ನವರಾತ್ರಿ ಸಂದರ್ಭ ದುರ್ಗೆಯನ್ನು ವಿವಿಧ ರೂಪದಲ್ಲಿ ಆರಾಧಿಸುತ್ತಾರೆ. ಎಲ್ಲಾ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆಡೆಯುತ್ತವೆ. ಶರನ್ನವರಾತ್ರಿಗೆಂದೇ ವಿಶೇಷ ಖಾದ್ಯಗಳನ್ನು ತಯಾರಿಸಿ, ನೈವೇದ್ಯಕ್ಕೆ ಇಡಲಾಗುತ್ತದೆ. ಅಂತಹ ಕೆಲವು ತಿನಿಸುಗಳ ರೆಸಿಪಿ ಇಲ್ಲಿವೆ.

ಹಾಲಿನಪುಡಿ-ತೆಂಗಿನತುರಿ ಲಡ್ಡು

ಬೇಕಾಗುವ ವಸ್ತುಗಳು: 4 ಕಪ್ ಹಾಲಿನ ಪುಡಿ, 1½ ಕಪ್ ಒಣಕೊಬ್ಬರಿ, ½ ಕಪ್ ತುಪ್ಪ, 1 ಕಪ್ ಹಾಲು, 1 ಕಪ್ ಸಕ್ಕರೆ.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ. ನಂತರ ಹಾಲು, ಹಾಲಿನ ಪುಡಿ ಹಾಕಿ ಬೆರೆಸಿ. ಹಾಲಿನ ಪುಡಿ ಹಾಲಲ್ಲಿ ಬೆರೆತು ಹೊಂದಿಕೊಂಡಾಗ ಸಕ್ಕರೆ ಹಾಕಿ ತೊಳಸಿ. ನಂತರ ತೆಂಗಿನ ತುರಿ ಹಾಕಿ ತೊಳಸಿ. ನಂತರ ಬಾಣಲೆಯಿಂದ ತಳ ಬಿಡುತ್ತಾ ಬಂದಾಗ, ಮಿಶ್ರಣ ಗಟ್ಟಿಯಾದಾಗ ಒಲೆಯಿಂದ ಕೆಳಗಿಳಿಸಿ. ನಂತರ ಕೈಗೆ ತುಪ್ಪದ ಪಸೆ ಮಾಡಿ ಉಂಡೆ ಕಟ್ಟಿ. ಕೊಬ್ಬರಿ ತುರಿಯಲ್ಲಿ ಹೊರಳಿಸಿ ಇಡಿ.

ಕ್ಯಾರೆಟ್-ಸೇಬು ಹಲ್ವಾ

ಬೇಕಾಗುವ ವಸ್ತುಗಳು: 2 ಕ್ಯಾರೆಟ್, 1 ಸೇಬು, ¼ ಕಪ್ ತುಪ್ಪ, 7-8 ಒಣದ್ರಾಕ್ಷಿ, 8-9 ಗೋಡಂಬಿ, 2 ಚಮಚ ಹುರಿದ ಚಿರೋಟಿ ರವೆ, 1 ಕಪ್ ಸಕ್ಕರೆ, ¼ ಕಪ್ ತುಪ್ಪ, 1 ಕಪ್ ಹಾಲು, ½ ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಸೇಬನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ತುರಿದಿಡಿ. ನಂತರ ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು, ಸಣ್ಣ ತುಂಡುಗಳಾಗಿ ಮಾಡಿ ಮಿಕ್ಸಿಗೆ ಹಾಕಿ ರುಬ್ಬಿ. ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದು ಕೆಳಗಿಳಿಸಿ. ನಂತರ ಬಾಣಲೆಗೆ ತುರಿದ ಸೇಬು, ರುಬ್ಬಿದ ಕ್ಯಾರೆಟ್ ಹಾಕಿ.

ಸ್ವಲ್ಪ ಹುರಿದು ಹಾಲು ಹಾಕಿ ಬೇಯಿಸಿ. ನಂತರ ಹುರಿದ ಚಿರೋಟಿ ರವೆ ಬೆಂದ ಮೇಲೆ ಸಕ್ಕರೆ ಹಾಕಿ ತೊಳಸಿ. ಸಕ್ಕರೆ ಕರಗಿ ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಸ್ವಲ್ಪ ತುಪ್ಪ ಹಾಕಿ. ಬಾಣಲೆಯಿಂದ ತಳ ಬಿಡುತ್ತಾ ಬಂದಾಗ ಏಲಕ್ಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಸರಿಯಾಗಿ ತೊಳಸಿ ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಪೌಷ್ಟಿಕ ಕ್ಯಾರೆಟ್ ಸೇಬು ಹಲ್ವಾ ಸಿದ್ಧ. ಇದನ್ನು ಸವಿಯಲು ಬಲು ರುಚಿಯಾಗಿರುತ್ತದೆ.

ಅತಿರಸ

ಬೇಕಾಗುವ ವಸ್ತುಗಳು: ½ ಕೆ.ಜಿ. ಅಕ್ಕಿ ಪುಡಿ, ½ ತೆಂಗಿನಕಾಯಿ, ½ ಕೆ.ಜಿ. ಬೆಲ್ಲ, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ಬಟ್ಟೆಯ ಮೇಲೆ ಹರಡಿ ಸ್ವಲ್ಪ ಒಣಗಿದ ಮೇಲೆ ಕುಟ್ಟಿ ಪುಡಿ ಮಾಡಿ ನಂತರ ಜರಡೆ ಹಿಡಿದು ಗಾಳಿಸಿ ಇಡಿ. ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಒಲೆಯ ಮೇಲಿರಿಸಿ. ತೆಂಗಿನಕಾಯಿಯನ್ನು ನೀರು ಸೇರಿಸದೆ ರುಬ್ಬಿ.

ಬೆಲ್ಲ ಎಳೆ ಪಾಕವಾದಾಗ ಒಲೆಯಿಂದ ಕೆಳಗಿಳಿಸಿ ಅಕ್ಕಿ ಪುಡಿ, ತೆಂಗಿನ ಮಿಶ್ರಣ ಹಾಕಿ ಸರಿಯಾಗಿ ಕಲಸಿ. ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿ. ನಂತರ ಕೈಯಲ್ಲಿ ಸ್ವಲ್ಪ ಚಪ್ಪಟೆ ಮಾಡಿ ವಡೆಯಂತೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಇದನ್ನು 5-6 ದಿವಸದವರೆಗೆ ಇಡಬಹುದು.

ಚಾಕೊಲೆಟ್ ಬಾಸುಂದಿ

ಬೇಕಾಗುವ ವಸ್ತುಗಳು: 2 ಲೀಟರ್ ಹಾಲು, 2 ಕಪ್ ಸಕ್ಕರೆ, 4 ಚಮಚ ಚಾಕೊಲೆಟ್ ಪುಡಿ, 5-6 ಗೋಡಂಬಿ, 5-6 ಒಣದ್ರಾಕ್ಷಿ, ½ ಚಮಚ ಏಲಕ್ಕಿ ಪುಡಿ, 2 ಚಮಚ ತುಪ್ಪ.

ಮಾಡುವ ವಿಧಾನ: ಒಲೆಯ ಮೇಲೆ ದಪ್ಪ ತಳದ ಪಾತ್ರೆ ಇಟ್ಟು ಹಾಲು ಹಾಕಿ ಕಾಯಿಸಬೇಕು. ನಂತರ 2 ಕಪ್ ಸಕ್ಕರೆ ಹಾಕಿ. ಅರ್ಧದಷ್ಟು ಇಂಗುವವರೆಗೆ ಮಂದ ಉರಿಯಲ್ಲಿ ತೊಳಸುತ್ತಾ ಕುದಿಸಬೇಕು. ಆಮೇಲೆ ಚಾಕೊಲೆಟ್ ಪುಡಿಯನ್ನು ಕದಡಿ ಹಾಲಿನ ಮಿಶ್ರಣಕ್ಕೆ ಬೆರೆಸಿ.

ಹಾಲು ಮತ್ತಷ್ಟು ಇಂಗಿದ ಮೇಲೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಕೆಳಗಿಳಿಸಬೇಕು. ಈಗ ರುಚಿಯಾದ ಬಾಸುಂದಿ ದೇವಿಯ ನೈವೇದ್ಯಕ್ಕೆ ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.