ಸೋಮವಾರ, ಮಾರ್ಚ್ 8, 2021
22 °C

Fact Check| ದೀಪಾಲಂಕೃತ ಟ್ರ್ಯಾಕ್ಟರ್ ಜಾಥಾ ನಡೆದಿದ್ದೆಲ್ಲಿ?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ದೀಪಾಲಂಕೃತವಾಗಿ ಒಂದೊಂದಾಗಿ ಬರುತ್ತಿದ್ದ ಟ್ರ್ಯಾಕ್ಟರ್‌ಗಳ ಸಾಲನ್ನು ನೀವು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಣ್ತುಂಬಿಕೊಂಡಿರಬಹುದು. ಗಣರಾಜ್ಯೋತ್ಸವಂದು ಟ್ರ್ಯಾಕ್ಟರ್ ಜಾಥಾ ನಡೆಸಲು ಉದ್ದೇಶಿಸಿದ್ದ ರೈತರು ಅದಕ್ಕಾಗಿ ತಾಲೀಮು ನಡೆಸಿದ ಪರಿ ಇದು ಎಂದು ಬಿಂಬಿತವಾಗಿತ್ತು. ಇದು ನಿಜಕ್ಕೂ ಭಾರತದಲ್ಲಿ ನಡೆದಿದ್ದಾ?

ಅಲ್ಲ. ಇದು ಭಾರತದ ರೈತರು ಕೈಗೊಂಡ ಟ್ರ್ಯಾಕ್ಟರ್ ಪರೇಡ್‌ನ ತಾಲೀಮು ಅಲ್ಲ ಎಂದು ಲಾಜಿಕಲ್ ಇಂಡಿಯನ್ಸ್ ವೆಬ್‌ಸೈಟ್ ತಿಳಿಸಿದೆ. ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸದಾಗ ಡಿಸೆಂಬರ್ 20, 2020ರಂದು ಫೇಸ್‌ಬುಕ್ ಪೇಜ್‌ನಲ್ಲಿ ಈ ವಿಡಿಯೊ ಅಪ್‌ಲೋಡ್ ಆಗಿದ್ದು, ವಿಡಿಯೊ ಐರ್ಲೆಂಡ್‌ಗೆ ಸಂಬಂಧಿಸಿದ್ದು ಎಂದು ಮೇಲ್ನೋಟಕ್ಕೆ ಕಂಡುಬಂದಿತು. ಆದರೆ ಎಎಫ್‌ಪಿ ನಡೆಸಿದ ಫ್ಯಾಕ್ಟ್ ಚೆಕ್‌ ಪ್ರಕಾರ, ಈ ವಿಡಿಯೊ ಜರ್ಮನಿಗೆ ಸಂಬಂಧಿಸಿದೆ. ಟ್ರ್ಯಾಕ್ಟರ್‌ಗಳ ನಂಬರ್ ಪ್ಲೇಟ್ ಜಮರ್ನಿಗೆ ಸಾಮ್ಯತೆ ಇದೆ. ಅಲ್ಲಿದ್ದ ಜನ ಜರ್ಮನ್ ಮಾತನಾಡುತ್ತಿದ್ದುದು ಕೇಳಿಬಂದಿದೆ. ಟ್ರ್ಯಾಕ್ಟರ್ ತಯಾರಿಕಾ ಕಂಪನಿ ಬರ್ಚಾರ್ಡ್ ಟ್ರಾನ್ಸ್‌ಪೋರ್ಟ್ ಜಮರ್ನಿಯಲ್ಲಿ ವಾಹನ ಉತ್ಪಾದನೆ ಮಾಡುತ್ತಿದೆ. ಮಕ್ಕಳ ಕ್ಯಾನ್ಸರ್ ಚಾರಿಟಿಗಾಗಿ ಡಿಸೆಂಬರ್ 6, 2020ರಂದು ಹ್ಯಾಂಬರ್ಗ್-ಎಪೆಂಡಾರ್ಡ್ ಎಂಬಲ್ಲಿ ನಡೆದ ರ‍್ಯಾಲಿಯಿದು ಎಂಬುದು ಖಚಿತಪಟ್ಟಿದೆ. ಇದಕ್ಕೂ ಭಾರತದ ರೈತರ ಟ್ರ್ಯಾಕ್ಟರ್ ರ‍್ಯಾಲಿಗೂ ಸಂಬಂಧವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು