ಶುಕ್ರವಾರ, ಮೇ 27, 2022
28 °C

ಫ್ಯಾಕ್ಟ್ ಚೆಕ್: ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಕ್ತಿಯೊಬ್ಬನನ್ನು ಗುಂಪೊಂದು ಮನಬಂದಂತೆ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಥಳಿತಕ್ಕೊಳಗಾದ ವ್ಯಕ್ತಿಯ ದೇಹದ ಹಲವು ಭಾಗಗಳಿಂದ ರಕ್ತ ಸುರಿಯುತ್ತಿದ್ದರೂ ಗುಂಪು ಆತನನ್ನು ಥಳಿಸುವುದನ್ನು ಮುಂದುವರಿಸುತ್ತದೆ. ‘ರಾಜಸ್ಥಾನದ ಜೋಧ್‌ಪುರದಲ್ಲಿ ಈದ್‌ ಹಬ್ಬದ ಸಮಯದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದ ದೃಶ್ಯ ಇದು. ಹಿಂದೂ ವ್ಯಕ್ತಿಯನ್ನು ಮುಸ್ಲಿಮರು ಹೊಡೆದು ಕೊಂದಿದ್ದಾರೆ. ಮುಸ್ಲಿಮರು ಹಿಂದೂಗಳನ್ನು ಕೊಲ್ಲಲಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಇಂಟರ್‌ನೆಟ್‌ ಅನ್ನು ಸ್ಥಗಿತಗೊಳಿಸಿದ್ದಾರೆ’ ಎಂಬ ವಿವರವನ್ನು ವಿಡಿಯೊಗೆ ನೀಡಲಾಗಿದೆ.

ಈ ವಿಡಿಯೊ ಮತ್ತು ಜೋಧ್‌ಪುರದಲ್ಲಿ ನಡೆದ ಕೋಮುಗಲಭೆಗೆ ಸಂಬಂಧವಿಲ್ಲ ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ವರದಿ ಮಾಡಿದೆ. ವಿಡಿಯೊದಲ್ಲಿ ಸೆರೆ ಆಗಿರುವ ಘಟನೆ ನಡೆದಿರುವುದು ಹರಿಯಾಣದ ಯಮುನಾನಗರದ ಸಧೌರ ಪ್ರದೇಶದಲ್ಲಿ. ಕೋಮು ದ್ವೇಷದ ಕಾರಣ ಈ ಥಳಿತ ನಡೆದಿಲ್ಲ. 10ರಿಂದ 12 ಜನರ ಗುಂಪೊಂದು ಹಳೆಯ ವೈಷಮ್ಯದ ಕಾರಣಕ್ಕೆ ಲಾರಿ ಚಾಲಕ ಕಮಲ್‌ಜೀತ್‌ ಎಂಬುವವರನ್ನು ಥಳಿಸಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಇದ್ದಾನೆ. ಆದರೆ ಇದು ವೈಯಕ್ತಿಕ ಕಾರಣಕ್ಕೆ ನಡೆದ ಥಳಿತ ಎಂದು ಯಮುನಾನಗರ ಎಸ್‌ಪಿ ತಿಳಿಸಿದ್ದಾರೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು