ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಫ್ಯಾಕ್ಟ್ ಚೆಕ್: ಆಮ್ಲಜನಕ ಕೊರತೆಯಿಂದ ಮೃತಪಟ್ಟವರು ಒಬ್ಬರೇ? ಸುದ್ದಿ ಎಷ್ಟು ಸರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಎರಡನೇ ಅಲೆಯು ದೇಶದಲ್ಲಿ ಸಾವಿರಾರು ಜನರನ್ನು ಬಲಿ ಪಡೆಯಿತು. ಅದೇ ಹೊತ್ತಿಗೆ ಎದುರಾದ ಆಮ್ಲಜನಕ ಕೊರತೆಯು ಇನ್ನಷ್ಟು ಸಾವುನೋವಿಗೆ ಕಾರಣವಾಯಿತು. ಆದರೆ ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದು ಒಬ್ಬರು ಮಾತ್ರ ಎಂದು ಸರ್ಕಾರ ತಿಳಿಸಿದೆ ಎಂದು ಇಂಗ್ಲಿಷ್ ನಿಯತಕಾಲಿಕ ಔಟ್‌ಲುಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವೆಬ್‌ಸೈಟ್ ಉಲ್ಲೇಖಿಸಿದೆ.

'ಪತ್ರಿಕೆ ಉಲ್ಲೇಖಿಸಿರುವ ಮಾಹಿತಿಯು ತಪ್ಪಾಗಿದೆ. ಆಮ್ಲಜನಕ ಕೊರತೆಯಿಂದ ಕೇವಲ ಒಂದು ಸಾವು ಸಂಭವಿಸಿದೆ ಎಂಬುದಾಗಿ ಲವ ಅಗರ್ವಾಲ್ ಅವರು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ' ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. 'ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವುಗಳ ಬಗ್ಗೆ ವರದಿ ನೀಡಿ ಎಂದು ರಾಜ್ಯಗಳಿಗೆ ಸೂಚಿಸಲಾಗಿತ್ತು. ಈವರೆಗೆ 13 ರಾಜ್ಯಗಳಷ್ಟೇ ಪ್ರತಿಕ್ರಿಯೆ ನೀಡಿವೆ. 'ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿರಬಹುದು' ಎಂದು ಪಂಜಾಬ್ ಮಾತ್ರವೇ ಹೇಳಿದೆ. ಬೇರೆ ರಾಜ್ಯಗಳು ಮಾಹಿತಿಯೇ ನೀಡಿಲ್ಲ' ಎಂದು ಲವ ಅಗರ್ವಾಲ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು