ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಹಾ... ಹೆರಳೆಕಾಯಿ

Published 9 ಫೆಬ್ರುವರಿ 2024, 23:57 IST
Last Updated 9 ಫೆಬ್ರುವರಿ 2024, 23:57 IST
ಅಕ್ಷರ ಗಾತ್ರ

ಕಂಚಿಕಾಯಿ ಕಿತ್ತಳೆ ಜಾತಿಗೆ ಸೇರಿದ್ದು. ಸಾಧಾರಣವಾಗಿ ಮನೆಯ ಹಿತ್ತಿಲು, ತೋಟಗಳಲ್ಲಿ ಒಂದೆರಡು ಮರಗಳಿರುತ್ತವೆ. ಇದಕ್ಕೆ ಹೆರಳೆಕಾಯಿ ಎಂದೂ ಹೇಳುತ್ತಾರೆ. ಇದರಿಂದ ರುಚಿಕರ ಅಡುಗೆ ತಯಾರಿಸಬಹುದು.

ಕಂಚಿಕಾಯಿ ಗೊಜ್ಜು

ಸಾಮಗ್ರಿ: ಕಂಚಿಕಾಯಿ ೧, ಹುಣಿಸೇಹಣ್ಣು ಒಂದು ನೆಲ್ಲಿಕಾಯಿ ಗಾತ್ರದ್ದು, ಉಪ್ಪು, ಬೆಲ್ಲ, ಅರಿಶಿಣಪುಡಿ, ಜೀರಿಗೆ ಒಂದು ಚಮಚ, ಕಾಳುಮೆಣಸು ಕಾಲು ಚಮಚ, ಒಣಮೆಣಸು ೮-೧೦, ಸಾಸಿವೆ ಕಾಲು ಚಮಚ

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸು

ವಿಧಾನ: ಕಂಚಿಕಾಯನ್ನು ಸಣ್ಣಗೆ ಹೆಚ್ಚಿಕೊಂಡು ಉಪ್ಪು, ಅರಿಶಿಣ, ಚೂರು ಬೆಲ್ಲ ಹಾಕಿ ಕಲೆಸಿಟ್ಟುಕೊಳ್ಳಿ. ಜೇರಿಗೆ, ಕಾಳುಮೆಣಸು, ಒಣಮೆಣಸು ಮತ್ತು ಸಾಸಿವೆಯನ್ನು ಬೇರೆ ಬೇರೆಯಾಗಿ ಹುರಿದು ಪುಡಿಮಾಡಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆಗೆ ಇಟ್ಟು ಕಲೆಸಿಟ್ಟ ಕಂಚಿಕಾಯಿ ಹೋಳುಗಳನ್ನು ಹಾಕಿ ಎರಡು ನಿಮಿಷ ಹುರಿಯಿರಿ. ಉಪ್ಪು, ನೆನೆಸಿದ ಹುಣಿಸೇಹಣ್ಣು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಸ್ವಲ್ಪ ಬೆಲ್ಲ ಸೇರಿಸಿ. ಕೊನೆಯಲ್ಲಿ ಹುರಿದ ಮಸಾಲೆಪುಡಿ ಹಾಕಿ. ಒಂದೆರಡು ಬಾರಿ ಕೈಯಾಡಿಸಿ ಇಳಿಸಿ.

ಕಂಚಿಕಾಯಿ ಚಟ್ನಿ

ಕಂಚಿಕಾಯಿ ಅರ್ಧ,  ಒಂದು ಕೊಬ್ಬರಿ ತುರಿ, ಉಪ್ಪು, ಬೆಲ್ಲ ಚೂರು, ಹುಣಿಸೇಹಣ್ಣು, ಸಾಸಿವೆ, ಜೇರಿಗೆ, ಒಣಮೆಣಸು, ಕಾಳುಮೆಣಸು ಸ್ವಲ್ಪ

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ,

ವಿಧಾನ: ಕಂಚಿಕಾಯನ್ನು ಸಣ್ಣಗೆ ಹೆಚ್ಚಿ ಅರಿಶಿಣಪುಡಿ, ಉಪ್ಪು, ಬೆಲ್ಲ ಹಾಕಿ ಕಲೆಸಿಟ್ಟುಕೊಳ್ಳಿ. ಸಾಸಿವೆ, ಜೀರಿಗೆ, ಒಣಮೆಣಸು, ಕಾಳುಮೆಣಸು ಹುರಿದುಕೊಳ್ಳಿ. ನಂತರ ಎಲ್ಲವನ್ನೂ ಸೇರಿಸಿ, ನುಣ್ಣನೆ ರುಬ್ಭಿ. ಒಗ್ಗರಣೆ ಕೊಡಿ.

ಕಂಚಿಕಾಯಿ ತಂಬುಳಿ

ಕಂಚಿಕಾಯಿ ಒಂದು, ಉಪ್ಪು, ತೆಂಗಿನಕಾಯಿ ಹಾಲು ಒಂದು ಕಪ್, ಹಸಿಮೆಣಸು, ಚೂರು ಬೆಲ್ಲ

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಒಣಮೆಣಸು

ವಿಧಾನ: ಮೊದಲು ಕಂಚಿಕಾಯಿ ಕತ್ತರಿಸಿ ರಸವನ್ನು ತೆಗೆದುಕೊಳ್ಳಿ. ಅದಕ್ಕೆ ಉಪ್ಪು, ಸ್ವಲ್ಪ ನೀರು, ಚೂರು ಬೆಲ್ಲ ಹಾಕಿ ಕದಡಿ. ಆಮೇಲೆ ಹಸಿಮೆಣಸನ್ನು ಸುಟ್ಟು, ಸೀಳಿ ಅದಕ್ಕೆ ಸೇರಿಸಿ. ನಂತರ ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಒಗ್ಗರಣೆ ಕೊಡಿ.

ಕಂಚಿಕಾಯಿ ಚಿತ್ರಾನ್ನ

ಕಂಚಿಕಾಯಿ ಒಂದು, ಅನ್ನ ನಾಲ್ಕು ದೊಡ್ಡ ಕಪ್, ಉಪ್ಪು

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಶೇಂಗಾ, ಗೋಡಂಬಿ, ಹಸಿಮೆಣಸು, ಕರಿಬೇವು, ಅರಿಶಿಣಪುಡಿ

ವಿಧಾನ: ಮೊದಲು ಕಂಚಿಕಾಯಿ ಕತ್ತರಿಸಿ, ರಸ ತೆಗೆದುಕೊಳ್ಳಿ.  ಮೇಲೆ ಒಗ್ಗರಣೆಗೆ ಹೇಳಿದ ಎಲ್ಲ ಸಾಮಗ್ರಿ ಹಾಕಿ ಒಗ್ಗರಿಸಿಕೊಳ್ಳಿ. ಅದಕ್ಕೆ ಕಂಚಿರಸ, ಉಪ್ಪು ಸೇರಿಸಿ. ನಂತರ ಉದುರಾದ ಅನ್ನವನ್ನು ಹಾಕಿ ಮುದ್ದೆಯಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT