ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಬೇಯಿಸಿದ ಮೊಟ್ಟೆ ಬುರ್ಜಿ, ಮಸಾಲೆ ಕರಿ

Last Updated 13 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಎಗ್‌ ಫ್ರೈಡ್ ರೈಸ್‌

ಬೇಕಾಗುವ ಸಾಮಗ್ರಿಗಳು: ಅನ್ನ – 2 ಕಪ್‌, ಎಲೆಕೋಸು – ಅರ್ಧ ಕಪ್‌, ಕ್ಯಾರೆಟ್‌( ತುರಿದಿದ್ದು) – ಕಾಲು ಕಪ್‌, ಈರುಳ್ಳಿ – 2 (ಕತ್ತರಿಸಿದ್ದು), ಕೊತ್ತಂಬರಿ ಸೊಪ್ಪು – 1/2 ಕಪ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಚಮಚ, ಹಸಿಮೆಣಸು –1, ಉಪ್ಪು– ರುಚಿಗೆ, ಖಾರದಪುಡಿ – ಅರ್ಧ ಚಮಚ, ಗರಂಮಸಾಲೆ – 1 ಟೇಬಲ್ ಚಮಚ, ವಿನೆಗರ್‌ – 1 ಟೇಬಲ್‌ ಚಮಚ, ಕಾಳುಮೆಣಸಿನ ಪುಡಿ – 1 ಟೇಬಲ್ ಚಮಚ, ಟೊಮೆಟೊ ಸಾಸ್‌ – 1 ಟೇಬಲ್ ಚಮಚ, ಗ್ರೀನ್‌ಚಿಲ್ಲಿ ಸಾಸ್‌ – 1 ಟೇಬಲ್ ಚಮಚ, ಸೋಯಾ ಸಾಸ್‌ – 1 ಟೇಬಲ್‌, ಮೊಟ್ಟೆ – 3, ಎಣ್ಣೆ – ಸ್ವಲ್ಪ

ತಯಾರಿಸುವ ವಿಧಾನ: ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಎಲೆಕೋಸು ಹಾಕಿ ಹುರಿದುಕೊಳ್ಳಿ. ಹುರಿದುಕೊಂಡಿದ್ದನ್ನು ಒಂದು ಬದಿಗೆ ಸರಿಸಿಕೊಂಡು ಇನ್ನೊಂದು ಭಾಗಕ್ಕೆ ಒಡೆದ ಮೊಟ್ಟೆ ಹಾಕಿ. ಮೊಟ್ಟೆಯನ್ನು ಆಮ್ಲೆಟ್‌ಗೆ ಬೇಯಿಸುವಂತೆ ಅರ್ಧ ಬೇಯಿಸಿಕೊಳ್ಳಿ. ಅದೇ ಎಣ್ಣೆಗೆ ಕ್ಯಾರೆಟ್, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ವಿನೆಗರ್, ಸೋಯಾ ಸಾಸ್‌, ಚಿಲ್ಲಿ ಸಾಸ್‌, ಟೊಮೆಟೊ ಸಾಸ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅನ್ನ ಹಾಗೂ ಮೇಲೆ ತಿಳಿಸಿದ ಎಲ್ಲಾ ಮಸಾಲೆ, ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಿ.

ಮೊಟ್ಟೆ ಮಸಾಲೆ ಕರಿ

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ – 6, ಈರುಳ್ಳಿ – 3 (ಹೆಚ್ಚಿದ್ದು), ಹುಣಸೆಹಣ್ಣು – 30 ಗ್ರಾಂ (ನೆನೆಸಿದ್ದು), ಟೊಮೆಟೊ – 2, ಸಾಸಿವೆ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವು – ಸ್ವಲ್ಪ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ಗರಂ ಮಸಾಲೆ– ಅರ್ಧ ಚಮಚ, ಹಸಿಮೆಣಸು – 3, ಅರಿಸಿನ ಪುಡಿ – ಅರ್ಧ ಚಮಚ, ಖಾರದಪುಡಿ – 2 ಟೇಬಲ್ ಚಮಚ, ಕೊತ್ತಂಬರಿ ಪುಡಿ – 1 ಟೇಬಲ್ ಚಮಚ, ಎಣ್ಣೆ – ಸ್ವಲ್ಪ

ತಯಾರಿಸುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅರಿಸಿನ ಹಾಕಿ ಮಿಶ್ರಣ ಮಾಡಿ. ಮೊಟ್ಟೆಗೆ ನಾಲ್ಕು ಕಡೆ ಗೀರಿಕೊಂಡು ಮೊಟ್ಟೆಯನ್ನು ಅರಿಸಿನ ಮಿಶ್ರಣಕ್ಕೆ ಹಾಕಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಈರುಳ್ಳಿ, ಹಸಿಮೆಣಸು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. ಅದಕ್ಕೆ ಟೊಮೆಟೊ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಖಾರದಪುಡಿ, ಗರಂಮಸಾಲೆ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಟೊಮೆಟೊ ಮ್ಯಾಶ್‌ ಆಗುವವರೆಗೂ ಹುರಿದುಕೊಳ್ಳಿ, ಅದಕ್ಕೆ ಕರಿಬೇವು ಸೇರಿಸಿ. ಸ್ವಲ್ಪ ನೀರು ಸೇರಿಸಿ ಎಣ್ಣೆ ಬಿಡುವವರೆಗೂ ಕುದಿಸಿ. ಅದಕ್ಕೆ ಹುಣಸೆರಸ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಬೇಕಾದರೆ ಸ್ವಲ್ಪ ನೀರು ಸೇರಿಸಿ ಕುದಿಸಬಹುದು. ಇದನ್ನು ಮೂರು ನಿಮಿಷಗಳ ಕಾಲ ಕುದಿಸಬೇಕು. ಅದಕ್ಕೆ ಮೊದಲೇ ಬೇಯಿಸಿ ಹುರಿದುಕೊಂಡ ಮೊಟ್ಟೆ ಹಾಕಿ. ಮೊಟ್ಟೆ ಹಾಕಿದ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಮತ್ತೆ ಚೆನ್ನಾಗಿ ಕುದಿಸಿ.

ಬೇಯಿಸಿದ ಮೊಟ್ಟೆ ಬುರ್ಜಿ

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ – 4, ಈರುಳ್ಳಿ – 3 (ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು – ಅರ್ಧ ಕಪ್‌, ಮೊಟ್ಟೆ ಮಸಾಲೆ ಪುಡಿ – ಅರ್ಧ ಚಮಚ, ಕೊತ್ತಂಬರಿ ಪುಡಿ – ಅರ್ಧ ಚಮಚ, ಖಾರದಪುಡಿ – ಅರ್ಧ ಚಮಚ, ಅರಿಸಿನ – ಅರ್ಧ ಚಮಚ, ಕಾಳುಮೆಣಸಿನ ಪುಡಿ – ಕಾಲು ಚಮಚ, ಉಪ್ಪು – ರುಚಿಗೆ, ಎಣ್ಣೆ – ಸ್ವಲ್ಪ

ತಯಾರಿಸುವ ವಿಧಾನ: ಬೇಯಿಸಿದ ಮೊಟ್ಟೆಯನ್ನು ನಾಲ್ಕು ಭಾಗ ಮಾಡಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಹುರಿದುಕೊಳ್ಳಿ. ಅದಕ್ಕೆ ಮೊಟ್ಟೆ ಮಸಾಲೆ, ಕೊತ್ತಂಬರಿ ಪುಡಿ, ಖಾರದಪುಡಿ, ಅರಿಸಿನ ಪುಡಿ, ಕಾಳಮೆಣಸಿನ ಪುಡಿ, ಉ‍ಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಬೇಯಿಸಿ ಕತ್ತರಿಸಿದ ಮೊಟ್ಟೆ ಸೇರಿಸಿ, ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಬೇಯಿಸಿದ ಮೊಟ್ಟೆಯ ಎಗ್‌ ಬುರ್ಜಿ ರೆಡಿ.

(ಲೇಖಕಿ: ‘ರೇಖಾ ಅಡುಗೆ’ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT