ಭಾನುವಾರ, ಜೂನ್ 13, 2021
25 °C

Factcheck: ಯುವತಿಯರು ಋತುಸ್ರಾವಕ್ಕೆ ಐದು ದಿನ ಮೊದಲು ಲಸಿಕೆ ಹಾಕಿಸಿಕೊಳ್ಳಬಾರದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್‌-19 ಲಸಿಕೆ ನೀಡುವ ಕಾರ್ಯಕ್ರಮ ಮೇ 1ರಿಂದ ಆರಂಭವಾಗಲಿದೆ. ಆದರೆ ಯುವತಿಯರು ಕೋವಿಡ್‌ ಲಸಿಕೆ ಪಡೆದುಕೊಳ್ಳುವ ಮೊದಲು ಎಚ್ಚರ ವಹಿಸಬೇಕು. ಋತುಸ್ರಾವಕ್ಕೆ ಐದು ದಿನ ಮೊದಲು ಮತ್ತು ನಂತರದ ಐದು ದಿನದವರೆಗೂ ಲಸಿಕೆ ಹಾಕಿಸಿಕೊಳ್ಳಬಾರದು. ಈ ಅವಧಿಯಲ್ಲಿ ಲಸಿಕೆ ಪಡೆದುಕೊಂಡರೆ, ರಕ್ತಸ್ರಾವವಾಗುವ ಕಾರಣ ಲಸಿಕೆಯಿಂದ ಕೋವಿಡ್‌ ಪ್ರತಿರೋಧಕ ಶಕ್ತಿ ಅಭಿವೃದ್ಧಿಯಾಗುವುದಿಲ್ಲ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡ ಭಾಷೆಯಲ್ಲಿಯೂ ಇಂತಹ ಪೋಸ್ಟರ್‌ಗಳು ಇವೆ.

ಇದು ಸುಳ್ಳು ಮಾಹಿತಿ ಎಂದು ಹಲವು ಫ್ಯಾಕ್ಟ್‌ಚೆಕ್ ವೇದಿಕೆಗಳು ಹೇಳಿವೆ. ಲಸಿಕೆ ಪಡೆದುಕೊಳ್ಳುವುದರ ಬಗ್ಗೆ ಆರೋಗ್ಯ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ‘ವದಂತಿಗಳಿಗೆ ಕಿವಿಕೊಡಬೇಡಿ. ಋತುಸ್ರಾವದ ಅವಧಿಯಲ್ಲಿ, ಆ ಅವಧಿಯ ಹಿಂದೆ ಅಥವಾ ಮುಂದೆ ಲಸಿಕೆ ಹಾಕಿಸಿಕೊಳ್ಳಬಾರದು ಎಂದು ಎಲ್ಲಿಯೂ ಹೇಳಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬಹುದು. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ’ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು