ನಾಸಾ ಉದ್ಯೋಗಿಗಳಲ್ಲಿ ಶೇ 58ರಷ್ಟು ಭಾರತೀಯರು, ಈ ಸಂದೇಶ ನಿಜವೇ?

ಗುರುವಾರ , ಜೂಲೈ 18, 2019
23 °C
ಫ್ಯಾಕ್ಟ್‌ಚೆಕ್

ನಾಸಾ ಉದ್ಯೋಗಿಗಳಲ್ಲಿ ಶೇ 58ರಷ್ಟು ಭಾರತೀಯರು, ಈ ಸಂದೇಶ ನಿಜವೇ?

Published:
Updated:

ಬೆಂಗಳೂರು: ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾದ ಉದ್ಯೋಗಿಗಳ ಪೈಕಿ ಶೇ 58ರಷ್ಟು ಮಂದಿ ಭಾರತೀಯರು ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದೆ. ಹಲವು ಪ್ರಮುಖ ಕಂಪನಿಗಳ ಸಿಇಒಗಳು (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಭಾರತೀಯರು ಎಂಬ ಸಂದೇಶದಲ್ಲಿರುವ ಪಟ್ಟಿಯಲ್ಲಿ ನಾಸಾ ಉದ್ಯೋಗಿಗಳ ಕುರಿತಾದ ವಿಚಾರವೂ ಇದೆ.

 

ಈ ಸಂದೇಶವನ್ನು ಫೇಸ್‌ಬುಕ್‌, ಟ್ವಿಟರ್‌ನಲ್ಲಿಯೂ ಅನೇಕರು ಹಂಚಿಕೊಂಡಿದ್ದಾರೆ.

ನಿಜವಲ್ಲ...

ನಾಸಾದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಏಷ್ಯನ್ ಅಮೆರಿಕನ್ನರ (ಭಾರತೀಯರೂ ಸೇರಿ) ಸಂಖ್ಯೆ ಶೇ 7ರಷ್ಟಿದೆ.

ವೈವಿಧ್ಯಮಯ ಹಿನ್ನೆಲೆಯುಳ್ಳ ಸುಮಾರು 17,000 ಮಂದಿ ನಾಸಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಶೇ 72ರಷ್ಟು ಬಿಳಿಯರು, ಶೇ 12ರಷ್ಟು ಕಪ್ಪು ವರ್ಣೀಯರು ಅಥವಾ ಆಫ್ರಿಕನ್ ಅಮೆರಿಕನ್ನರು, ಶೇ 7ರಷ್ಟು ಏಷ್ಯನ್ ಅಮೆರಿಕನ್ನರು, ಶೇ 8ರಷ್ಟು ಸ್ಪ್ಯಾನಿಷ್ ಭಾಷಿಗರು, ಶೇ 1ರಷ್ಟು ಅಮೆರಿಕನ್ ಇಂಡಿಯನ್ಸ್‌ ಮತ್ತು ಶೇ 1ಕ್ಕಿಂತಲೂ ಕಡಿಮೆ ಅಲಾಸ್ಕಾ ನಿವಾಸಿಗಳಿದ್ದಾರೆ ಎಂದು ನಾಸಾ ವೆಬ್‌ಸೈಟ್ ಉಲ್ಲೇಖಿಸಿ ಆಲ್ಟ್‌ನ್ಯೂಸ್ ಜಾಲತಾಣ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ನಾಸಾದಲ್ಲಿ ಉದ್ಯೋಗ ನೀಡುವಾಗ ಅಮೆರಿಕದ ನಾಗರಿಕರಿಗೇ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ನಿಯಮವೂ ಅಸ್ತಿತ್ವದಲ್ಲಿದೆ ಎಂಬುದು ಗಮನಾರ್ಹ.


ವಿದೇಶೀಯರಿಗೆ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿ ನಾಸಾ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾ

ಸಿಇಒಗಳು ಭಾರತದ ನಾಗರಿಕರೇ ಅಥವಾ ಭಾರತ ಮೂಲದವರೇ?

ವೈರಲ್ ಆದ ಸಂದೇಶಗಳಲ್ಲಿ ಉಲ್ಲೇಖಿಸಿರುವ, ಪ್ರಮುಖ ಕಂಪನಿಗಳ ಸಿಇಒಗಳು ಭಾರತದ ನಾಗರಿಕರೇ ಅಥವಾ ಭಾರತ ಮೂಲದವರೇ ಎಂಬುದು ಗಮನಿಸಬೇಕಾದ ಅಂಶ. ಗೂಗಲ್ ಸಿಇಒ ಸುಂದರ್ ಪಿಚೈ ಅಮೆರಿಕದ ನಾಗರಿಕರಾಗಿದ್ದು, ಭಾರತ ಮೂಲದವರಷ್ಟೆ. ನೋಕಿಯಾ ಸಿಇಒ ರಾಜೀವ್ ಸೂರಿ ಸಿಂಗಾಪುರದವರು. ಅಡೋಬ್ ಸಿಇಒ ಶಂತನು ನಾರಾಯಣ್, ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಳ್ಲ ಸಹ ಅಮೆರಿಕದ ನಾಗರಿಕರು. ಅಮೆಜಾನ್‌ ಸಿಇಒ ಜೆಫ್ ಬೆಜೋಸ್ ಅಮೆರಿಕದ ನಾಗರಿಕರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 39

  Happy
 • 4

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !