಾರು ದಲಿತರು ಬೌದ್ಧ ಧರ್ಮ ದೀಕ್ಷೆ ಪಡೆದ ಸುದ್ದಿಯ ಬೆನ್ನಲ್ಲೇ, ರಾಜಸ್ಥಾನದ ಜೈಪುರದಲ್ಲಿ ಸಾಮೂಹಿಕ ಮತಾಂತರ ಕಾರ್ಯಕ್ರಮ ನಡೆದಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಬೃಹತ್ ಸಂಖ್ಯೆಯ ಜನರು ಸೇರಿರುವ ಎರಡು ಚಿತ್ರಗಳು ವೈರಲ್ ಆಗಿವೆ. ‘ಅ.16ರಂದು ನಡೆದ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಜನರು ಬೌದ್ಧ ಧರ್ಮದ ದೀಕ್ಷೆ ಪಡೆದಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಸುಳ್ಳು ಸುದ್ದಿ.
ಈ ಚಿತ್ರಗಳು ಜೈಪುರಕ್ಕೆ ಸಂಬಂಧಿದವಲ್ಲ ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ಅ.15ರಂದು ಮಹಾರಾಷ್ಟ್ರದ ಪುಣೆಯಲ್ಲಿ ಬೌದ್ಧ ಮಹಾಸಭಾ ಆಯೋಜಿಸಿದ್ದ ‘ಧಮ್ಮ ಮೇಳ’ ಕಾರ್ಯಕ್ರಮದಲ್ಲಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಈ ಕಾರ್ಯಕ್ರಮದಲ್ಲಿ ಮತಾಂತರ ನಡೆದಿದೆ ಎಂಬುದನ್ನು ಪುಷ್ಠೀಕರಿಸುವ ಯಾವುದೇ ವರದಿಗಳು ಪ್ರಕಟವಾಗಿಲ್ಲ. ಅಂಬೇಡ್ಕರ್ ಅವರ ವಂಶಸ್ಥ ಪ್ರಕಾಶ್ ಅಂಬೇಡ್ಕರ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದರು. ಇಲ್ಲಿನ ಚಿತ್ರಗಳನ್ನು ಜೈಪುರದ ಮತಾಂತರ ಕಾರ್ಯಕ್ರಮದ ಚಿತ್ರಗಳು ಎಂಬುದಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.