ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕ ಗೆದ್ದ ಶ್ರೇಯ ಪ್ರಧಾನಿಗಾ ಅಥವಾ ರೈತರಿಗಾ? ನೀರಜ್ ಜೋಪ್ರಾ ಟ್ವೀಟ್ ವೈರಲ್

Last Updated 11 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ. ಪದಕ ಗೆದ್ದ ಶ್ರೇಯವನ್ನು ರೈತರಿಗೆ ಅರ್ಪಿಸಿ ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ‘ನಾನು ಮತ್ತು ನನ್ನ ತರಬೇತುದಾರರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಪ್ರಧಾನಿಗೆ ಸುಮ್ಮನೆ ಇದರ ಶ್ರೇಯ ಕೊಡಬೇಡಿ’ ಎಂದು ಉಲ್ಲೇಖಿಸಲಾಗಿದೆ. ‘ಪ್ರಧಾನಿ ಅವರು ಏನೇ ಒಳ್ಳೆಯದಾದರೂ ತಮ್ಮಿಂದ ಎನ್ನುತ್ತಾರೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ರೈತರ ಮಗನಾಗಿರುವ ನೀರಜ್ ಅವರು ರೈತರಿಗೆ ಗೌರವ ಸಲ್ಲಿಸಿದ್ದು, ರೈತರ ಪ್ರತಿಭಟನೆಗೆ ಈ ಮೂಲಕ ಬೆಂಬಲ ಸೂಚಿಸಿದ್ದಾರೆ ಎಂಬ ಅರ್ಥದ ಚರ್ಚೆಗಳು ನಡೆಯುತ್ತಿವೆ.

2020ರ ಡಿಸೆಂಬರ್‌ನಲ್ಲಿ ಸೃಷ್ಟಿಯಾಗಿರುವ ನೀರಜ್ ಚೋಪ್ರಾ ಹೆಸರಿನ ಖಾತೆಯೊಂದಕ್ಕೆ (@neeraj_chopra_) ಕೇವಲ 24 ಸಾವಿರ ಫಾಲೋವರ್ಸ್ ಇದ್ದು, ಇದುವರೆಗೆ ಎರಡೇ ಟ್ವೀಟ್ ಮಾಡಲಾಗಿದೆ. ಆದರೆ 2017ರಲ್ಲಿ ರಚನೆಯಾದ @Neeraj_chopra1 ಎಂಬ ಹೆಸರಿನ ಖಾತೆ ನೀರಜ್ ಚೋಪ್ರಾ ಅವರದ್ದು ಎಂದು ಟ್ವಿಟರ್ ದೃಢಪಡಿಸಿದೆ. ಮೋದಿ, ರೈತರ ಹೆಸರನ್ನು ಪ್ರಸ್ತಾಪ ಮಾಡಿರುವ ಯಾವುದೇ ಟ್ವೀಟ್ ಈ ಎರಡೂ ಖಾತೆಗಳಲ್ಲಿ ಲಭ್ಯವಾಗಿಲ್ಲ. ಹೀಗಾಗಿ ವೈರಲ್ ಆಗಿರುವ ಟ್ವೀಟ್ ನಕಲಿ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT