Fact Check| ಈ ಚಿತ್ರದ ಅಸಲಿಯತ್ತೇನು?

ಮಹಮ್ಮದ್ ಎಂಬ ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವೊಂದರ ಮೇಲೆ ವೃದ್ಧನೊಬ್ಬ ಮಲಗಿರುವಂತೆ ಭಾಸವಾಗುವ ಚಿತ್ರವು ಪೋಸ್ಟರ್‌ನಲ್ಲಿದೆ. ‘ಈ ಚಿತ್ರದ ಪೋಸ್ಟರ್ ಈ ರೀತಿ ಇದ್ದರೆ, ಇನ್ನು ಇಡೀ ಚಿತ್ರ ಹೇಗಿರಬಹುದು’ ಎಂದು ಪೋಸ್ಟರ್ ಹಂಚಿಕೊಳ್ಳುವಾಗ ಲೇವಡಿ ಮಾಡಲಾಗಿದೆ. ‘ಭಾರತದಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಒವೈಸಿ ಅವರು ವಿರೋಧಿಸುತ್ತಿರುವುದು ಏಕೆ’ ಎಂದು ಹಲವರು ಪ್ರಶ್ನಿಸಿದ್ದಾರೆ.
‘ಇದು ತಿರುಚಲಾದ ಚಿತ್ರ. 2015ರಲ್ಲಿ ಬಿಡುಗಡೆಯಾಗಿದ್ದ ಮಹಮ್ಮದ್ ಚಿತ್ರದ ಪೋಸ್ಟರ್ಗೆ ತಂದೆ–ಮಗಳ ಕಲಾತ್ಮಕ ಛಾಯಾಗ್ರಹಣದ ಚಿತ್ರವನ್ನು ತಿರುಚಿ, ಸೇರಿಸಲಾಗಿದೆ. ವೃದ್ಧನೊಬ್ಬ ಮಗುವಿನ ಮೇಲೆ ಅತ್ಯಾಚಾರ ಎಸಗುತ್ತಿರುವಂತೆ ಭಾಸವಾಗುವಂತೆ ಪೋಸ್ಟರ್ ಅನ್ನು ತಿರುಚಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.