ಬುಧವಾರ, ಜೂನ್ 3, 2020
27 °C

ಫ್ಯಾಕ್ಟ್‌ ಚೆಕ್‌ | ಕೇಂದ್ರ ಸರ್ಕಾರ ಜಿಎಸ್‌ಟಿ ಆನ್‌ಲೈನ್‌ ಪರಿಶೀಲನೆ ನಡೆಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್‌ ಕಾರಣದಿಂದ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಆನ್‌ಲೈನ್‌ ಪರಿಶೀಲನೆ ಮತ್ತು ಮರುಪಾವತಿಯನ್ನು ಆರಂಭಿಸಿದೆ. ಜಿಎಸ್‌ಟಿ ಮರುಪಾವತಿಯನ್ನು ನಿರೀಕ್ಷಿಸುತ್ತಿರುವವರು ಈ ಕೆಳಕಾಣಿಸಿದ ಲಿಂಕ್‌ ಮೂಲಕ ವಿವರ ಪಡೆಯಬಹುದು ಎಂಬ ಸಂದೇಶವೊಂದು ಮೂರು ದಿನಗಳಿಂದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಜತೆಗೆ http://Onlinefilingindia.in ಎಂಬ ಲಿಂಕ್‌ ನೀಡಲಾಗಿದೆ.

ಇದೊಂದು ವಂಚನೆಯ ಜಾಲ. ಈ ಲಿಂಕ್‌ ಅನ್ನು ಯಾರೂ ಸಂಪರ್ಕಿಸಬಾರದು. ಜಿಎಸ್‌ಟಿ ಕುರಿತ ಯಾವುದೇ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ www.cbic.gov.in ಅಥವಾ www.gst.gov.in ಅನ್ನು ಸಂಪರ್ಕಿಸಬೇಕು ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಟ್ವೀಟ್‌ ಮೂಲಕ ಮನವಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು