ಹೆರಿಟೇಜ್ ಫುಡ್ಸ್ ಖ್ಯಾತ ಸೆಲೆಬ್ರಿಟಿ ಶೆಫ್ ಭಕ್ತಿ ಅರೋರಾ ಅವರೊಂದಿಗೆ ಗ್ರಾಹಕರಿಗಾಗಿ #ಹೆರಿಟೇಜ್ ಬೈಟ್ಸ್ ಎಂಬ ಖಾದ್ಯ ಹಬ್ಬವನ್ನು ಹಮ್ಮಿಕೊಂಡಿದೆ. ಈ ಹಬ್ಬದ ಋತುವಿನಲ್ಲಿ ದೈನಂದಿನ ಖಾದ್ಯಗಳು ಮತ್ತು ನಿಯತವಾದ ಪಾರ್ಟಿಗಳಿಗಾಗಿ ಹೆರಿಟೇಜ್ ಹಾಲು, ಮೊಸರು, ಪನೀರ್ ಮತ್ತು ತುಪ್ಪದಿಂದ ಸಿದ್ಧಪಡಿಸುವ ಖಾದ್ಯಗಳನ್ನು ತಯಾರಿಸುವ ವಿಧಾನ ಹೇಳಿಕೊಡಲಾಗುತ್ತದೆ.

ಪೌಷ್ಟಿಕ, ಆರೋಗ್ಯದಾಯಕ ಮತ್ತು ಆನಂದದಾಯಕ ಆಯಾಮಗಳ ಬಗ್ಗೆಯೂ ಈ ಅಭಿಯಾನ ಅರಿವು ಮೂಡಿಸಲಿದೆ. ದೀಪಾವಳಿ, ಕ್ರಿಸ್ಮಸ್, ಹೊಸವರ್ಷ, ಪ್ರೇಮಿಗಳ ದಿನ ಮತ್ತು ಹೋಳಿ ಹಬ್ಬಕ್ಕೆ ಶೆಫ್ ಭಕ್ತಿ ಅರೋರಾ ತಯಾರಿಸಿದ ವಿಶೇಷ ಬಾಯಿ ಚಪ್ಪರಿಸುವ ಖಾದ್ಯಗಳನ್ನು ಸಿದ್ಧಪಡಿಸಲಿದ್ದಾರೆ. ಇಂಥ ಕೆಲ ಖಾದ್ಯಗಳಲ್ಲಿ ದೈನಂದಿನ ಕ್ಷಿಪ್ರ ಖಾದ್ಯಗಳು ಮತ್ತು ಪಾರ್ಟಿಯ ವಿಶೇಷ ಖಾದ್ಯಗಳು ಮತ್ತು ಮನೆಯ ಕೂಟಗಳಿಗೆ ಅಗತ್ಯವಾದ ಖಾದ್ಯಗಳು ಸೇರಿವೆ.

‘ವಿಶಿಷ್ಟ ಖಾದ್ಯ ಅಭಿಯಾನ ಹೆರಿಟೇಜ್ ಬೈಟ್ಸ್ ಜತೆಗೆ ಗುರುತಿಸಿಕೊಳ್ಳಲು ಅತೀವ ಸಂತಸವಾಗುತ್ತಿದೆ. ಪೌಷ್ಟಿಕ ಮತ್ತು ರುಚಿದಾಯಕ ಆಹಾರವೆನಿಸಿದ ಹೆರಿಟೇಜ್ ಫುಡ್ಸ್ನ ಮೊಸರು, ಹಾಲು, ಪನೀರ್ ಮತ್ತು ತುಪ್ಪದಿಂದ ತಯಾರಿಸುವ ಖಾದ್ಯಗಳನ್ನು ಕಲಿಯಲು ಇದು ಅವಕಾಶವಾಗಲಿದೆ’ ಎನ್ನುತ್ತಾರೆ ಸೆಲೆಬ್ರಿಟಿ ಶೆಫ್ ಭಕ್ತಿ ಅರೋರಾ.

‘ಹಬ್ಬದ ಋತುವಿನಲ್ಲಿ, ದೈನಂದಿನ ತಿನಿಸುಗಳು ಮತ್ತು ಮನೆಗಳಲ್ಲಿ ಆಯೋಜಿಸುವ ಸಣ್ಣ ಪುಟ್ಟ ಪಾರ್ಟಿಗಳಿಗೆ ಹಾಲು, ಮೊಸರು, ಪನೀರ್ ಹಾಗೂ ತುಪ್ಪದಿಂದ ತಯಾರಿಸಿದ ಖಾದ್ಯಗಳನ್ನು ತಯಾರಿಸಿಕೊಳ್ಳುವ ವಿಧಾನ ಕಲಿಯಲು ಈ ಅಭಿಯಾನ ಅನುಕೂಲವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರುವ ಹಾಗೂ ಪೌಷ್ಟಿಕತೆಯನ್ನು ಗುರಿಯಾಗಿಸಿದ ಗೃಹಿಣಿಯರಿಗೆ ಮತ್ತು ವೃತ್ತಿಪರ ಮಹಿಳೆಯರಿಗೆ ಅನುಕೂಲ ಮಾಡಿಕೊಡುವುದು ಅಭಿಯಾನದ ಉದ್ದೇಶ’ ಎನ್ನುತ್ತಾರೆ ಹೆರಿಟೇಜ್ ಫುಡ್ಸ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಹ್ಮಿಣಿ ನಾರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.