ಮಂಗಳವಾರ, ಜನವರಿ 21, 2020
28 °C

‘ಈಸೋಟಿರ’ ಆಹಾರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆಯ 17 ಗುರಿಗಳಲ್ಲಿ ಒಂದಾದ ‘ಹಸಿವು ನಿರ್ಮೂಲನೆ’ ಎಂಬ ಮೂಲಮಂತ್ರದೊಂದಿಗೆ  ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಶನ್‌ ಆಫ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ‘ಈಸೋಟಿರ’ ಆಹಾರೋತ್ಸವವನ್ನು ಹಮ್ಮಿಕೊಂಡಿದೆ. 

ಉತ್ಸವದ ಪೂರ್ವಭೂವಿ ಕಾರ್ಯಕ್ರಮವನ್ನು ಡಿ.3ರಂದು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಫುಡ್‌ ಬ್ಲಾಗರ್‌ ನಮೀಶ್‌ ರಾಜಮನೆ ಬಂದಿದ್ದರು. ಇಲ್ಲಿ   ಕೆಲ ದೇಶಗಳ ಪ್ರಸಿದ್ಧ ಆಹಾರ ಪದಾರ್ಥ ಕೂಡ ತಯಾರಿಸಲಾಗಿತ್ತು. ಜೊತೆಗೆ ಫ್ಯಾಶನ್‌ ಷೋ, ನೃತ್ಯ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿತ್ತು. 

ಐಐಎಚ್‌ಎಂ ಸಂಸ್ಥೆ ಆಹಾರೋತ್ಸವವನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಾ ಬಂದಿದೆ. ಬೆಂಗಳೂರಲ್ಲಿ ಈವರೆಗೂ 8 ಬಾರಿ ಆಹಾರೋತ್ಸವ ಆಯೋಜಿಸಿದೆ. ವಿಶೇಷವೆಂದರೆ ಈ ಬಾರಿ ಈಸೋಟಿಯಾ ಆಹಾರೋತ್ಸವಕ್ಕೆ ಸಂಸ್ಥೆಯೂ 100ಕ್ಕಿಂತ ಹೆಚ್ಚು ಬಡಮಕ್ಕಳನೂ ಆಹ್ವಾನಿಸಿದೆ. ಮಕ್ಕಳು ತಮಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ಸವಿಯಬಹುದು.

 ಉತ್ಸವದ ವಿಶೇಷತೆಯೆಂದರೆ  ಆಹಾರ ಮತ್ತು ಬೆವರೇಜ್‌ ತಯಾರಿಸುವ ಶೆಫ್‌ ತಂಡ ಪ್ಲಾಸ್ಟಿಕ್‌ ಬಳಕೆಯನ್ನು ಸಂರ್ಪೂಣವಾಗಿ ನಿಷೇಧಿಸಿದೆ. ಈ ಆಹಾರೋತ್ಸವದಲ್ಲಿ ಇಟಾಲಿಯನ್, ಮೆಡಿಟೇರಿಯನ್‌, ಒರಿಯಂಟಲ್‌, ಫ್ರೆಂಚ್‌, ಅಮೆರಿಕಾನ್‌ ಮತ್ತು ದೇಸಿ ತ್ಯಾಜ್ಯಗಳು ಇರಲಿವೆ.

ಡಿ.13ರಂದು ವಸಂತನಗರದಲ್ಲಿರುವ ಕೊಡವ ಸಮಾಜದಲ್ಲಿ ಆಹಾರೋತ್ಸವ ನಡೆಯಲಿದ್ದು, ಪ್ರವೇಶ ಶುಲ್ಕ ₹750.  ಬೆಳಿಗ್ಗೆ 10 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು