ಗುರುವಾರ , ಮಾರ್ಚ್ 30, 2023
23 °C

ಫ್ಯಾಕ್ಟ್‌ ಚೆಕ್‌: ಟ್ಯಾಕ್ಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಜಿ–20 ಸಮ್ಮೇಳನದಲ್ಲಿ ಭಾಗವಹಿಸಲು ಇಟಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಅವಮಾನವಾಗಿದೆ ಎಂಬ ವಿಚಾರ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೋದಿ ಅವರನ್ನು ‘ಟ್ಯಾಕ್ಸಿ’ಯಲ್ಲಿ ಕಳುಹಿಸಿ ಅವಮಾನಿಸಲಾಗಿದೆ ಎಂಬ ವರದಿ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ‘ಟ್ಯಾಕ್ಸಿ’ ಎಂಬ ಫಲಕವಿರುವ ಕಾರನ್ನು ಮೋದಿ ಅವರು ಹತ್ತುತ್ತಿರುವ ಫೋಟೊವನ್ನು ಲಗತ್ತಿಸಲಾಗಿದೆ. ಅ.30ರಂದು ವ್ಯಾಟಿಕನ್‌ ನಗರದಲ್ಲಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಮೋದಿ ಭೇಟಿ ಆದ ಬಳಿಕ ಈ ಫೋಟೊ ಹೊರಬಿದ್ದಿದೆ.

ವೈರಲ್‌ ಆಗುತ್ತಿರುವ ಈ ಫೋಟೊಗಳು ತಿರುಚಲಾಗಿರುವ ಫೋಟೊಗಳು ಎಂದು ಇಂಡಿಯಾ ಟುಡೆ ಫೇಕ್‌ ನ್ಯೂಸ್‌ ವಾರ್‌ ರೂಮ್‌ ವರದಿ ಮಾಡಿದೆ. ಮೋದಿ ಅವರು ಪೋಪ್‌ ಅವರನ್ನು ಭೇಟಿಯಾಗುತ್ತಿದ್ದಂತೆ ಎಎನ್‌ಐ ಸುದ್ದಿ ಸಂಸ್ಥೆ ಈ ಕುರಿತು ವರದಿ ಮಾಡಿತ್ತು. ಅ.30ರಂದು ಮಧ್ಯಾಹ್ನ 1:30ಕ್ಕೆ ಈ ಕುರಿತು ಅಸಲಿ ಫೋಟೊವನ್ನು ಎಎನ್‌ಐ ಟ್ವೀಟ್‌ ಮಾಡಿತ್ತು. ಜೊತೆಗೆ ತನ್ನ ಯುಟ್ಯೂಬ್‌ ಚಾನಲ್‌ನಲ್ಲಿ ವಿಡಿಯೊವನ್ನೂ ಪೋಸ್ಟ್‌ ಮಾಡಿತ್ತು. ಆ ಫೋಟೊ ಮತ್ತು ವಿಡಿಯೊಗಳಲ್ಲಿ ಇರುವ ಕಾರ್‌ ಮೇಲೆ ‘ಟ್ಯಾಕ್ಸಿ’ ಎಂಬ ಫಲಕ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು