ಸೋಮವಾರ, ಆಗಸ್ಟ್ 10, 2020
21 °C

ರಾಹುಲ್ ಗಾಂಧಿ ಅವರು ಚೀನಾ ಜತೆ ರಹಸ್ಯ ಸಭೆ ನಡೆಸಿದ್ದಾರೆ... ಹೌದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ರಾಹುಲ್ ಗಾಂಧಿ ಅವರು ಚೀನಾ ಜತೆ ರಹಸ್ಯ ಸಭೆ ನಡೆಸಿರುವುದರ ಫೋಟೊ’ ಎಂಬ ಶೀರ್ಷಿಕೆ‌‌‌‌‌ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು. ‘ಸೋನಿಯಾ ಗಾಂಧಿ ಮತ್ತು ಅವರ ಇಡೀ ಕುಟುಂಬ 2008ರಲ್ಲಿ ಚೀನಾಗೆ ಭೇಟಿ ನೀಡಿತ್ತು. 2008ರಲ್ಲಿ ಸೋನಿಯಾ ಗಾಂಧಿ ಯಾವುದೇ ಅಧಿಕಾರದಲ್ಲಿ ಇರಲಿಲ್ಲ. ಹಾಗಿದ್ದಲ್ಲಿ ಅವರು ಚೀನಾದ ಆತಿಥ್ಯ ಸ್ವೀಕರಿಸಿದ್ದು ಏಕೆ’ ಎಂದು ಮಾಳವೀಯ ಪ್ರಶ್ನಿಸಿದ್ದಾರೆ. ‘ರಾಹುಲ್ ಚೀನೀಯರ ಜತೆ ರಹಸ್ಯ ಮಾತುಕತೆ ನಡೆಸಿದ್ದಾರೆ’ ಎಂದು ಪೋಸ್ಟ್‌ಕಾರ್ಡ್ ಸಹ ಪೋಸ್ಟರ್‌ ಹಂಚಿಕೊಂಡಿದೆ.

ಆದರೆ, ಅಮಿತ್ ಮಾಳವೀಯ ಅವರು ಹಂಚಿಕೊಂಡಿರುವ ಮಾಹಿತಿ ಮತ್ತು ಚಿತ್ರಕ್ಕೆ ಸಂಬಂಧವಿಲ್ಲ. ಈ ಚಿತ್ರವನ್ನು 2017ರ ಏಪ್ರಿಲ್ 21ರಂದು ತೆಗೆಯಲಾಗಿತ್ತು. ಅಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯು ‘ಚೀನಾ ಆಹಾರ ಮೇಳ ಆಯೋಜಿಸಿತ್ತು’. ಈ ಮೇಳದಲ್ಲಿ ಕೇಂದ್ರ ಸಚಿವ ಸುರೇಶ್ ಪ್ರಭು ಸಹ ಭಾಗವಹಿಸಿ, ಭಾಷಣ ಮಾಡಿದ್ದರು. ಸೋನಿಯಾ ಗಾಂಧಿ ಅವರ ಕುಟುಂಬ ಮತ್ತು ಸುರೇಶ್ ಪ್ರಭು ಅವರು ಮೇಳದಲ್ಲಿ ಭಾಗಿಯಾಗಿರುವ ಚಿತ್ರವನ್ನು ಚೀನಾ ತನ್ನ ರಾಯಭಾರ ಕಚೇರಿಯ ಜಾಲತಾಣದಲ್ಲಿ ಪ್ರಕಟಿಸಿದೆ. ಅಮಿತ್ ಮಾಳವೀಯ ಅವರು ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ‘ದಿ ಕ್ವಿಂಟ್’ ಪ್ಯಾಕ್ಟ್‌ಚೆಕ್ ವರದಿ ಪ್ರಕಟಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು