ಬುಧವಾರ, ಮಾರ್ಚ್ 29, 2023
24 °C

ಫ್ಯಾಕ್ಟ್‌ ಚೆಕ್‌ | ಪ್ಯಾರಿಸ್‌: ರಸ್ತೆ ಮೇಲೆ ನಮಾಜ್‌ ಮಾಡಲು ವಾಹನ ತಡೆದರೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಕ್ಷತಾ ಜಾಕೆಟ್ ಧರಿಸಿದ್ದ ಕೆಲವು ವ್ಯಕ್ತಿಗಳು ಪ್ಯಾರಿಸ್‌ ನಗರದ ರಸ್ತೆಯೊಂದರಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಸ್ತೆ ಮೇಲೆ ನಮಾಜ್ ಮಾಡುವ ಉದ್ದೇಶದಿಂದ ವಾಹನಗಳನ್ನು ತಡೆಯುತ್ತಿದ್ದ ಅವರನ್ನು ಸ್ವಯಂಸೇವಕರು ರಸ್ತೆಬದಿಗೆ ಎಳೆದೊಯ್ದರು ಎಂದೂ ಹೇಳಲಾಗಿದೆ. ‘ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ಸರ್ಕಾರಗಳು ಮತಬ್ಯಾಂಕ್‌ ಉದ್ದೇಶದಿಂದ ಹೇಡಿಗಳಂತೆ ನಡೆದುಕೊಳ್ಳುತ್ತಿವೆ’ ಎಂದು ಮಧುಪೂರ್ಣಿಮಾ ಕಿಶ್ವಾರ್ ಎಂಬವರು ಟ್ವೀಟ್ ಮಾಡಿದ್ದಾರೆ. ಹಲವು ಜನರು ಈ ವಿಡಿಯೊವನ್ನು ಮರು ಟ್ವೀಟ್ ಮಾಡಿದ್ದಾರೆ. ಆದರೆ ಇದು ಸುಳ್ಳು.

ರಸ್ತೆ ಮೇಲೆ ನಮಾಜ್ ಮಾಡಲು ವಾಹನಗಳಿಗೆ ತಡೆ ಒಡ್ಡಲಾಯಿತು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ‘ಆಲ್ಟ್‌ ನ್ಯೂಸ್’ ವರದಿ ಮಾಡಿದೆ. ‘ಸರ್ಕಾರದ ಪರಿಸರ ನೀತಿ ವಿರೋಧಿಸಿ ಇದೇ ನ.26ರಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು’ ಎಂದು ಪ್ಯಾರಿಸ್‌ನ ‘ಮಿಡಿ ಲಿಬ್ರೆ’ ಎಂಬ ಸುದ್ದಿಮಾಧ್ಯಮ ವರದಿ ಮಾಡಿದೆ. ಪತ್ರಕರ್ತ ಕ್ಲಮೆಟ್ ಲಾನೆಟ್ ಎಂಬುವರು ವಿಡಿಯೊವನ್ನು ಟ್ವೀಟ್ ಮಾಡಿದ್ದು, ಪ್ರತಿಭಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ‘ಎಕ್ಸ್‌ಪ್ರೆಸ್’ ವೆಬ್‌ಸೈಟ್ ಕೂಡಾ ಪರಿಸರ ಕಾರ್ಯಕರ್ತರ ಪ್ರತಿಭಟನೆಯನ್ನು ವರದಿ ಮಾಡಿದೆ. ಪರಿಸರ ಸಂಬಂಧಿ ಪ್ರತಿಭಟನೆಯನ್ನೇ ನಮಾಜ್‌ ಮಾಡುವ ಯತ್ನ ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಲ್ಟ್‌ ನ್ಯೂಸ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು