ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: ಉರಿಯುತ್ತಿರುವ ಅಗ್ನಿಜ್ವಾಲೆಯ ಮೇಲೆ ಸಾಧು ಮಲಗಿದ ವಿಡಿಯೊ ನಿಜವೇ?

Last Updated 6 ಜನವರಿ 2022, 19:45 IST
ಅಕ್ಷರ ಗಾತ್ರ

ಕುಂಭಮೇಳದ ಸಮಯದಲ್ಲಿ 400ಕ್ಕೂ ಹೆಚ್ಚು ಸಾಧುಗಳು ತಮ್ಮನ್ನು ತಾವು ಅಗ್ನಿದೇವನಿಗೆ ಸಮರ್ಪಿಸಿಕೊಂಡರು ಎಂದು ಹೇಳಲಾಗುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಬಿಬಿಸಿ ಸುದ್ದಿವಾಹಿನಿ ಚಿತ್ರೀಕರಿಸಿದೆ. ಉರಿಯುತ್ತಿರುವ ಅಗ್ನಿಜ್ವಾಲೆಯ ಮೇಲೆಸಾಧುವೊಬ್ಬರು ಮಲಗಿರುವ ದೃಶ್ಯ ಈ ವಿಡಿಯೊದಲ್ಲಿದೆ. ಕುಂಭಸ್ನಾನಕ್ಕೆ ಹೋಗುವ ಮುನ್ನ ಈ ಆಚರಣೆ ನಡೆಯಿತು ಎಂದು ಹೇಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ‘ಇದು ಸನಾತನ ಧರ್ಮದ ಶಕ್ತಿ’ ಎಂದು ಉಲ್ಲೇಖಿಸಿ, ಹಲವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೊ, ಬಿಬಿಸಿ ವಾಹಿನಿಯ ‘ಎ ಫೈರ್ ಆಫ್ ಯೋಗಿ’ ಎಂಬ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ್ದು ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ ಚೆಕ್ ವೇದಿಕೆ ವರದಿ ಮಾಡಿದೆ.ನಿರ್ದೇಶಕ ಮೈಕ್ ವಾಸನ್ ಅವರು 2007ರಲ್ಲಿ ಇದನ್ನು ತಯಾರಿಸಿದ್ದರು. ಸಾಧುವೊಬ್ಬರು ಬೆಂಕಿಯ ನಡುವೆಯೂ ಉಸಿರಾಟ ನಡೆಸುವ ಅನನ್ಯ ತಂತ್ರವನ್ನು ಪ್ರದರ್ಶಿಸಿದರು ಎಂದು ಚಿತ್ರದ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 400 ಸಾಧುಗಳು ತಮ್ಮನ್ನು ತಾವು ಅಗ್ನಿಗೆ ಸಮರ್ಪಿಸಿಕೊಳ್ಳುವ ಆಚರಣೆಯಲ್ಲಿ ತೊಡಗಿದ್ದರು ಎಂಬ ಉಲ್ಲೇಖವು ಈ ಚಿತ್ರದ ಎಲ್ಲಿಯೂ ದಾಖಲಾಗಿಲ್ಲ. ನೂರಾರು ಜನ ಸಾಧುಗಳು ಈ ಆಚರಣೆಯಲ್ಲಿ ತೊಡಗಿದ್ದರು ಎಂಬುದಾಗಿ ದಾರಿತಪ್ಪಿಸಲಾಗಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT