ಸೋಮವಾರ, ಜೂಲೈ 13, 2020
22 °C

ಫ್ಯಾಕ್ಟ್ ಚೆಕ್ | ರಾಹುಲ್ ಗಾಂಧಿ ಹೆಸರಿನಲ್ಲಿ ನಕಲಿ ಟ್ವೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೂನ್ 1ರಿಂದ ಸಮ-ಬೆಸ ವಿಧಾ‌ನದಲ್ಲಿ ಶಾಲೆಗಳನ್ನು ಪುನರಾರಂಭ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶಿಕ್ಷಕರು ಒಂದು‌ ದಿನ, ವಿದ್ಯಾರ್ಥಿಗಳು ಮತ್ತೊಂದು ದಿ‌ನ ಶಾಲೆಗೆ ಹೊಗಬೇಕು ಎಂದು ಅವರ ಹೆಸರಿನ ಟ್ವೀಟ್ ಉಲ್ಲೇಖಿಸಿದೆ. ಫೇಸ್‌ಬುಕ್‌ನಲ್ಲಿ ಭಾರಿ ಚರ್ಚೆಗೆ ಒಳಗಾಗಿರುವ ಇದು, ಸಾಕಷ್ಟು ತಮಾಷೆಗೂ ಕಾರಣವಾಗಿದೆ. 

ಇದೊಂದು ನಕಲಿ ಟ್ವೀಟ್. ಇದಕ್ಕೆ ರಾಹುಲ್ ಗಾಂಧಿ ಅವರ ಹೆಸರು ಹಾಗೂ ಅವರ ಪ್ರೊಫೈಲ್ ಚಿತ್ರ ಬಳಸಿಕೊಳ್ಳಲಾಗಿದೆ. ಟ್ವೀಟ್‌ ಪರಿಶೀಲಿಸಿದಾಗ ಮೂರು ವಿಚಾರಗಳು ಸ್ಪಷ್ಟವಾಗಿವೆ. ಮೇ 22ರಂದು ರಾಹುಲ್ ಗಾಂಧಿ ಎರಡು ಟ್ವೀಟ್ ಮಾಡಿದ್ದಾರೆ. ಆದರೆ ಅವರ ಖಾತೆಯಲ್ಲಿ ಶಾಲೆ ಆರಂಭ ಕುರಿತ ಟ್ವೀಟ್ ಇಲ್ಲ. ಟ್ವೀಟ್‌ನ ಕೆಳಗಡೆ ಸಾಮಾನ್ಯವಾಗಿ ತಿಂಗಳ ಬಳಿಕ ದಿನಾಂಕ ನಮೂದಾಗುತ್ತದೆ. ಆದರೆ ಈ ನಕಲಿ ಟ್ವೀಟ್‌ನಲ್ಲಿ ದಿನಾಂಕದ ಬಳಿಕ ತಿಂಗಳು ಉಲ್ಲೇಖವಾಗಿದೆ. ನೋಕಿಯಾ ಫೋನ್ ಮೂಲಕ ಟ್ವೀಟ್ ಬರೆಯಲಾಗಿದೆ ಎಂದು ಉಲ್ಲೇಖವಾಗಿದೆ. ಆದರೆ ರಾಹುಲ್ ಅವರು ತಮ್ಮ ಎಲ್ಲ ಟ್ವೀಟ್‌ಗಳನ್ನು ಐಫೋನ್‌ನಲ್ಲಿ ಬರೆಯುತ್ತಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ, ಇದು ನಕಲಿ ಟ್ವೀಟ್ ಎಂಬುದು ಸ್ಪಷ್ಟವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು