ಶುಕ್ರವಾರ, ಜನವರಿ 21, 2022
30 °C

ಫ್ಯಾಕ್ಟ್‌ ಚೆಕ್‌: ಶ್ರೀಲಂಕಾದಿಂದ ತಂದಿದ್ದು ಸೀತೆ ಕುಳಿತಿದ್ದ ಕಲ್ಲೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಪ್ರದೇಶದ ಕುಶಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇತ್ತೀಚೆಗೆ ಉದ್ಘಾಟನೆಯಾಯಿತು. ಶ್ರೀಲಂಕಾ ಏರ್‌ಲೈನ್ಸ್‌ನಲ್ಲಿ ಬಂದಿಳಿದ ಬೌದ್ಧ ಬಿಕ್ಕುಗಳ ನಿಯೋಗವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬರಮಾಡಿಕೊಂಡರು. ‘ಸೀತಾಮಾತೆಯು ಅಶೋಕವನದಲ್ಲಿ ಕುಳಿತಿದ್ದ ಬಂಡೆಯ ಭಾಗವನ್ನು ಬಿಕ್ಕುಗಳ ನಿಯೋಗವು ಕುಶಿನಗರಕ್ಕೆ ತಂದಿದೆ. ಅದನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 

ಶ್ರೀಲಂಕಾದಿಂದ ಬಂದ ನಿಯೋಗವು ಬುದ್ಧನಿಗೆ ಸಂಬಂಧಿಸಿದ ಪುರಾತನ ವಸ್ತುವೊಂದನ್ನು ತಂದಿದೆಯೇ ವಿನಾ, ಸೀತೆ ಕುಳಿತಿದ್ದ ಕಲ್ಲನ್ನಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ನಿಯೋಗವನ್ನು ಬರಮಾಡಿಕೊಂಡ ಚಿತ್ರವನ್ನು ಕೇಂದ್ರ ಸಂಸ್ಕೃತಿ ಸಚಿವ ಕೃಷ್ಣಾರೆಡ್ಡಿ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ‘ ಈ ವಸ್ತುವನ್ನು ಶ್ರೀಲಂಕಾದ ವಾಸ್ಕಡುವ ಶ್ರೀ ಸುಬುದ್ಧಿ ರಾಜವಿಹಾರ ದೇವಸ್ಥಾನದಿಂದ ತರಲಾಗಿದ್ದು, ಕುಶಿನಗರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ’ ಎಂದು ಪಿಐಬಿ ವರದಿ ಮಾಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು