ಬೆಳಿಗ್ಗೆ ಎದ್ದ ಕೂಡಲೇ ಹಲವರಿಗೆ ಬಿಸಿ ಬಿಸಿ ಸುವಾಸನೆಭರಿತ ಕಾಫಿ ಹೊಟ್ಟೆಗಿಳಿದರೆ ಮುಂದಿನ ಕೆಲಸಗಳಿಗೆ ಉತ್ಸಾಹ ನೀಡುತ್ತದೆ. ರಾತ್ರಿಯೇ ಫಿಲ್ಟರ್ಗೆ ಕಾಫಿ ಪುಡಿ ಸೇರಿಸಿ, ಮೇಲೆ ಒಂದಿಷ್ಟು ಬಿಸಿ ನೀರು ಸುರಿದಿಟ್ಟರೆ ಬೆಳಿಗ್ಗೆ ಮಂದವಾದ ಡಿಕಾಕ್ಷನ್ ಸಂಗ್ರಹವಾಗಿರುತ್ತದೆ. ಅದಕ್ಕೊಂದಿಷ್ಟು ಬಿಸಿ ಹಾಲು, ಸಕ್ಕರೆ ಅಥವಾ ಬೆಲ್ಲ ಸೇರಿಸಿ ಸೊರ್ರನೆ ಹೀರುವ ಸುಖವೇ ಬೇರೆ. ಇರಲಿ, ಫಿಲ್ಟರ್ ಕಾಫಿಗೆ ಮನೆಯಲ್ಲೇ ಕಾಫಿ ಬೀಜ ಕುಟ್ಟಿ ಪುಡಿ ಮಾಡಿಕೊಂಡು ಬಳಸುವವರು.. ಇದೆಲ್ಲ ಯಾಕೆ ಬೇಕು ಎಂದು ಇನ್ಸ್ಟಂಟ್ ಕಾಫಿ ಬೆರೆಸಿ ಕುಡಿಯುವವರು.. ಒಟ್ಟಿನಲ್ಲಿ ವೈವಿಧ್ಯತೆ ಬೇಕು ಜನಕ್ಕೆ.

ಕಾಫಿ ಪುಡಿ ಮಾಡುವುದರಲ್ಲೂ ನೈಪುಣ್ಯ ಬೇಕು. ಪರಿಣತರು ತಲೆ ಕೆಡಿಸಿಕೊಂಡು ಎಲ್ಲಾ ಫಾರ್ಮುಲಾಗಳನ್ನು ಸೇರಿಸಿ ಒಂದು ಹದವನ್ನು ತಂದಿರುತ್ತಾರೆ. ಕಾಫಿ ಬೀಜ, ಚಿಕೋರಿ ಪ್ರಮಾಣವನ್ನು ಮೇಲೆ ಕೆಳಗೆ ಮಾಡಿ ಕಾಫಿ ಪ್ರಿಯರ ಮನ ತಣಿಸಲು ಸರ್ಕಸ್ ಮಾಡಿರುತ್ತಾರೆ. ರುಚಿ ಪರೀಕ್ಷಕರು ನಾಲಿಗೆಯ ಮೊಗ್ಗುಗಳಿಗೆ ಬಿಸಿ ತಾಗಿಸಿ ಹೊಸ ಲೆಕ್ಕಾಚಾರ ಹೇಳಿರುತ್ತಾರೆ. ಇಷ್ಟೆಲ್ಲಾ ಆದ ಮೇಲೆ ಯಾವ್ಯಾವುದೋ ಬ್ರ್ಯಾಂಡ್ ಹೆಸರನ್ನು ಅಂಟಿಸಿಕೊಂಡು ಕಾಫಿ ಪುಡಿ ಅಂಗಡಿ ಮಳಿಗೆಯ ಶೆಲ್ಫ್ನಿಂದ ಅಡುಗೆ ಕೋಣೆಯ ಶೆಲ್ಫ್ ಮೇಲಿರುವ ಡಬ್ಬಿಗೆ ಬಂದು ಕೂರುತ್ತದೆ.

ಯಾವ ಬ್ರ್ಯಾಂಡ್ನ ಪುಡಿ ಎಷ್ಟು ರುಚಿಕರ ಎಂದು ಪ್ರಯೋಗ ಮಾಡುತ್ತ ಕೂರುವ ಬದಲು ಮನಯಲ್ಲೇ ಬೀಜ ಅರೆದು ಪುಡಿ ಮಾಡಿ ಎಷ್ಟು ಬೇಕೋ ಅಷ್ಟು ಚಿಕೋರಿ ಸೇರಿಸಿ ಸ್ವಾದ ಹೀರುವವರು ಬೇಕಾದಷ್ಟು ಮಂದಿ ನಮ್ಮ ನಡುವೆ ಇದ್ದಾರೆ.

ಫಿಲ್ಟರ್ ಕಾಫಿಗೆ ತೀರಾ ತರಿತರಿಯೂ ಅಲ್ಲ, ನಯವಾಗಿಯೂ ಅಲ್ಲದ ಮಧ್ಯಮ ರೀತಿಯ ಪುಡಿ ಸಾಕು ಎನ್ನುತ್ತಾರೆ ಕಾಫಿ ಪ್ರಿಯರಾದ ಚಿಕ್ಕಮಗಳೂರಿನ ಗೃಹಿಣಿ ತಾರಾ ಶ್ರೀನಿಧಿ. ಮನೆಯಲ್ಲೇ ಪುಡಿ ಮಾಡಲು ಪುಟ್ಟ ಯಂತ್ರವನ್ನಿಟ್ಟುಕೊಂಡು 15 ದಿನಕ್ಕೆ ಸಾಲುವಷ್ಟು ಪುಡಿ ಮಾಡಿಕೊಳ್ಳುವುದು ಅವರ ರೂಢಿ. ಜಾಸ್ತಿ ಮಾಡಿಟ್ಟುಕೊಂಡರೆ ಪುಡಿ ಹಳೆಯದಾಗಿ ಸ್ವಾದ ಕಮ್ಮಿಯಾಗುತ್ತದೆ ಎಂಬುದು ಅವರ ಅನುಭವದ ಮಾತು.

ಹೌದು, ತಜ್ಞರು ಪ್ರಕಾರ ತೇವಾಂಶ ಕಾಫಿ ಸ್ವಾದವನ್ನು ಹೆಚ್ಚು ಕಮ್ಮಿ ಮಾಡುತ್ತದೆ. ಪುಡಿಯು ತೇವಾಂಶ ಹೀರಿಕೊಂಡು ತಾಜಾತನ ಕಳೆದುಕೊಂಡು ಬಿಡುತ್ತದೆ.

ಹಾಗೆಯೇ ನೀರು ಕೂಡ ಚೆನ್ನಾಗಿರಬೇಕು. ಅಂದರೆ ಗಡಸು ನೀರಿನಿಂದ ಕಾಫಿಯ ಸ್ವಾದವೇ ಬದಲಾಗಿಬಿಡುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಖನಿಜಾಂಶಗಳು ಕಾಫಿಯ ಸ್ವಾದ ನೀರಿನ ಜೊತೆ ಸರಿಯಾಗಿ ಬೆರೆಯಲು ಬಿಡುವುದಿಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ ನೀರನ್ನು ಮೊದಲು ಫಿಲ್ಟರ್ ಮಾಡಿಕೊಳ್ಳಿ. ಮೆದು ನೀರು ಕಾಫಿಯ ತಾಜಾತನ ಕಾಪಾಡುತ್ತದೆ.

ಹಾಲೂ ಕೂಡ ಮಂದವಾಗಿ, ಕೊಬ್ಬಿನಂಶ ಜಾಸ್ತಿಯಿದ್ದರೆ ಅದರ ರುಚಿಯೇ ಬೇರೆ. ಕೆಲವರಿಗೆ ಕಾಫಿ ಎಷ್ಟು ಮಂದವಾಗಿರಬೇಕು ಎಂದರೆ ನೆಲದ ಮೇಲೆ ಕಾಫಿ ಚೆಲ್ಲಿದರೆ ಹಾಗೇ ಅಲ್ಲಿಯೇ ಇರಬೇಕು ಅದು, ಹರಿದು ಹೋಗಬಾರದು! ಹಾಗೆಯೇ ತೀರಾ ಬಿಸಿಯಾಗಿದ್ದರೆ ಅದರ ಸ್ವಾದವನ್ನು ನಿಮ್ಮ ನಾಲಿಗೆ ಗುರುತಿಸಲು ಸಾಧ್ಯವಿಲ್ಲ. ಹೀಗಾಗಿ ಬಿಸಿಯೂ ಹದವಾಗಿದ್ದರೆ ಸೂಕ್ತ ಎನ್ನುವುದು ತಾರಾ ಅವರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.