ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಪದವೀಧರರ ‘ಚಾಯೋಸ್‌’!

Last Updated 5 ನವೆಂಬರ್ 2019, 12:52 IST
ಅಕ್ಷರ ಗಾತ್ರ

ಭಾರತದ ಪ್ರಮುಖ ಚಹಾ ಕೆಫೆ ಚಾಯೋಸ್‌ ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರಿನ ಇಂದಿರಾನಗರ, ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಮತ್ತು ಪಾರ್ಕ್‌ ಸ್ಕ್ವೇರ್‌ ಮಾಲ್‌ನಲ್ಲಿ ಕೆಫೆ ತೆರೆದಿದೆ. 2020ರ ಮಾರ್ಚ್‌ ವೇಳೆಗೆ ನಗರದ 12 ಕಡೆ ಸ್ಟೋರ್‌ಗಳನ್ನು ತೆರೆಯುವ ಯೋಜನೆ ಹಮ್ಮಿಕೊಂಡಿದೆ. ಒರಾಯನ್‌ ಮಾಲ್‌, ವೆಗಾ ಸಿಟಿ ಮಾಲ್‌, ಬ್ರೂಕ್‌ಫೀಲ್ಡ್ ಮಾಲ್‌, ಪ್ರೆಸ್ಟೀಜ್‌ ಟ್ರೇಡ್‌ ಟವರ್ಸ್‌ಗಳಲ್ಲೂ ಕೂಡ ಕೆಫೆ ತೆರೆಯುವ ಯೋಜನೆ ಹಮ್ಮಿಕೊಂಡಿದೆ.

ದೆಹಲಿ, ನೋಯ್ಡಾ, ಗುರುಗ್ರಾಮ, ಫರೀದಾಬಾದ್, ಚಂಡೀಗಢ ಮತ್ತು ಮುಂಬೈನಲ್ಲಿ 65 ಸ್ಟೋರ್‌ಗಳಿದ್ದು, ಮೇರಿ ವಾಲಿ ಚಾಯ್‌ ಎಂಬ ವೈಶಿಷ್ಟ್ಯಕ್ಕೆ ಹೆಸರಾಗಿದೆ. ಇಲ್ಲಿ ತಾಜಾ, ವೈಯಕ್ತೀಕರಿಸಿದ ಮತ್ತು ವಿಶಿಷ್ಟ ಚಹಾ ಲಭ್ಯವಿರುತ್ತದೆ. 80 ಸಾವಿರಕ್ಕೂ ಹೆಚ್ಚು ವಿಶಿಷ್ಟ ಚಹಾ ಆಯ್ಕೆಗಳಿಂದ ಅತಿಥಿಗಳು ತಮ್ಮ ಇಷ್ಟದ ಚಹಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆಮ್‌ ಪಾಪಡ್‌ ಚಾಯ್‌, ಹರಿ ಮಿರ್ಚ್‌ ಚಾಯ್‌, ಶಾಹಿ ಚಾಯ್‌, ಥಂಡಿ ಚಾಯ್‌ ಹಾಗೂ ಇತರ ಹಲವು ವಿಧದ ಚಹಾಗಳಿಗೆ ಬ್ರಾಂಡ್‌ ಜನಪ್ರಿಯವಾಗಿದೆ. ಚಾಯೋಸ್‌ನಲ್ಲಿನ ಮೆನು ಹಲವು ಸಂಶೋಧನೆಗಳಿಂದ ರೂಪುಗೊಂಡಿರುವಂಥದು.

ಪ್ರತಿ ಚಾಯೋಸ್‌ ಕೆಫೆ ಕೂಡ ವಿಶಿಷ್ಟವಾಗಿದೆ. ಹಲವು ಬ್ರಾಂಡ್‌ ಥೀಮ್‌ಗಳನ್ನು ಆಧರಿಸಿ ಮತ್ತು ಸ್ಥಳೀಯ ಅಂಶಗಳನ್ನು ಆಧರಿಸಿ ರೂಪಿಸಲಾಗಿದೆ. ಇಂದಿರಾನಗರದ ಸ್ಟ್ರೀಟ್‌ 12 ಮೇನ್‌ನಲ್ಲಿರುವ ಕೆಫೆ ನಗರದ ಜನಪ್ರಿಯ ಕೆಫೆ. ಈ ಕೆಫೆಯನ್ನು ಪುಸ್ತಕಗಳು ಮತ್ತು ಮಳೆಗಳ ಮಧ್ಯೆಯೇ ವಿನ್ಯಾಸ ಮಾಡಲಾಗಿದೆ.

‘ಚಾಯೋಸ್‌ನ 7ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ ಮತ್ತು 7ನೇ ನಗರಕ್ಕೆ ಕಾಲಿಡುತ್ತಿದ್ದೇವೆ. ಚಾಯೋಸ್‌ ಮತ್ತು ಬೆಂಗಳೂರು ಮಧ್ಯೆ ಉತ್ತಮ ಸಂಬಂಧ ನಿರ್ಮಾಣವಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ವಿಭಿನ್ನ ಸಂಸ್ಕೃತಿಯ ಜನರು ಆಗಮಿಸಿ ವಿವಿಧ ರೀತಿಯ ಚಹಾವನ್ನು ಸೇವಿಸುವ ಮಹತ್ವದ ಸ್ಥಳ ಬೆಂಗಳೂರು. ಇದೇ ಸಮಯದಲ್ಲಿ, ಚಾಯೋಸ್‌ನಲ್ಲಿ ನಾವು ಮೇರಿ ವಾಲಿ ಚಾಯ್‌ ಅನ್ನು ಅತಿಥಿಗಳಿಗೆ ಒದಗಿಸುವ ಮೂಲಕ ವಿಶಿಷ್ಟ ವಾತಾವರಣ ರೂಪಿಸುತ್ತಿದ್ದೇವೆ. 2020 ಮಾರ್ಚ್‌ ವೇಳೆಗೆ 15 ಸ್ಟೋರ್‌ಗಳನ್ನು ಹೊಂದುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದುಚಾಯೋಸ್‌ ಸಂಸ್ಥಾಪಕ ನಿತಿನ್‌ ಸಲುಜಾ ಹೇಳುತ್ತಾರೆ.

ಚಾಯೋಸ್‌ನಲ್ಲಿ ಇತ್ತೀಚಿನ ಹೊಸ ತಂತ್ರಜ್ಞಾನವೆಂದರೆ ಫೇಸ್‌ ರಿಕಗ್ನಿಶನ್‌. ಇಲ್ಲಿ ಲಾಗಿನ್ ಮಾಡಿ ಹಿಂದಿನ ಬಾರಿ ಕುಡಿದ ಚಹಾವನ್ನೇ ಮತ್ತೆ ಸೇವಿಸಲು ಬಯಸುವವರಿಗೆ ಇದು ನೆರವಾಗಲಿದೆ.

‘ಮೇರಿ ವಾಲಿ ಚಾಯ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತಿಥಿಗಳ ಆಯ್ಕೆಗೆ ಅನುಗುಣವಾಗಿ ಪರ್ಸನಲೈಸ್‌ ಮಾಡುವ ಚಹಾವನ್ನು ನಮ್ಮ ಕೆಫೆ ಮಾತ್ರ ಒದಗಿಸುತ್ತದೆ’ ಎಂದು ಚಾಯೋಸ್‌ ಸಹಸಂಸ್ಥಾಪಕ ರಾಘವ್‌ ವರ್ಮಾ ಹೇಳುತ್ತಾರೆ.

ಚಾಯೋಸ್‌ ಬಗ್ಗೆ

ಇಬ್ಬರು ಐಐಟಿ ಪದವೀಧರರಾದ ನಿತಿನ್‌ ಸಲುಜಾ ಮತ್ತು ರಾಘವ್‌ ವರ್ಮಾ 2012ರಲ್ಲಿ ಆರಂಭಿಸಿದ ಚಾಯೋಸ್‌, ಭಾರತದ ಅತ್ಯಂತ ಜನಪ್ರಿಯ ಚಹಾ ಕೆಫೆಯಾಗಿದೆ. ಚಹಾ ಅಡ್ಡಾ ಅಥವಾ ಟೀ ರೂಮ್‌ ಎಂಬ ಹಳೆಯ ಸಂಸ್ಕೃತಿಗೆ ಹೊಸ ರೂಪವನ್ನು ಚಾಯೋಸ್‌ ನೀಡಿದೆ. ಇಲ್ಲಿ ಜೀವನ, ಕೆಲಸ, ಸಮಾಜ ಮತ್ತು ರಾಜಕೀಯದಂಥ ವಿಷಯಗಳನ್ನು ಇಷ್ಟದ ಜನರೊಂದಿಗೆ ಚರ್ಚೆ ಮಾಡಬಹುದು. ಚಾಯೋಸ್ ತನ್ನ ವಿಶಿಷ್ಟ ಮೇರಿ ವಾಲಿ ಚಾಯ್‌ಗೆ ಹೆಸರಾಗಿದೆ. ಚಹಾಗೆ ಪೂರಕವಾಗಿ ಇಲ್ಲಿನ ತಿನಿಸುಗಳೂ ಇರುತ್ತವೆ.

ದೆಹಲಿ, ಮುಂಬೈ, ನೋಯ್ಡಾ, ಗುರುಗ್ರಾಮ, ಚಂಡೀಗಢ ಮತ್ತು ಫರೀದಾಬಾದ್‌ನಂತಹ 6 ನಗರಗಳಲ್ಲಿ 65 ಕೆಫೆಗಳನ್ನು ಹೊಂದಿರುವ ಚಾಯೋಸ್‌ 15 ಲಕ್ಷ ನೋಂದಾಯಿತ ಗ್ರಾಹಕರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT