ಶನಿವಾರ, ಜೂಲೈ 11, 2020
23 °C

ಚಿಕನ್ ಕಟ್ಲೆಟ್‌ನಿಂದ ತಂದೂರಿ ಮಸಾಲೆವರೆಗೆ

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ತಂದೂರಿ ಚಿಕನ್
ಬೇಕಾಗುವ ಸಾಮಗ್ರಿಗಳು:
ದೊಡ್ಡ ಚಿಕನ್ ತುಂಡು – 8 , ಎಣ್ಣೆ – ಸ್ವಲ್ಪ

ನೆನೆಸಿಡಲು: ಕೆಂಪುಮೆಣಸಿನ ಪೇಸ್ಟ್ – 4 ಟೀ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 3ಟೇಬಲ್ ಚಮಚ, ಚಾಟ್ ಮಸಾಲ – 2 ಟೀ ಚಮಚ, ತಂದೂರಿ ಮಸಾಲ – 1, 1/2 ಟೀ ಚಮಚ, ಎಣ್ಣೆ – 1 ಟೇಬಲ್ ಚಮಚ, ಮೊಸರು – 3 ಟೇಬಲ್ ಚಮಚ, ಉಪ್ಪು – ರುಚಿಗೆ, ನಿಂಬೆರಸ – 1/2 ನಿಂಬೆಹಣ್ಣಿನ ಹೋಳಿನದ್ದು

ತಂದೂರಿ ಮಸಾಲ ತಯಾರಿಸಲು: ದಾಲ್ಚಿನ್ನಿ – 2ಚಕ್ಕೆ, ಕರಿಮೆಣಸಿನ ಪುಡಿ – 1 ಟೇಬಲ್ ಚಮಚ, ಹಸಿರು ಏಲಕ್ಕಿ – 5, ಕಂದು ಬಣ್ಣದ ಏಲಕ್ಕಿ – 3, ಕೊತ್ತಂಬರಿ ಬೀಜ – 2 ಟೀ ಚಮಚ, ಜೀರಿಗೆ – 2 ಟೀ ಚಮಚ, ಏಲಕ್ಕಿ – 3, ಲವಂಗದ ಎಲೆ – 1, ಅರಿಸಿನ – 3/4 ಚಮಚ

ತಯಾರಿಸುವ ವಿಧಾನ: ‌ ನೆನೆಸಿಡಲು: ಬೌಲ್‌ವೊಂದರಲ್ಲಿ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಕೆಂಪುಮೆಣಸಿನ ಪೇಸ್ಟ್‌, ಚಾಟ್ ಮಸಾಲ, ತಂದೂರಿ ಮಸಾಲ, ಎಣ್ಣೆ, ಮೊಸರು, ಉಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮಿಕ್ಸ್ ಮಾಡಿದ ಮಿಶ್ರಣವನ್ನು ಚೆನ್ನಾಗಿ ಚಿಕನ್ ಪೀಸ್ ಮೇಲೆ ಸವರಿ. ಮಧ್ಯೆ ಮಧ್ಯೆ ಚಿಕ್ಕ ಚಿಕ್ಕ ತೂತು ಮಾಡಿ ಮಿಶ್ರಣ ಸೇರುವಂತೆ ಮಾಡಿ. ನಂತರ 30 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಚಿಕನ್ ತುಂಡುಗಳನ್ನು ಗ್ರಿಲ್‌ನಲ್ಲಿ ಬೇಯಿಸಿ. ಮಧ್ಯೆ ನಿಯಮಿತವಾಗಿ ಎಣ್ಣೆ ಸವರಿ. ‌

ತಂದೂರಿ ಮಸಾಲ ತಯಾರಿಸಲು: ಒಂದು ಪಾನ್‌ನಲ್ಲಿ ದಾಲ್ಚಿನ್ನಿ, ಕರಿಮೆಣಸು, ಹಸಿರು ಏಲಕ್ಕಿ, ಕಂದು ಬಣ್ಣದ ಏಲಕ್ಕಿ, ಕೊತ್ತಂಬರಿ ಬೀಜ, ಜೀರಿಗೆ, ಏಲಕ್ಕಿ, ದಾಲ್ಚಿನ್ನಿ ಎಲೆ ಹಾಗೂ ಅರಿಸಿನ ಪುಡಿ ಸೇರಿಸಿ ಹುರಿಯಿರಿ. ನಂತರ ಈ ಎಲ್ಲವನ್ನೂ ಸೇರಿಸಿ ಪುಡಿ ಮಾಡಿ. ಈಗ ಮಸಾಲೆಗೆ ನೀರು ಹಾಕಿ ಕುದಿಸಿ. ತಂದೂರಿ ಮಸಾಲ ಹಾಗೂ ತಂದೂರಿ ಚಿಕನ್‌ ತುಂಡುಗಳನ್ನು ಸೇರಿಸಿ ಓವನ್‌ನಲ್ಲಿ ಬಿಸಿ ಮಾಡಿ.

***

ಚಿಕನ್ ಕಟ್ಲೆಟ್‌
ಬೇಕಾಗುವ ಸಾಮಗ್ರಿಗಳು:
ಚಿಕನ್ ಬೇಯಿಸಿಕೊಳ್ಳಲು: ಬೋನ್‌ಲೆಸ್‌ ಚಿಕನ್ – 250ಗ್ರಾಂ, ಅರಿಸಿನ ಪುಡಿ – 1/2 ಟೀ ಚಮಚ, ಉಪ್ಪು – ರುಚಿಗೆ, ನೀರು – 1ಕಪ್‌

ಕಟ್ಲೆಟ್‌ ಮಸಾಲಾ ತಯಾರಿಗೆ: ಎಣ್ಣೆ – 1 ಟೇಬಲ್ ಚಮಚ, ಈರುಳ್ಳಿ (ಸಣ್ಣದಾಗಿ ಹೆಚ್ಚಿದ್ದು) – 1, ಹಸಿಮೆಣಸು – 4 ರಿಂದ 5, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1/2ಟೀ ಚಮಚ, ಉಪ್ಪು – ರುಚಿಗೆ, ಕೆಂಪುಮೆಣಸಿನ ಪುಡಿ – 1/2 ಟೀ ಚಮಚ, ಗರಂ ಮಸಾಲಾ – 1/4 ಟೀ ಚಮಚ, ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ್ದು) – 3 ಚಮಚ, ಆಲೂಗಡ್ಡೆ (ಬೇಯಿಸಿ, ಸಿಪ್ಪೆ ತೆಗೆದು, ಸ್ಮ್ಯಾಶ್ ಮಾಡಿದ್ದು) – 3

ಕಟ್ಲೆಟ್ ಮೇಲ್ಪದರಕ್ಕೆ: ಮೊಟ್ಟೆ – 2, ಬ್ರೆಡಿನ ತುಂಡುಗಳು, ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಚಿಕನ್ ಬೇಯಿಸಿಕೊಳ್ಳಲು: ಕುಕ್ಕರ್‌ಗೆ ಚಿಕನ್ ಪೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಅರಿಸಿನ ಪುಡಿ, ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ, ಬೇಯಿಸಿಕೊಳ್ಳಬೇಕು. ಚೆನ್ನಾಗಿ ಬೆಂದ ನಂತರ ಕುಕ್ಕರ್ ಬಿಸಿ ಆರಿಸಿ ಚಿಕನ್ ಪೀಸ್‌ಗಳನ್ನು ಪಾತ್ರೆಯೊಂದರಲ್ಲಿ ತೆಗೆದಿಡಬೇಕು. ಅದು ತಣ್ಣಗಾದ ಮೇಲೆ ಚಿಕ್ಕ ಚಿಕ್ಕ ಚೂರುಗಳನ್ನಾಗಿಸಿ ಒಂದೆಡೆ ಇರಿಸಬೇಕು.

ಕಟ್ಲೆಟ್‌ ಮಸಾಲೆ ತಯಾರಿಸಲು: ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ಹೆಚ್ಚಿದ ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು ಸೇರಿಸಿ ಈರುಳ್ಳಿ ಚೆನ್ನಾಗಿ ಬಾಡುವವರೆಗೂ ಬಿಡಬೇಕು. ನಂತರ ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ವಾಸನೆ ಹೋಗುವವರೆಗೂ ಹುರಿಯಬೇಕು. ನಂತರ ಅದಕ್ಕೆ ಚಿಕನ್ ಚೂರುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೆಲ ಹೊತ್ತು ಹಾಗೇ ಬಿಡಬೇಕು. ನಂತರ ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಕರಿಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪುನ್ನು ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಬೇಯಿಸಬೇಕು. ನಂತರ ಅದಕ್ಕೆ ಬೇಯಿಸಿದ ಆಲೂಗಡ್ಡೆ ಸೇರಿಸಿ ಅವೆಲ್ಲವನ್ನೂ ಚೆನ್ನಾಗಿ ಸ್ಮ್ಯಾಶ್ ಮಾಡಬೇಕು.

ಚಿಕನ್ ಕಟ್ಲೆಟ್ ಕೋಟಿಂಗ್‌ ಮಾಡಲು: ಚಿಕನ್ ಕಟ್ಲೆಟ್‌ ಮಿಶ್ರಣವನ್ನು ಒಂದು ಚಿಕ್ಕ ಉಂಡೆ ಗಾತ್ರವನ್ನು ತೆಗೆದುಕೊಂಡು ಅದನ್ನು ರೌಂಡ್ ಅಥವಾ ಅಂಡಾಕಾರಕ್ಕೆ ತಟ್ಟಿಕೊಳ್ಳಬೇಕು. ನಂತರ ಅದನ್ನು ಮೊದಲೇ ರೆಡಿ ಮಾಡಿಟ್ಟುಕೊಂಡ ಮೊಟ್ಟೆಯ ಮಿಶ್ರಣದಲ್ಲಿ ಅದ್ದಬೇಕು. ನಂತರ ಬ್ರೆಡಿನ ಚೂರುಗಳಲ್ಲಿ ಅದನ್ನು ಅದ್ದಿ ಕೋಟ್‌ ಮಾಡಬೇಕು. ನಂತರ ‍‍ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ನಿಧಾನ ಉರಿಯಲ್ಲಿ ಕಟ್ಲೆಟ್‌ ತುಂಡುಗಳನ್ನು ಕರಿಯಬೇಕು. ಇದನ್ನು ಸಾಸ್ ಅಥವಾ ಕೆಚಪ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.

***

ಕ್ರಿಸ್ಪಿ ಚಿಕನ್ ಫ್ರೈ
ಬೇಕಾಗುವ ಸಾಮಗ್ರಿಗಳು:
ಚಿಕ್ಕ ಚಿಕ್ಕ ಚಿಕನ್ ತುಂಡುಗಳು – 1/2 ಕೆ.ಜಿ., ಈರುಳ್ಳಿ (ಸಣ್ಣದಾಗಿ ಹೆಚ್ಚಿದ್ದು) – 1/2, ಶುಂಠಿ (ಹೆಚ್ಚಿದ್ದು) – 1 ಇಂಚು, ಬೆಳ್ಳುಳ್ಳಿ (ಹೆಚ್ಚಿದ್ದು) – 4ರಿಂದ 5, ಮೆಣಸಿನ ಪುಡಿ – 2ಟೀ ಚಮಚ, ಕರಿಮೆಣಸಿನ ಪುಡಿ – 1/2 ಟೀ ಚಮಚ, ಸೋಯಾ ಸಾಸ್ – 1, 1/2 ಟೀ ಚಮಚ, ಉಪ್ಪು – ರುಚಿಗೆ ಜೋಳದ ಹಿಟ್ಟು – 4 ಟೇಬಲ್ ಚಮಚ, ನೀರು – 2 ರಿಂದ ಟೇಬಲ್ ಚಮಚ, ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಚಿಕ್ಕ ಚಿಕನ್ ತುಂಡುಗಳಿಗೆ ಜೋಳದ ಹಿಟ್ಟು ಹೊರತು ಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 2 ಗಂಟೆಗಳ ಕಾಲ ನೆನೆಸಿಡಿ. ಮಿಕ್ಸ್ ಮಾಡಿಕೊಂಡ ಮಿಶ್ರಣಗಳು ಚೆನ್ನಾಗಿ ಚಿಕನ್ ತುಂಡುಗಳಿಗೆ ಅಂಟಿಕೊಂಡ ಮೇಲೆ ಜೋಳದ ಹಿಟ್ಟಿನಲ್ಲಿ ಅದನ್ನು ಅದ್ದಿ ಎಣ್ಣೆಯಲ್ಲಿ ಕರಿಯಬೇಕು. ಇದನ್ನು ಗರಿಗರಿಯಾಗಿರುವಾಗಲೇ ತಿನ್ನಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು