ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನಿನಿಂದ ಮಾಡಿ ಸವಿಯಿರಿ ಮಂಚೂರಿಯನ್‌, ಟಿಕ್ಕಾ!

Last Updated 25 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಗ್ರಿಲ್ಡ್‌ ಫಿಶ್‌

ಬೇಕಾಗುವ ಸಾಮಗ್ರಿಗಳು: ಮೀನು – 300 ಗ್ರಾಂ, ಈರುಳ್ಳಿ – 1/4 ಕಪ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ಕೆಂಪುಮೆಣಸಿನ ಪುಡಿ – 1 ಟೀ ಚಮಚ, ಅರಿಸಿನ ಪುಡಿ – ಚಿಟಿಕೆ, ಒಣಶುಂಠಿ ಪುಡಿ – ಚಿಟಿಕೆ, ಗರಂ ಮಸಾಲ – 3/4 ಚಮಚ, ನಿಂಬೆರಸ – 1 ಚಮಚ, ಉಪ್ಪು – ರುಚಿಗೆ, ರವೆ - 1 ಟೀ ಚಮಚ, ಎಣ್ಣೆ – 1 ಚಮಚ

ತಯಾರಿಸುವ ವಿಧಾನ: ಮೀನನ್ನು ಚೆನ್ನಾಗಿ ತೊಳೆದು ಟಿಶ್ಯೂವಿನಿಂದ ಒರೆಸಿಡಿ. ರವೆ ಬಿಟ್ಟು ಉಳಿದ ಸಾಮಗ್ರಿಗಳನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಅದರಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಒಂದು ಗಂಟೆ ನೆನೆಸಿಡಿ. ಓವೆನ್‌ ಅನ್ನು 160 ಸೆಲಿಯಸ್ಸ್‌ನಲ್ಲಿ ಬಿಸಿ ಮಾಡಿ. ಮೀನಿನ ಮೇಲಿನ ಮಸಾಲೆಯನ್ನು ಸವರಿ ತೆಗೆದು ಬೇರೆ ಪಾತ್ರೆಯಲ್ಲಿಡಿ. ಮೀನಿನ ಮೇಲೆ ರವೆಯನ್ನು ಚಿಮುಕಿಸಿ. ಅದನ್ನು ಓವೆನ್‌ನಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಯಿಸಿ. ನಂತರ ಇದನ್ನು ಈರುಳ್ಳಿ ಹಾಗೂ ತರಕಾರಿ ಸಲಾಡ್‌ ಜೊತೆ ತಿನ್ನಲು ಕೊಡಿ.

***


ತಂದೂರಿ ಫಿಶ್ ಟಿಕ್ಕಾ

ಬೇಕಾಗುವ ಸಾಮಗ್ರಿಗಳು: ಮುಳ್ಳು ರಹಿತ ಮೀನು – 1/2 ಕೆ.ಜಿ., ಎಣ್ಣೆ – ಕರಿಯಲು

ನೆನೆಸಿಡಲು: ಮೊಸರು – 1 ಕಪ್‌, ಮೆಣಸಿನಪುಡಿ – 1 ಟೀ ಚಮಚ, ಗರಂಮಸಾಲ – 1 ಟೀ ಚಮಚ, ಕಾಳುಮೆಣಸಿನ ಪುಡಿ – 1 ಟೀ ಚಮಚ, ಶುಂಠಿ–ಬೆಳ್ಳುಳ್ಳಿ – 1 ಟೇಬಲ್ ಚಮಚ, ನಿಂಬೆರಸ – 2 ಚಮಚ, ಕೊತ್ತಂಬರಿ ಸೊಪ್ಪು – 3 ಚಮಚ (ಸಣ್ಣಗೆ ಹೆಚ್ಚಿದ್ದು), ಪುದಿನ ಸೊಪ್ಪು – 3 ಟೇಬಲ್ ಚಮಚ (ಸಣ್ಣಗೆ ಹೆಚ್ಚಿದ್ದು), ಕಾರ್ನ್‌ಫ್ಲೋರ್‌ – 3 ಟೇಬಲ್ ಚಮಚ, ಎಣ್ಣೆ – 1 ಟೇಬಲ್ ಚಮಚ

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ನೆನೆಸಿಡಲು ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ತೊಳೆದು ಚೌಕಾಕಾರದಲ್ಲಿ ಕತ್ತರಿಸಿಕೊಂಡು ಮೀನಿನ ತುಂಡುಗಳನ್ನು ಸೇರಿಸಿ ಮತ್ತೆ ಮಿಶ್ರಣ ಮಾಡಿ ಅರ್ಧ ಗಂಟೆ ನೆನೆಸಿಡಿ. ಮರದ ಕಡ್ಡಿಗೆ ನೆನೆ ಹಾಕಿದ ಮೀನುಗಳನ್ನು ಸಿಕ್ಕಿಸಿ. ಮಧ್ಯಮ ಉರಿಯಲ್ಲಿ ನಾನ್‌ಸ್ಟಿಕ್ ತವಾವನ್ನು ಬಿಸಿಮಾಡಿ ನಾಲ್ಕೈದು ಹನಿ ಎಣ್ಣೆ ಹಾಕಿ. ಅದರ ಮೇಲೆ ಕಡ್ಡಿಗೆ ಸಿಕ್ಕಿಸಿದ ಮೀನನ್ನು ನೀಟಾಗಿ ಜೋಡಿಸಿ. ಸಣ್ಣ ಉರಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಿ. ಬಿಸಿಯಿದ್ದಾಗಲೇ ತಿನ್ನಲು ಚೆನ್ನಾಗಿರುತ್ತದೆ.

**


ಚಿಲ್ಲಿ ಮಂಚೂರಿಯನ್‌ ಫಿಶ್‌

ಬೇಕಾಗುವ ಸಾಮಗ್ರಿಗಳು: ಎಣ್ಣೆ – ಕರಿಯಲು, ಮೀನಿನ ತುಂಡು – 250 ಗ್ರಾಂ, ಕಾರ್ನ್‌ಫ್ಲೋರ್‌ – 1 1/2 ಟೇಬಲ್ ಚಮಚ, ಮೈದಾಹಿಟ್ಟು – 1 1/2 ಟೇಬಲ್ ಚಮಚ, ಉಪ್ಪು – ರುಚಿಗೆ

ನೆನೆಸಿಡಲು: ಸೋಯಾ ಸಾಸ್‌ – 3/4 ಟೀ ಚಮಚ, ಕಾಳುಮೆಣಸಿನ ಪುಡಿ – 1/4 ಟೀ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಚಮಚ

ಚಿಲ್ಲಿ ಮಂಚೂರಿಯನ್ ಸಾಸ್ ತಯಾರಿಸಲು: ಬೆಳ್ಳುಳ್ಳಿ – 4 ಎಸಳು (ಚೆನ್ನಾಗಿ ಹೆಚ್ಚಿದ್ದು), ಈರುಳ್ಳಿ – 1 ಮಧ್ಯಮ ಗಾತ್ರದ್ದು, ದೊಣ್ಣೆಮೆಣಸು – 1/4 ಕಪ್ (ಸಣ್ಣಗೆ ಹೆಚ್ಚಿದ್ದು), ಕೆಂಪು ದೊಣ್ಣೆಮೆಣಸು– 1/4 ಕಪ್ (ಸಣ್ಣಗೆ ಹೆಚ್ಚಿದ್ದು), ಸೋಯಾ ಸಾಸ್‌ – 1 ಟೇಬಲ್ ಚಮಚ, ವಿನೆಗರ್‌ – 1 ಟೀ ಚಮಚ, ಚಿಲ್ಲಿ ಸಾಸ್‌ – 1 1/2 ಚಮಚ, ನೀರು – 2 ಟೇಬಲ್ ಚಮಚ, ಸಕ್ಕರೆ – 1 ಟೀ ಚಮಚ, ಕಾರ್ನ್‌ಫ್ಲೋರ್ – 3/4 ಚಮಚ (ಅಗತ್ಯವಿದ್ದರೆ)

ತಯಾರಿಸುವ ವಿಧಾನ: ಸಾಸ್ ತಯಾರಿಸಿಕೊಳ್ಳಲು ಮೊದಲು ಸೋಯಾ ಸಾಸ್‌, ಚಿಲ್ಲಿ ಸಾಸ್‌, ಸಕ್ಕರೆ ಹಾಗೂ ವಿನೆಗರ್‌ ಸೇರಿಸಿ ಒಂದೆಡೆ ಇಡಿ. ಮೀನನ್ನು ಚೆನ್ನಾಗಿ ತೊಳೆದು ಚೌಕಾಕಾರಕ್ಕೆ ಕತ್ತರಿಸಿ. ಅದಕ್ಕೆ ಸೋಯಾ ಸಾಸ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಹತ್ತು ನಿಮಿಷ ಇಡಿ. ನಂತರ ಎಣ್ಣೆ ಬಿಸಿ ಮಾಡಲು ಇಡಿ. ನಂತರ ಮೀನಿಗೆ ಕಾರ್ನ್‌ಫ್ಲೋರ್‌, ಮೈದಾಹಿಟ್ಟು, ಉಪ್ಪು ಸೇರಿಸಿ. ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ಕಲೆಸಿ. ಹಿಟ್ಟು, ಮೀನಿಗೆ ಹಿಡಿದುಕೊಳ್ಳುವಂತೆ ಗಟ್ಟಿಯಾಗಿ ಕಲೆಸಿ. ನಂತರ ಕಾದ ಎಣ್ಣೆಯಲ್ಲಿ ಮೀನನ್ನು ಕರಿಯಿರಿ.

ಚಿಲ್ಲಿ ಮಂಚೂರಿಯನ್‌ ತಯಾರಿಸುವುದು: ಪ್ಯಾನ್‌ವೊಂದಕ್ಕೆ ಬೆಳ್ಳುಳ್ಳಿ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ಅದಕ್ಕೆ ದೊಣ್ಣೆಮೆಣಸು, ಈರುಳ್ಳಿ ಸೇರಿಸಿ ದೊಡ್ಡ ಉರಿಯಲ್ಲಿ ಗರಿಗರಿಯಾಗುವರೆಗೆ ಎರಡು ನಿಮಿಷ ಹುರಿದುಕೊಳ್ಳಿ. ಮೊದಲೇ ತಯಾರಿಸಿಕೊಂಡ ಸಾಸ್‌ ಮಿಶ್ರಣ ಸೇರಿಸಿ, 2 ಚಮಚ ನೀರು ಸೇರಿಸಿ. ಅದನ್ನು ಚೆನ್ನಾಗಿ ಕುದಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸಾಸ್‌ ಕುದಿಯಲು ಆರಂಭಿಸಿದಾಗ ಕರಿದ ಮೀನು ಸೇರಿಸಿ ಮತ್ತೆ ಹುರಿಯಿರಿ. ದೊಡ್ಡ ಉರಿಯಲ್ಲಿ 2 ನಿಮಿಷ ತಿರುಗಿಸಿ. ಅದು ಗ್ರೇವಿ ರೂಪಕ್ಕೆ ಬಂದ ಮೇಲೆ ಮತ್ತೆ ಸ್ವಲ್ಪ ಸಾಸ್ ಹಾಗೂ ಕಾರ್ನ್‌ಫ್ಲೋರ್ ಸೇರಿಸಿ ಅದಕ್ಕೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಈರುಳ್ಳಿಯಿಂದ ಅಲಂಕರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT