ಶನಿವಾರ, ಸೆಪ್ಟೆಂಬರ್ 18, 2021
28 °C

Fact Check| ಟಿಪ್ಪು ಜೀವನಾಧಾರಿತ ಚಿತ್ರ ಮಾಡುತ್ತಿದ್ದಾರಾ ಶಾರೂಕ್‌‌ ಖಾನ್‌ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜೀವನ ಸಿನಿಮಾ ಆಗುತ್ತಿದೆ. ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್ ಅವರು ಟಿಪ್ಪು ಪಾ‌ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೇ ಇದಕ್ಕೆ ಹಣ ಹೂಡಿದ್ದಾರೆ. ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಯುದ್ಧವೇಷಧಾರಿ ರಾಜನ ಪೋಷಾಕಿನಲ್ಲಿ ಅವರನ್ನು ತೋರಿಸಲಾಗಿದೆ. ಟ್ರೇಲರ್‌ ಕೂಡಾ ಬಿಡುಗಡೆಯಾಗಿದೆ. ಹಿಂದೂ ವಿರೋಧಿಯಾದ ಟಿಪ್ಪುವನ್ನು ಸಿನಿಮಾದ ಮೂಲಕ ವೈಭವೀಕರಿಸುವುದನ್ನು ಹಲವರು ಟೀಕಿಸಿದ್ದಾರೆ. ಸಿನಿಮಾಕ್ಕೆ ಬಹಿಷ್ಕಾರ ಹಾಗಬೇಕು ಎಂಬ ಕೂಗು ಎದ್ದಿದೆ.

ಟಿಪ್ಪು ಹೆಸರಿನಲ್ಲಿ ಶಾರುಕ್‌ ಸಿನಿಮಾ ಮಾಡುತ್ತಿರುವ ವಿಚಾರ ಸತ್ಯವಲ್ಲ ಎಂದು ಲಾಜಿಕಲ್ ಇಂಡಿಯನ್ಸ್ ತಾಣ ವರದಿ ಮಾಡಿದೆ. ಟಿಪ್ಪು ಸಿನಿಮಾ ಎಂಬುದಾಗಿ ಹರಿದಾಡುತ್ತಿರುವ ಪೋಸ್ಟರ್ ಹಾಗೂ ಟ್ರೇಲರ್ ಅನ್ನು ಶಾರುಕ್‌ ಅಭಿಮಾನಿಯೊಬ್ಬರು ಮಾಡಿದ್ದಾರೆಯೇ ಹೊರತು ಅದು ಅಧಿಕೃತ ಅಲ್ಲ. ಮೇಲಾಗಿ ವಿಡಿಯೊವನ್ನು 2018ರಲ್ಲೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿರುವ ಅಂಶ ಪತ್ತೆಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು