ಶುಕ್ರವಾರ, ಜನವರಿ 27, 2023
17 °C

FACT CHECK| ಸೌದಿ ಫುಟ್ಬಾಲ್ ಆಟಗಾರರಿಗೆ ರೋಲ್ಸ್ ರಾಯ್ ಕಾರು ಉಡುಗೊರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿನಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೋಲಿಸಿದ ಸೌದಿ ಅರೇಬಿಯಾ ತಂಡಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅಪೂರ್ವ ಗೆಲುವು ತಂದಿತ್ತ ತಂಡದ ಪ್ರತಿಯೊಬ್ಬ ಸದಸ್ಯನಿಗೆ ದುಬಾರಿ ರೋಲ್ಸ್ ರಾಯ್ಸ್‌ ಕಾರನ್ನು ಉಡುಗೊರೆಯಾಗಿ ನೀಡಲು ಸೌದಿ ದೊರೆ ಸಲ್ಮಾನ್ ಅವರು ನಿರ್ಧರಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗಿದೆ. ಆದರೆ ಇದು ಸತ್ಯಕ್ಕೆ ದೂರವಾದುದು.

ಸೌದಿ ದೊರೆ ಸಲ್ಮಾನ್ ಅವರು ತಂಡದ ಸದಸ್ಯರಿಗೆ ಐಷಾರಾಮಿ ಕಾರು ನೀಡಲಿದ್ದಾರೆ ಎಂಬ ವಿಚಾರದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸೌದಿ ಫುಟ್ಬಾಲ್ ಆಟಗಾರ ಸಾಲೇಹ್ ಅಲ್ ಶೆಹರಿ ಅವರು ಕಾರಿನ ಉಡುಗೊರೆ ವಿಚಾರವನ್ನು ಅಲ್ಲಗಳೆದಿದ್ದಾರೆ. ತಂಡದ ಮ್ಯಾನೇಜರ್ ಹರ್ವ್ ರೆನಾರ್ಡ್ ಅವರೂ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ‘ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಟೂರ್ನಿಯ ಈ ಹಂತದಲ್ಲಿ ಏನನ್ನಾದರೂ ಪಡೆಯುವುದು ಸರಿಯಲ್ಲ. ನಾವು ಟೂರ್ನಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಿಗದಿಯಾಗಿರುವ ಮಹತ್ವದ ಪಂದ್ಯಗಳನ್ನು ಆಡುವತ್ತ ನಮ್ಮ ಗಮನವಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು