ಭಾನುವಾರ, ಜೂನ್ 13, 2021
21 °C

ಫ್ಯಾಕ್ಟ್‌ಚೆಕ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಆತನ ಕುಟುಂಬದವರು ಶವದ ಬಳಿ ರೋಧಿಸುತ್ತಿದ್ದಾರೆ ಎಂದು ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿಯ ಹಲವು ನಾಯಕರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಆದರೆ ಸುಳ್ಳುಸುದ್ದಿ ಎಂದು ಫ್ಯಾಕ್ಟ್‌ಹಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಕೋವಿಡ್‌ ತಗುಲಿದ್ದ ಕುಟುಂಬವನ್ನು ಊರಿನಿಂದ ಹೊರಗೆ ಗುಡಿಸಿಲಿನಲ್ಲಿ ಇರಿಸಲಾಗಿತ್ತು. ತೀವ್ರ ಉಸಿರಾಟದಿಂದ ಒದ್ದಾಡುತ್ತಿದ್ದ ವ್ಯಕ್ತಿಗೆ ಆತನ ಮಗಳು ನೀರು ಕುಡಿಸಲು ಯತ್ನಿಸುತ್ತಿರುವ ವಿಡಿಯೊವನ್ನು ಪಶ್ಚಿಮ ಬಂಗಾಳದ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ಹಂಟ್ ಹೇಳಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು