ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಶೈಲಿಯ ಬೀರ್‌ಯಾನಿ‌ ಹಬ್ಬ

Last Updated 14 ಮಾರ್ಚ್ 2021, 13:07 IST
ಅಕ್ಷರ ಗಾತ್ರ

ಬಿರಿಯಾನಿ ಅನ್ನೋ ಪದ‌ವೇ ಸಾಕು ಬಾಯಲ್ಲಿ ನೀರು ತರಿಸೋಕೆ. ಅದರ ಜೊತೆಗೆ ಬಿಯರ್ ಇದ್ರಂತೂ ಆಹಾರ ಪ್ರಿಯರು ಕಳೆದೇ ಹೋಗುತ್ತಾರೆ.

ಈಗ ಯಾಕೆ ಬಿರಿಯಾನಿ ಮತ್ತು ಬಿಯರ್ ಬಗ್ಗೆ ಮಾತು ಅಂತ ನೀವು ಯೋಚಿಸುತ್ತಿದ್ದೀರಾ.

ಕರ್ನಾಟಿಕ್ ಹೋಟೆಲ್ ನಲ್ಲಿ ದೇಸಿ ಶೈಲಿಯಾ ಬೀರ್ ಯಾನಿ ಹಬ್ಬ ಇದೇ 12 ರಿಂದ ಪ್ರಾರಂಭವಾಗುತ್ತಿದ್ದು, ಇಲ್ಲಿ ನೀವು ಬಿರಿಯಾನಿ ಜೊತೆಗೆ ಬಿಯರ್ ಕೂಡ ಸವಿಯಬಹುದು.

ಈ ಹಬ್ಬದ ವಿಶೇಷ ಅಂದ್ರೆ ಇಲ್ಲಿ ನಾಲ್ಕು ರೀತಿಯ ಬಿರಿಯಾನಿಗಳನ್ನು ನೀವು ಸವಿಯಬಹುದು. ಅವೆಂದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ- ತೆಲಂಗಾಣ ಹಾಗೂ ಕರಾವಳಿ ಪ್ರದೇಶಗಳು ( ಮಂಗಳೂರು ಮತ್ತು ಕೇರಳ).

ಬಿರಿಯಾನಿ ವಿಶೇಷ: ಬಂಗಾರಪೇಟೆ ಬಿರಿಯಾನಿ, ಗುಂಟೂರು ಬಿರಿಯಾನಿ, ಹೈದರಬಾದಿ ಬಿರಿಯಾನಿ, ಗುಂಟೂರು ಎಗ್ ಬಿರಿಯಾನಿ, ವೆಜ್ ಬಿರಿಯಾನಿ, ನಾಟಿ ಕೋಳಿ ಪಲಾವ್, ತಲಪಕಟ್ಟಿ ಬಿರಿಯಾನಿ

'ಪ್ರತಿಯೊಂದು ಭಾಗದ ಬಿರಿಯಾನಿಯನ್ನು ಅಲ್ಲಿನ ಸ್ಥಳೀಯ ಶೆಫ್ ಗಳೇ ತಯಾರಿಸಬೇಕು ಎನ್ನುವ ಉದ್ದೇಶದಿಂದ ಆಯಾ ಭಾಗಗಳಿಂದಲೇ ಶೆಫ್ ಗಳನ್ನು‌ ಕರೆಸಿದ್ದೇವೆ. ಹಾಗಾಗಿ ಎಲ್ಲವೂ ಸ್ಥಳೀಯ ರುಚಿಯನ್ನೇ ಹೊಂದಿರುವುದಂತು ಗ್ಯಾರಂಟಿ' ಎನ್ನುತ್ತಾರೆ ಹೋಟೆಲ್ ಮಾಲೀಕರಾದ ಪಂಜುರಿ.

ಈ ಹಬ್ಬದ ಇನ್ನೊಂದು ವಿಶೇಷ ಎಂದರೆ ಅದು ಬಿಯರ್. ಬಿರಿಯಾನಿ ಜೊತೆಗೆ ಸವಿಯುವಂತಹ ಈ ಬಿಯರ್ ಅನ್ನೂ ಹೋಟೆಲ್ ನಲ್ಲಿಯೇ ಸಿದ್ಧಪಡಿಸಲಾಗುತ್ತದೆ. ಆರು ವೈವಿಧ್ಯಮಯ ಬಿಯರ್ಗಳನ್ನು ನೀವಿಲ್ಲಿ ಆಸ್ವಾದಿಸಬಹುದು.

ಕೊರೊನಾ ಆತಂಕದಲ್ಲಿಯೇ ಸಹಜ ಸ್ಥಿತಿಗೆ ಮರಳುತ್ತಿರುವ ಹೈಟೆಕ್ ಸಿಟಿ ಬೆಂಗಳೂರಿನ ಜನರಿಗೆ ಒಂದೊಳ್ಳೆ ಆಹಾರ ಸವಿಯುವ ಅವಕಾಶವನ್ನು ಕರ್ನಾಟಿಕ್ ಹೋಟೆಲ್ ಒದಗಿಸುತ್ತಿದೆ.

ಈ ಹಬ್ಬದ ಮತ್ತೊಂದು ಖುಷಿಯ ಸಂಗತಿ ಎಂದರೆ ಕೇವಲ‌ ₹99ಗೆ ಬಿರಿಯಾನಿ ಮತ್ತು ಬಿಯರ್ ನಿಮಗಿಲ್ಲಿ ದೊರೆಯಲಿದೆ.

ಸ್ಥಳ: ಕರ್ನಾಟಿಕ್ ಹೋಟೆಲ್, ಗೋಯಾಂಕಾ ಚೇಂಬರ್ಸ್, ಜೀವನ್ ಗೃಹ ಕಾಲೊನಿ, 2ನೆ ಹಂತ, ಜೆ.ಪಿ.ನಗರ.
ದಿನಾಂಕ: ಬಿರಿಯಾನಿ ಹಬ್ಬ ಮಾರ್ಚ್ 12ರಿಂದ 25ರವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT