ಗುರುವಾರ , ಜೂನ್ 4, 2020
27 °C

ಭಾರತಕ್ಕೆ ಕೋವಿಡ್ ಲಸಿಕೆ ಭರವಸೆ ಸುಳ್ಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೋವಿಡ್–19ಗೆ ಕಂಡುಹಿಡಿಯಲಿರುವ ಲಸಿಕೆಯನ್ನು ಶೀಘ್ರವೇ ಭಾರತಕ್ಕೆ ನೀಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಮಲೇರಿಯಾ ನಿರೋಧಕ ಮಾತ್ರೆಗಳನ್ನು ಅಮೆರಿಕಕ್ಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ ನಂತರ ಅಮೆರಿಕ ಹೀಗೆ ಹೇಳಿದೆ’ ಎಂದು ಇಂಡಿಯಾ ಟುಡೆ ಪತ್ರಕರ್ತ ರಾಹುಲ್ ಕನ್ವಾಲ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ ಫಾಕ್ಸ್ ನ್ಯೂಸ್‌ಗೆ ನೀಡಿರುವ 38 ನಿಮಿಷಗಳ ದೂರವಾಣಿ ಸಂದರ್ಶನದಲ್ಲಿ, ಟ್ರಂಪ್ ಅವರು ಎಲ್ಲಿಯೂ ಹೀಗೆ ಹೇಳಿಲ್ಲ. ಬದಲಿಗೆ, ‘ಭಾರತದಿಂದ ಸಾಕಷ್ಟು ಔಷಧ ಪಡೆದಿದ್ದೇವೆ. ಲಸಿಕೆಯ ಪ್ರಯೋಗ ನಡೆಯುತ್ತಿದೆ. ಆದರೆ, ಮಲೇರಿಯಾ ನಿರೋಧಕ ಮಾತ್ರೆಗಳನ್ನು ಹಲವು ದಶಕಗಳಿಂದ ಬಳಸಲಾಗುತ್ತಿದೆ. ಹೀಗಾಗಿ ಈ ಮಾತ್ರೆಗಳ ಮೊರೆ ಹೋಗಲಾಗಿದೆ’ ಎಂದಷ್ಟೇ ಟ್ರಂಪ್ ಹೇಳಿದ್ದಾರೆ. 

ಸುಳ್ಳುಸುದ್ದಿಯನ್ನು ನಮಗೆ ಕಳುಹಿಸಬೇಕಾದ ವಾಟ್ಸ್‌ಆ್ಯಪ್‌ ಸಂಖ್ಯೆ: 9606038256 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು