ಮಂಗಳವಾರ, ಸೆಪ್ಟೆಂಬರ್ 22, 2020
23 °C

ಕ್ರಿಸ್‌ಮಸ್‌ಗೆ ಕೇಕ್‌ ಮಿಕ್ಸಿಂಗ್ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರಿಸ್‌ಮಸ್‌ಗೂ ಕೇಕ್‌ಗೂ ಅವಿನಾಭಾವ ಸಂಬಂಧ ಇದೆ. ಈ ಹಬ್ಬದಲ್ಲಿ ಹತ್ತಾರು ಬಗೆಯ ಕೇಕ್‌ಗಳನ್ನು ತಯಾರಿಸಲಾಗುತ್ತದೆ. ಕೇಕ್‌ ಮಿಕ್ಸಿಂಗ್‌ ಹಾಗೂ ಕೇಕ್‌ ತಯಾರಿಸುವುದೂ ಒಂದು ಕಲೆ.

ಇತ್ತೀಚೆಗೆ ಕೆಐಎ ರಸ್ತೆಯ ಸ್ವಿಸ್‌ ಟೌನ್‌ನಲ್ಲಿರುವ ಕ್ಲಾರ್ಕ್‌ ಎಕ್ಸೋಟಿಕಾ ಕನ್ವೆನ್ಷನ್‌ ರೆಸಾರ್ಟ್‌ ಮತ್ತು ಸ್ಪಾದಲ್ಲಿ ಕ್ರಿಸ್‌ಮಸ್‌ ಹಬ್ಬಕ್ಕಾಗಿ ವಿಶೇಷವಾದ ಕೇಕ್‌ಗಳನ್ನು ತಯಾರಿಸುವ ಉದ್ದೇಶದಿಂದ ಮಿಕ್ಸಿಂಗ್‌ಗೆ ಚಾಲನೆ ನೀಡಲಾಯಿತು.

ರೆಸಾರ್ಟ್‌ ಮುಖ್ಯಸ್ಥರು, ಶೆಫ್‌ ಹಾಗೂ ಅಲ್ಲಿ ಸೇರಿದ್ದ ಅತಿಥಿಗಳು ಒಟ್ಟಿಗೆ ಸೇರಿ ವಿವಿಧ ಬಗೆಯ ಹಣ್ಣುಗಳನ್ನು ಬಳಸಿ ಮಿಕ್ಸಿಂಗ್ ಮಾಡಿದರು. 1000ಕೆ.ಜಿ ತೂಕದ ಕೇಕ್‌ ತಯಾರಿಕೆಗಾಗಿ ಒಣ ಹಣ್ಣುಗಳು, ಕ್ಯಾಂಡಿಡ್ ಲೆಮನ್‌, ಕಿತ್ತಳೆಹಣ್ಣಿನ ಪೀಲ್‌, ದಾಲ್ಚಿನ್ನಿ, ಚೆರಿ, ದ್ರಾಕ್ಷಿ ಹಣ್ಣಿನ ವೈನ್‌, ರಮ್‌, ಜೇನುತುಪ್ಪ, ಬಾದಾಮಿ ತುಣಕುಗಳನ್ನು ಹಾಕಿ ಮಿಕ್ಸಿಂಗ್ ಮಾಡಲಾಯಿತು. ‘ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ಹಬ್ಬ ಆಚರಿಸುವುದಾದರೂ ನವೆಂಬರ್ ತಿಂಗಳ ಒಳಗೆ ಮಿಕ್ಸಿಂಗ್ ಮಾಡಲಾಗುತ್ತದೆ. ಈಗ ತಯಾರಿಸಿದ ಮಿಕ್ಸಿಂಗ್‌ನಿಂದ ಹಬ್ಬದ ಸಂದರ್ಭದಲ್ಲಿ ಕೇಕ್ ಮಾಡಲಾಗುತ್ತದೆ’ ಎಂದು ಶೆಫ್‌ ಸುರೇಶ್ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು