ಗುರುವಾರ , ಮೇ 13, 2021
18 °C

ಫ್ಯಾಕ್ಟ್‌ಚೆಕ್: ಕೋವಿಡ್‌ನಿಂದ ಆಗುತ್ತಿರುವ ಸಾವುನೋವಿಗೂ, 5ಜಿಗೂ ಸಂಬಂಧವಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲಿ ಎರಡನೇ ಅಲೆಯ ರೂಪದಲ್ಲಿ ಅಪ್ಪಳಿಸಿ ಅಪಾರ ಸಾವುನೋವಿಗೆ ಕಾರಣವಾಗಿರುವುದು ಕೋವಿಡ್ ಅಲ್ಲ. ಬದಲಾಗಿ, 5ಜಿ ನಿಸ್ತಂತು ದೂರವಾಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವೇ ಈ ಅವಘಡಕ್ಕೆ ಕಾರಣ ಎಂಬ ಸಂದೇಶವೊಂದು ಹರಿದಾಡುತ್ತಿದೆ. 4ಜಿ ತರಂಗಾಂತರಗಳ ಬಿಡುಗಡೆಯಿಂದ ಪಕ್ಷಿಗಳು ಮೃತಪಟ್ಟಿದ್ದು ಇದೇ ಕಾರಣಕ್ಕೆ. ಹೀಗಾಗಿ ದೇಶದಲ್ಲಿ 5ಜಿ ಪರೀಕ್ಷೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ದೇಶದಲ್ಲಿ 5ಜಿ ವ್ಯವಸ್ಥೆ ಇನ್ನೂ ಶೈಶವಾವಸ್ಥೆಯಲ್ಲಿದೆ. ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮದೇ ಸಂಶೋಧನೆ ಮೂಲಕ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯತ್ನದಲ್ಲಿವೆ. ಈಗಾಗಲೇ 5ಜಿ ಜಾರಿಯಲ್ಲಿರುವ ದಕ್ಷಿಣ ಕೊರಿಯಾ ಮತ್ತು ಹಾಂಗ್‌ಕಾಂಗ್‌ನಲ್ಲಿ ಕೋವಿಡ್ ಪ್ರಮಾಣ ತೀರಾ ಕಡಿಮೆಯಿದೆ. ಹೀಗಾಗಿ ಸಾವುನೋವಿಗೂ 5ಜಿಗೂ ಸಂಬಂಧವಿಲ್ಲ ಎಂದು ಆಲ್ಟ್ ನ್ಯೂಸ್ ತಿಳಿಸಿದೆ. ಕೊರೊನಾ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಅಮೆರಿಕದ ಸಿಡಿಸಿ ತಿಳಿಸಿದೆ. 5ಜಿಯಿಂದ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ತಿಳಿಸಿತ್ತು. ಕೋವಿಡ್ ವೇಳೆ ಇಂತಹ ಸಂದೇಶಗಳ ಸತ್ಯಾಸತ್ಯತೆ ಪರಿಶೀಲಿಸದೇ ನಂಬಬೇಡಿ ಎಂದು ಪಿಐಬಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು