ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಹಿಂದೂ ದೇವಸ್ಥಾನವನ್ನು ಮಸೀದಿಯನ್ನಾಗಿ ಮಾರ್ಪಾಡು ಮಾಡಿದ್ದು ನಿಜವೇ?

Last Updated 7 ಜೂನ್ 2022, 19:30 IST
ಅಕ್ಷರ ಗಾತ್ರ

ದೇವಸ್ಥಾನದಂತೆ ಕಾಣುವ ಆದರೆ ಗುಮ್ಮಟವನ್ನು ಹೊಂದಿರುವ ಪ್ರಾಚೀನ ಕಟ್ಟಡವೊಂದರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‘ಸುಂದರವಾದ ದೇವಸ್ಥಾನ, ಅದಕ್ಕೆ ಕುರೂಪಿ ಗುಮ್ಮಟ. ಹಿಂದೂ ದೇವಸ್ಥಾನವನ್ನು ಮೊಘಲರು ಮಸೀದಿಯನ್ನಾಗಿ ಮಾರ್ಪಾಡು ಮಾಡಿದ್ದಾರೆ. ಇತಿಹಾಸಕಾರರು ಈ ಕುರಿತು ಏನಾದರೂ ಹೇಳುತ್ತಾರಾ?’ ಎಂಬ ವಿವರಣೆಯನ್ನು ಈ ಚಿತ್ರಕ್ಕೆ ನೀಡಲಾಗಿದೆ. ಬಿಜೆಪಿ ಸದಸ್ಯ ಸುರೇಂದ್ರ ಪೂನಿಯಾ ಸೇರಿ ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ಆಲ್ಟ್‌ ನ್ಯೂಸ್‌’ ವೇದಿಕೆ ವರದಿ ಮಾಡಿದೆ. ‘ಚಿತ್ರದಲ್ಲಿರುವ ದೇವಸ್ಥಾನ ಇರುವುದು ರಾಜಸ್ಥಾನದ ಚಿತ್ತೋರಗಡದ ಕೋಟೆಯಲ್ಲಿ. ಇದು ಶಿವ ದೇವಾಲಯವಾಗಿದ್ದು, ಇದನ್ನು 1277ರಲ್ಲಿ ನಿರ್ಮಿಸಲಾಗಿದೆ. ಇದರ ಹೆಸರು ‘ಶೃಂಗಾರ ಚೌರಿ’. 1448ರಲ್ಲಿ ಮೇವಾಡ ವಂಶಸ್ಥರು ಈ ದೇವಸ್ಥಾನವನ್ನು ನವೀಕರಣ ಮಾಡಿದರು’ ಎಂಬ ಮಾಹಿತಿಯು ‘ಚಿತ್ತೋರಗಡ’ ಎಂಬ ಪುಸ್ತಕದಲ್ಲಿದೆ. ಮೊಘಲರು ಈ ದೇವಸ್ಥಾನವನ್ನು ಮಸೀದಿಯನ್ನಾಗಿ ಮಾರ್ಪಾಡು ಮಾಡಿದ್ದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಆಲ್ಟ್‌ ನ್ಯೂಸ್ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT