ಶನಿವಾರ, ಜುಲೈ 31, 2021
23 °C

ಕಾಫಿ ವಿತ್ ಪ್ರೊಟೀನ್‌: ಮಂದಿರಾ ಹೊಸ ರುಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್ ಅವಧಿಯಲ್ಲಿ ಸೆಲೆಬ್ರಿಟಿಗಳು ಹೊಸ ಹೊಸ ಅಡುಗೆ ಪ್ರಯೋಗಗಳನ್ನು ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುತ್ತಿರುತ್ತಾರೆ. ಈಗ ನಟಿ ಮಂದಿರಾ ಬೇಡಿ ಪ್ರೊಟೀನ್ ಕಾಫಿ ತಯಾರಿಸುವ ಮೂಲಕ ಹೊಸ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ. ತಾವು ತಯಾರಿಸಿದ ಪ್ರೊಟೀನ್ ಕಾಫಿಯ ಜೊತೆ ಫೋಟೊ ಹಂಚಿಕೊಂಡಿರುವ ಮಂದಿರಾ ರೆಸಿಪಿ ವಿಧಾನವನ್ನು ಪೋಸ್ಟ್ ಮಾಡಿದ್ದಾರೆ. 

‘ನನ್ನ ಕಾಫಿ ಕಪ್‌ನಲ್ಲಿ ಪ್ರೊಟೀನ್ ಕಾಫಿ ಇರುವುದು ಸಂತಸ ತಂದಿದೆ. ನೀವು ಇದನ್ನು ಇಷ್ಟಪಡುತ್ತೀರಿ ಎಂದುಕೊಂಡಿದ್ದೇನೆ. ನೀವು ಈ ರೆಸಿಪಿಯನ್ನು ಪ್ರಯತ್ನಿಸಿ. ಹೇಗಿದೆ ಎಂದು ಕಮೆಂಟ್ ಮಾಡಿ ತಿಳಿಸಿ’ ಎಂದು ಬರೆದುಕೊಂಡಿದ್ದಾರೆ.

ಬೇಕಾಗುವ ಸಾಮಗ್ರಿಗಳು: ಕಾಫಿಪುಡಿ – 2 ಟೇಬಲ್ ಚಮಚ, ಬಿಸಿ ನೀರು 2 ಟೇಬಲ್ ಚಮಚ, ಹಾಲು – 200 ಮಿಲಿ ಲೀಟರ್, ಮೈ ಪ್ರೊಟೀನ್ ಪುಡಿ – 2ಚಮಚ

ತಯಾರಿಸುವ ವಿಧಾನ: ಬಿಸಿನೀರಿಗೆ ಕಾಫಿಪುಡಿ ಹಾಕಿ ಕ್ರೀಮ್‌ ಆಗುವವರೆಗೂ ಕಲೆಸಿ. ಸಕ್ಕರೆ ಬೇಕಾದರೆ ಬಳಸಿ. ಹಾಲಿಗೆ ಪ್ರೊಟೀನ್ ಪುಡಿ ಸೇರಿಸಿ ಚೆನ್ನಾಗಿ ಕಲುಕಿ. ಒಂದು ಲೋಟಕ್ಕೆ ಐಸ್‌ ತುಂಡುಗಳು, ಪೊಟ್ರೀನ್ ಹಾಲು ಸೇರಿಸಿ. ನಂತರ ಮೇಲುಗಡೆ ಕಾಫಿಪುಡಿಯ ಪೇಸ್ಟ್‌ ಹಾಕಿ. ಈಗ ರುಚಿಯಾದ ಪ್ರೊಟೀನ್ ನಿಮ್ಮ ಕಾಫಿ ನಿಮ್ಮ ಮುಂದೆ ಸಿದ್ಧ.

ಮಂದಿರಾ ತಯಾರಿಸಿದ ಕಾಫಿಯನ್ನು ನೀವು ತಯಾರಿಸು ರುಚಿ ನೋಡಿ. 

 
 
 
 

 
 
 
 
 
 
 
 
 

Loving my cup of coffee with a twist of protein ... I think you’ll enjoy it too... Try it and let me know in the comments below if you like it. Ingredients: -2 tbsp coffee powder -2 tbsp hot water -200 ml milk - 2 scoops of Myprotein 1) Whisk the coffee powder with hot water until it is has a creamy texture. I don’t use sugar but you can add it in if you wish. 2) Add Myprotein powder to milk in a shaker SHAKE SHAKE SHAKE! 3) Fill a glass with ice cubes and add the protein milk to it. Top it off with a dollop or two of the coffee mix. Enjoy your amazing protein coffee and use my code GETFITWITHMANDY for exclusive offers on @myproteinin products! @criessepr #getfitwithmandy #myprotein #fuelyourambition #teammyp

A post shared by Mandira Bedi (@mandirabedi) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು