‘ದೆಹಲಿಯಲ್ಲಿ ವಿಶ್ವದ ಐದು ಪ್ರಮುಖ ದೇಶಗಳ ಗುಪ್ತಚರ ಮುಖ್ಯಸ್ಥರ ಸಭೆ ನಡೆದಿದೆ. ಭಾರತದ ರಾ, ಅಮೆರಿಕದ ಸಿಐಎ, ಇಸ್ರೇಲ್ ಮೊಸ್ಸಾದ್, ರಷ್ಯಾದ ಕೆಜಿಬಿ ಮತ್ತು ಬ್ರಿಟನ್‌ನ ಐಎಂ6 ಗುಪ್ತಚರ ಸಂಘಟನೆಗಳ ಮುಖ್ಯಸ್ಥರು ಭಯೋತ್ಪಾದನೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಮೇಲುಗೈ ಸಾಧಿಸಿರುವ ಈ ವೇಳೆಯಲ್ಲಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿಮಹತ್ವದ ಸಭೆ ನಡೆಸಿದ್ದಾರೆ. ಇದು ಭಾರತದ ಸಾಮರ್ಥ್ಯ ಬಿಂಬಿಸುತ್ತದೆ’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ವಿವಿಧ ದೇಶಗಳ ಗಣ್ಯರು ಭಾಗವಹಿಸಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಈ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಗುಪ್ತಚರ ಸಂಸ್ಥೆಗಳ ಸಭೆಗೆ ಸಂಬಂಧಿಸಿದ ಚಿತ್ರವಲ್ಲ ಎಂದು ತಿಳಿದುಬಂದಿದೆ.ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೋಲಾಯ್ ಅವರ ಜತೆ ಸೆಪ್ಟೆಂಬರ್ 8ರಂದು ದೆಹಲಿಯಲ್ಲಿ ನಡೆಸಿದ ಎನ್‌ಎಸ್‌ಜಿ ಮಟ್ಟದ ಸಭೆಯ ಚಿತ್ರವಿದು. ದೇಶದ ಹಲವು ಸುದ್ದಿಸಂಸ್ಥೆಗಳು ಈ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಜಗತ್ತಿನ ಐದು ದೇಶಗಳ ಗೂಢಚರ್ಯೆ ಸಂಸ್ಥೆಗಳ ಮುಖ್ಯಸ್ಥರನ್ನು ಮೋದಿ ಅವರು ಒಟ್ಟಿಗೆ ಸೇರಿಸಿದ್ದಾರೆ ಎಂದು ತಪ್ಪಾಗಿ ಬಿಂಬಿತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.