ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡು ಒಂದು ವ್ಯಾಯಾಮಗಳು ಹತ್ತಾರು!

Last Updated 11 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಈಗ ವ್ಯಾಯಾಮಶಾಲೆಗಳು ಅಥವಾ ಜಿಮ್ನಾಶಿಯಂಗಳು ಹಲವು ಬದಲಾವಣೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸುಧಾರಿತ ಸಲಕರಣೆಗಳ ಮೂಲಕ ಜನರಿಗೆ ಕಸರತ್ತು ಮಾಡಿಸುತ್ತಿವೆ. ಅತಿ ಭಾರ ಎತ್ತುವ, ದೇಹದಾರ್ಢ್ಯಕ್ಕಿಂತ ಹೆಚ್ಚಾಗಿ ಆರೋಗ್ಯಕರ ದೇಹದ ನಿರ್ವಹಣೆಗೆ ಒತ್ತು ನೀಡುತ್ತಿವೆ. ಇದರಿಂದಾಗಿ ಹಗುರವಾದ ವ್ಯಾಯಾಮ ಸಲಕರಣೆಗಳನ್ನು ಬಳಸುತ್ತಿವೆ. ಅದರಲ್ಲಿ ಮೆಡಿಸಿನ್ ಬಾಲ್ ಬಹಳ ಜನಪ್ರಿಯ. ಜಿಮ್ನಾಷಿಯಂನಷ್ಟೇ ಅಲ್ಲ. ಮನೆಯಲ್ಲಿಯೂ ಇದನ್ನು ಬಳಸಬಹುದು. ಇದರಲ್ಲಿ ಹಲವು ಬಗೆಯ ಕಸರತ್ತುಗಳನ್ನು ಮಾಡಬಹುದು.

ಈ ಚೆಂಡು ಸಾಮಾನ್ಯವಾಗಿ 13.7 ಇಂಚು ಇರುತ್ತದೆ.ಇದು ಮೃದುವಾದ ಸ್ಪಂಜಿನಂತ ಆಂಶಗಳಿಂದ ಕೂಡಿದ್ದು, ತೆಳುವಾಗಿರುವುದರಿಂದ ಸುಲಭವಾಗಿ ಬಳಸ ಬಹುದಾಗಿದೆ. ಇದನ್ನು ತೋಳು, ಭುಜ, ಹೊಟ್ಟೆಯ ಭಾಗ, ತೊಡೆಯ ಸ್ನಾಯುಗಳು, ಕೈ, ಕಾಲು ಸೇರಿದಂತೆ ಬೆನ್ನಿನ ಭಾಗಗಳ ವ್ಯಾಯಾಮ ಮಾಡಲು ಬಳಸಿಕೊಳ್ಳಬಹುದು.

ಏನಿದು ಚೆಂಡಿನ ತರಬೇತಿ?

ಅನೇಕ ಕ್ರೀಡಾ ಪಟುಗಳು, ತರಬೇತುದಾರರು ವ್ಯಾಯಾಮಕ್ಕೆ ಬಳಸುತ್ತಿರುವ ಪ್ರಮುಖ ಸಾಧನ. ತೂಕದ ಸಾಧನಗಳನ್ನು ಎತ್ತುವ ಮುನ್ನ ವಾರ್ಮ್‌ ಆಪ್ ಮಾಡಲು ಸಹ ಇದನ್ನು ಬಳಸಲಾಗುತ್ತದೆ. ಬೇರೆ ಬೇರೆ ಅಳತೆಯ ಚೆಂಡುಗಳು ಲಭ್ಯವಿವೆ. ಅವುಗಳಿಗೆ ತಕ್ಕಂತೆ ವ್ಯಾಯಾಮಗಳೂ ಇವೆ.

ಬೆನ್ನು ನೋವಿನ ಸಮಸ್ಯೆಗೆಪರಿಹಾರ: ಬೆನ್ನು ನೋವು ನಿವಾರಣೆಗೂ ಇದು ಸಹಕಾರಿಯಾಗಿದೆ. ದಿನ ನಿತ್ಯ ಕಚೇರಿಯಲ್ಲಿ ಕುಳಿತೇ ಕೆಲಸ ಮಾಡುವವರಿಗೆ ಈ ಸಾಧನ ಹೆಚ್ಚು ಉಪಕಾರಿಯಾಗಿದೆ. ಇದರ ಮೇಲೆ ಅಂಗಾತ ಮಲಗಿ ಬ್ಯಾಲೆನ್ಸ್‌ ಮಾಡುವುದರಿಂದ ಬೆನ್ನಿನ ಭಾಗದಲ್ಲಿ ಆರಾಮದಾಯಕ ಅನುಭವ ಉಂಟಾಗುತ್ತದೆ.

ಇದನ್ನು ಬಳಸುವುದರಿಂದ ರಕ್ತದ ಒತ್ತಡ ಮತ್ತು ಮೈ, ಕೈ ನೋವು ಕಡಿಮೆಯಾಗುವುದರೊಂದಿಗೆ ಅನಾರೋಗ್ಯದ ವಿರುದ್ಧ ದೇಹವನ್ನು ಸಜ್ಜಾಗಿರಿಸಲು ಸಹಾಯ ಮಾಡುತ್ತದೆ. ರಕ್ತಪರಿಚಲನೆಯನ್ನು ಸುರಳಿತಗೊಳಿಸುವುದರಿಂದ ಎಲ್ಲ ಅಂಗಾಂಗಗಳಿಗೂ ಆಮ್ಲಜನಕ ಮತ್ತು ಪೋಷಕಾಂಶಗಳು ಲಭಿಸುವುದರಿಂದ ಹೊಸ ಚೈತನ್ಯ ಮೂಡುತ್ತದೆ.

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ: ಹೌದು. ಈ ಸಾಧನವನ್ನು ಬಳಸಿ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳ ಬಹುದಾಗಿದೆ. ಭಾರದ ವಸ್ತುಗಳನ್ನು ಎತ್ತುವಾಗ ದೇಹದಲ್ಲಿ ಉಂಟಾಗುವ ಚಲನಶೀಲತೆಯಷ್ಟೇ ಪ್ರಕ್ರಿಯೆ ಈ ಸಾಧನವನ್ನು ಬಳಸವಾಗ ಉಂಟಾಗುತ್ತದೆ. ದೇಹದಲ್ಲಿರುವ ಕೊಬ್ಬಿನ ಆಂಶವನ್ನು ವೇಗವಾಗಿ ಕರಗಿಸಲು ಸಹ ಇದು ಸಹಾಯಕವಾಗಿದೆ.

ಚೆಂಡಿನ ಮೇಲಿನ ವ್ಯಾಯಾಮಗಳನ್ನು ನುರಿತ ತರಬೇತುದಾರರಿಂದ ಕಲಿಯುವುದು ಸೂಕ್ತ. ತಪ್ಪು ಭಂಗಿಗಳನ್ನು ಮಾಡಿದರೆ ಗಾಯಗೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ಮಾರ್ಗದರ್ಶನ ಪಡೆಯುವುದು ಸೂಕ್ತ. ಒಂದೊಮ್ಮೆ ಉತ್ತಮವಾಗಿ ರೂಢಿಸಿಕೊಂಡರೆ ಆಗುವ ಲಾಭಗಳು ಆಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT