ಹುರಿಗಡಲೆ ಮೋದಕ (ಕರ್ಜಿಕಾಯಿ)

ಬೇಕಾಗುವ ಸಾಮಗ್ರಿಗಳು: ಹುರಿಗಡಲೆ– 1/2 ಕಪ್, ಎಳ್ಳು – 1/2 ಕಪ್, ಗಸೆಗಸೆ– 1/2 ಕಪ್, ಕೊಬ್ಬರಿತುರಿ– 1ಕಪ್, ಬೆಲ್ಲ– 4 ಅಚ್ಚು, ಮೈದಾಹಿಟ್ಟು– 2 ಕಪ್, ಚಿರೋಟಿ ರವೆ– 1/2 ಕಪ್, ಎಣ್ಣೆ – ಕರಿಯಲು, ಏಲಕ್ಕಿ– 4, ತುಪ್ಪ – 2ಚಮಚ, ಹಾಲು– 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಗಸೆಗಸೆ ಹಾಗೂ ಎಳ್ಳು ಎರಡನ್ನು ಬೇರೆ ಬೇರೆಯಾಗಿ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಹುರಿಗಡಲೆಯನ್ನೂ ಪುಡಿ ಮಾಡಿಕೊಳ್ಳಿ. ಅದಕ್ಕೆ ಏಲಕ್ಕಿ ಪುಡಿ ಸೇರಿಸಿ. ಪುಡಿ ಮಾಡಿದ ಎಳ್ಳು, ಗಸೆಗಸೆ, ಹುರಿಗಡಲೆ, ಕೊಬ್ಬರಿ, ಏಲಕ್ಕಿ, ಬೆಲ್ಲದ ಪುಡಿಯ ಹಿಟ್ಟನ್ನು ಬೆರೆಸಿಡಿ. ಮೈದಾಹಿಟ್ಟಿಗೆ ಅರ್ಧ ಚಮಚ ರವೆ, ತುಪ್ಪ, ಉಪ್ಪು ಮತ್ತು ನೀರು ಹಾಕಿ ಗಟ್ಟಿಯಾಗಿ ಪೂರಿ ಹಿಟ್ಟಿನಂತೆ ಕಲೆಸಬೇಕು. ನಂತರ ಸ್ವಲ್ಪ ಸಮಯ ಮುಚ್ಚಿಡಬೇಕು. ಆಮೇಲೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಹಪ್ಪಳದ ರೀತಿ ಲಟ್ಟಿಸಿ. ಅದಕ್ಕೆ ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ ಅಂಚುಗಳ ಸುತ್ತ ಹಾಲು ಸವರಿ ಗಟ್ಟಿಯಾಗಿ ಅಚ್ಚಿನಲ್ಲಿ ಒತ್ತಿದರೆ ಅಂಟಿಕೊಳ್ಳುತ್ತದೆ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಈಗ ಕರ್ಜಿಕಾಯಿ ಸವಿಯಲು ಸಿದ್ಧ. ಇದನ್ನು ಹದಿನೈದು ದಿನಗಳ ಕಾಲ ಕೆಡದಂತೆ ಇಡಬಹುದು.

ಸೇಬಿನ ಕರ್ಜಿಕಾಯಿ

ಬೇಕಾಗುವ ಸಾಮಗ್ರಿಗಳು: ಸೇಬುಹಣ್ಣು– 2, ಚಿರೋಟಿ ರವೆ– 1/2 ಕಪ್, ಮೈದಾಹಿಟ್ಟು– 1 ಕಪ್, ಸಕ್ಕರೆ– 1 ಕಪ್, ತೆಂಗಿನ ತುರಿ– 1 ಕಪ್, ಉಪ್ಪು ಚಿಟಿಕೆ, ಹುರಿಗಡಲೆ– 2 ಕಪ್, ತುಪ್ಪ– 2 ಚಮಚ, ಏಲಕ್ಕಿ– 4, ಎಣ್ಣೆ ಅರ್ಧ ಲೀಟರ್.

ತಯಾರಿಸುವ ವಿಧಾನ: ಮೊದಲು ಸೇಬುಹಣ್ಣನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹುರಿಗಡಲೆ ಜೊತೆಗೆ ಏಲಕ್ಕಿ ಸೇರಿಸಿ ಪುಡಿ ಮಾಡಿಕೊಳ್ಳಿ. ಪಾತ್ರೆಗೆ ತೆಂಗಿನ ತುರಿ, ಸಕ್ಕರೆ ಹಾಗೂ ಕತ್ತರಿಸಿಕೊಂಡ ಸೇಬು ಹಾಕಿ ಕಾಯಿಸಿ. ಅದರಲ್ಲಿ ನೀರು ಬತ್ತಿದ ನಂತರ ಹುರಿಗಡಲೆ ಪುಡಿ, ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಸ್ವಲ್ಪ ಆರಿದ ನಂತರ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ ಈಗ ಹೂರಣ ರೆಡಿ. ಮೈದಾಹಿಟ್ಟಿಗೆ ರವೆ, ಉಪ್ಪು, ತುಪ್ಪ ಹಾಗೂ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಪೂರಿಯ ಅಗಲದಷ್ಟು ಲಟ್ಟಿಸಿಕೊಳ್ಳಿ. ಅದರ ಅರ್ಧ ಭಾಗಕ್ಕೆ ಸೇಬಿನ ಹೂರಣವಿಟ್ಟು ಉಳಿದ ಅರ್ಧ ಭಾಗವನ್ನು ಅದರ ಮೇಲೆ ಮುಚ್ಚಿ ಕೊನೆಗಳನ್ನು ಅದುಮಿರಿ. ಬೇಕಾದರೆ ಅಚ್ಚುಗಲ್ಲಿಟ್ಟು ಒತ್ತಿ ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿಯಿರಿ.

ಸ್ವೀಟ್‌ಕಾರ್ನ್ ಕರ್ಜಿಕಾಯಿ

ಬೇಕಾಗುವ ಸಾಮಗ್ರಿಗಳು: ಸ್ವೀಟ್‌ಕಾರ್ನ್– 2 ಕಪ್, ಬೆಲ್ಲ –1 ಅಚ್ಚು, ತೆಂಗಿನತುರಿ – ಅರ್ಧ ಕಪ್, ಏಲಕ್ಕಿ– 2, ಚಿರೋಟಿ ರವೆ 1/2 ಕಪ್, ಮೈದಾಹಿಟ್ಟು – 1 ಕಪ್, ಅರಿಸಿನ – ಅರ್ಧ ಚಮಚ, ಎಣ್ಣೆ – ಕರಿಯಲು, ತುಪ್ಪ ಸ್ವಲ್ಪ, ಏಲಕ್ಕಿ ಪುಡಿ – 1/4 ಚಮಚ.

ತಯಾರಿಸುವ ವಿಧಾನ: ಮೊದಲು ಸ್ವೀಟ್‌ಕಾರ್ನ್ ಅನ್ನು ನೀರಿನಲ್ಲಿ ಬೇಯಿಸಿ ನೀರು ಬಸಿದು ಮಿಕ್ಸಿಯಲ್ಲಿ ತರಿತರಿಯಾಗಿ ಮಾಡಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು, ನೀರು ಸೇರಿಸಿ ಕಲೆಸಿ. ನಂತರ ಎರಡು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ದಪ್ಪ ತಳದ ಪಾತ್ರೆಗೆ ಬೆಲ್ಲ ಹಾಗೂ ನೀರು ಹಾಕಿ ಕರಗಿಸಿ. ಇದಕ್ಕೆ ತೆಂಗಿನತುರಿ ಹಾಕಿ ಹುರಿಯಿರಿ. ಸ್ವಲ್ಪ ಸಮಯದ ನಂತರ ಕಾರ್ನ್ ಅನ್ನು ಹಾಕಿ ಚೆನ್ನಾಗಿ ಹುರಿಯಿರಿ. ಮಿಶ್ರಣವು ಪಾಕ ತಳ ಬಿಡುವಾಗ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಿ. ನಂತರ ನೆನೆಸಿದ ಮೈದಾ ಕಣಕವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಲಟ್ಟಿಸಿಕೊಂಡು ಅದರ ಮಧ್ಯೆ ಕಾರ್ನ್ ಹೂರಣವನ್ನು ಇಟ್ಟು ಕಡುಬಿನ ಆಕಾರದಲ್ಲಿ ಮುಚ್ಚಿ ಕಾದ ಎಣ್ಣೆಯಲ್ಲಿ ಗರಿಗರಿಯಾಗುವವರೆಗೂ ಕರಿಯಿರಿ ಈಗ ರುಚಿಕರವಾದ ಸ್ವೀಟ್‌ಕಾರ್ನ್ ಕರ್ಜಿಕಾಯಿ ಸವಿಯಲು ಸಿದ್ಧ.

ಸೂಸಲು ಕಡುಬು

ಬೇಕಾಗುವ ಸಾಮಗ್ರಿಗಳು: ತೆಂಗಿನಕಾಯಿ ತುರಿ – 1ಕಪ್, ಗಸೆಗಸೆ – 5ಚಮಚ, ಏಲಕ್ಕಿ – 3, ಅಕ್ಕಿಹಿಟ್ಟು – 1ಕಪ್, ಚಿರೋಟಿ ರವೆ – 5 ಚಮಚ, ಬೆಲ್ಲ – 2 ಅಚ್ಚು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕರಗಿಸಿ ಕುದಿಸಬೇಕು. ಅದು ಗಟ್ಟಿಯಾಗಿ ಸ್ವಲ್ಪ ಪಾಕ ಬಂದಾಗ ಕಾಯಿತುರಿಯನ್ನು ಹಾಕಿ ಗಟ್ಟಿಯಾಗುವವರೆಗೂ ಚೆನ್ನಾಗಿ ಕೈಯಾಡಿಸಬೇಕು. ಪಾತ್ರೆಯನ್ನು ಕೆಳಗಿಳಿಸಿ ಏಲಕ್ಕಿ ಪುಡಿ, ಹುರಿದ ಗಸೆಗಸೆಯನ್ನು ಹಾಕಿ ಕೈಯಾಡಿಸಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಒಂದು ಪಾತ್ರೆಗೆ 2 ಕಪ್ ನೀರು ಹಾಕಿ ಕುದಿಸಿ. ಸ್ವಲ್ಪ ಅಕ್ಕಿಹಿಟ್ಟಿಗೆ ನೀರು ಹಾಕಿ ಗಂಜಿ ಮಾಡಿ ಅದನ್ನು ಕುದಿದ ನೀರಿಗೆ ಹಾಕಿ. 2 ನಿಮಿಷ ಬಿಟ್ಟು ಉಪ್ಪು, ರವೆ, ಉಳಿದ ಅಕ್ಕಿಹಿಟ್ಟನ್ನು ಹಾಕಿ ಗಟ್ಟಿಯಾಗುವವರೆಗೂ ಕೈಯಾಡಿಸಿ. ಇದನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ ಅದಕ್ಕೆ ಕಾಯಿಯ ಹೂರಣವನ್ನು ಮಧ್ಯದಲ್ಲಿ ಇಟ್ಟು ಕಡುಬಿನಾಕಾರದಲ್ಲಿ ಮುಚ್ಚಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿದರೆ ರುಚಿಯಾದ ಸಿಹಿ ಕಡುಬು ಸಿದ್ಧ.

ಖಾರದ ಬೇಳೆ ಕಡುಬು

ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ – 1ಕಪ್, ಒಣ ಮೆಣಸಿನಕಾಯಿ – 5, ಕಾಳುಮೆಣಸು – 10, ಜೀರಿಗೆ – 1ಚಮಚ, ಶುಂಠಿ – 1 ಇಂಚು, ಕರಿಬೇವು – 1ಕಡ್ಡಿ, ಕೊತ್ತಂಬರಿ ಸೊಪ್ಪು – ಸ್ವಲ್ಪ, ತೆಂಗಿನತುರಿ – 1/4ಕಪ್, ಅಕ್ಕಿಹಿಟ್ಟು – 1ಕಪ್, ಚಿರೋಟಿ ರವೆ – 4ಚಮಚ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕಡ್ಲೆಬೇಳೆಯನ್ನು ಅರ್ಧ ಗಂಟೆ ಕಾಲ ನೆನೆಸಿಡಿ. ನಂತರ ನೀರು ಬಸಿದು ಒಣಮೆಣಸಿನಕಾಯಿ ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕಾಳುಮೆಣಸು, ಜೀರಿಗೆ, ತುರಿದ ಶುಂಠಿ, ತೆಂಗಿನಕಾಯಿ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಕರಿಬೇವು, ಉಪ್ಪು ಇಷ್ಟನ್ನು ಮಿಶ್ರಣ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ. ಪಾತ್ರೆಗೆ 2 ಕಪ್ ನೀರು ಹಾಕಿ ಒಲೆಯ ಮೇಲಿಡಿ. ಸ್ವಲ್ಪ ಅಕ್ಕಿಹಿಟ್ಟನ್ನು ಗಂಜಿ ಮಾಡಿಕೊಂಡು ಕುದಿಯುತ್ತಿರುವ ನೀರಿಗೆ ಹಾಕಿ, 2 ನಿಮಿಷ ಬಿಟ್ಟು ರವೆ, ಚಿಟಿಕೆ ಉಪ್ಪು ಮಿಕ್ಕ ಅಕ್ಕಿಹಿಟ್ಟನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಇದನ್ನು ಸಣ್ಣ ಉಂಡೆ ಮಾಡಿಕೊಂಡು ಲಟ್ಟಿಸಿ. ಇದರ ಮಧ್ಯೆ ಬೇಳೆಯ ಖಾರದ ಹೂರಣವನ್ನಿಟ್ಟು ತ್ರಿಕೋನ ಆಕಾರದಲ್ಲಿ ಮುಚ್ಚಿ, ಸುತ್ತಲಿನ ಅಂಚನ್ನು ಒತ್ತಿ. ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ. ತುಪ್ಪ ಹಾಗೂ ಚಟ್ನಿಯೊಂದಿಗೆ ಖಾರದ ಕಡುಬು ಸವಿಯಲು ರುಚಿಯಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.