ಶನಿವಾರ, ಜೂನ್ 19, 2021
27 °C

Fact Check | ಆನ್‌ಲೈನ್ ಪೇಮೆಂಟ್ ಮಾಡಿದರೆ ಮನೆ ಬಾಗಿಲಿಗೆ ಮದ್ಯ ಸರಬರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಪ್ಪು: ಮದ್ಯದಂಗಡಿ ಬಂದ್‌ ಆಗಿದ್ದರಿಂದ ಚಿಂತೆಯಾಗಿದೆಯೇ? ಆನ್‌ಲೈನ್ ಪೇಮೆಂಟ್ ಮಾಡಿದರೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುತ್ತೇವೆ ಎಂಬ ಒಕ್ಕಣೆಯಿರುವ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಾಟ್ಸ್‌ ಆ್ಯಪ್‌ನಲ್ಲೂ ಇಂತಹ ಸಂದೇಶಗಳು ಹರಿದಾಡಿ ಭಾರಿ ಸದ್ದು ಮಾಡಿವೆ.

ಸರಿ: ಕೊರೊನಾ ಕಾರಣವಾಗಿ ದೇಶದಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿದ್ದರಿಂದ ಮದ್ಯಪ್ರಿಯರು ಭಾರೀ ಬೇಸರ
ದಲ್ಲಿದ್ದಾರೆ. ಇವರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಹೊಡೆಯಲು ಖದೀಮರು ಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದ ನಾಗಪುರದ ವಿಳಾಸವಿದ್ದ ಈ ಮದ್ಯದಂಗಡಿಗಳು ಅಲ್ಲಿನ ಪೊಲೀಸರ ನಿದ್ದೆಗೆಡಿಸಿದ್ದವು. ಆದರೀಗ ಖದೀಮರ ಕಳ್ಳಾಟ ಬಯಲು ಮಾಡಿದ್ದಾರೆ. ಒಡಿಶಾ, ಮಹಾರಾಷ್ಟ್ರದ ಮದ್ಯದಂಗಡಿಗಳಿಗೆ ಒಂದೇ ಸಂಖ್ಯೆಯ ಪೇಮೆಂಟ್ ಲಿಂಕ್ ನೀಡಲಾಗಿದ್ದನ್ನು ಅವರು ಪತ್ತೆ ಮಾಡಿದ್ದಾರೆ. ಇವು ದಾರಿ ತಪ್ಪಿಸುವ ಸಂದೇಶಗಳಾಗಿದ್ದು, ವಂಚನೆಗೆ ಒಳಗಾಗದಿರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಈ ನಕಲಿ ಜಾಹೀರಾತುಗಳ ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರು ಟ್ವಿಟರ್‌ನಲ್ಲೂ ಲಗತ್ತಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಈ ಬಗ್ಗೆ ವರದಿಯಾಗಿದೆ. 

ತಪ್ಪು: ಕೋವಿಡ್–19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಸರ್ಕಾರವು ಪಿಂಚಣಿಯನ್ನು ಶೇ 30ರಷ್ಟು ಕಡಿತಗೊಳಿಸಲಿದೆ ಹಾಗೂ 80 ವರ್ಷ ಮೀರಿದವರಿಗೆ ಪಿಂಚಣಿ ಸ್ಥಗಿತಗೊಳಿಸಲಿದೆ
ಎಂಬ ಸುದ್ದಿ ಹರಿದಾಡಿತ್ತು. 

ಸರಿ: ಕೇಂದ್ರ ಸರ್ಕಾರದ ಪಿಐಬಿ ಈ ಸಂಬಂಧ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದೆ. ‘ಸರ್ಕಾರವು ಪಿಂಚಣಿ ಕಡಿತ ಮಾಡಲಿದೆ ಎಂಬ ಸುದ್ದಿ ನಿರಾಧಾರ. ಇದು ತಳಬುಡವಿಲ್ಲದ ಸುದ್ದಿ’ ಎಂದು ತಿಳಿಸಿದೆ. ಪಿಐಬಿ ಸ್ಪಷ್ಟನೆಗೆ ಹಲವರು ಧನ್ಯವಾದ ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು