ಶನಿವಾರ, ಡಿಸೆಂಬರ್ 3, 2022
21 °C

ರೆಸಿಪಿ: ಆಲೂಗೆಡ್ಡೆ, ಚೀಸ್‌ ಪ್ಯಾನ್‌ಕೇಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲೂಗೆಡ್ಡೆ ತಿನ್ನುವುದು ಬಹುತೇಕರಿಗೆ ಇಷ್ಟವಾಗುತ್ತದೆ. ಆದರೆ ಆರೋಗ್ಯದ ವಿಷಯಕ್ಕೆ ಬಂದರೆ ಇದು ಅಷ್ಟೇನು ಉತ್ತಮವಲ್ಲ ಎನ್ನುವ ಮಾತಿದೆ. ಆದರೂ ನಾಲಿಗೆ ಕೇಳಬೇಕಲ್ಲ. ಆಲೂಗೆಡ್ಡೆ ಚಿಪ್ಸ್‌, ಫ್ರೆಂಚ್‌ ಫ್ರೈಸ್‌ ಈ ಹೆಸರು ಕೇಳಿದರೇ ನಾಲಿಗೆಯ ತುದಿಯಲ್ಲಿ ನೀರೂರುತ್ತದೆ. ಈ ತಿನಿಸುಗಳನ್ನು ಮನೆಯಲ್ಲೂ ಮಾಡಿ ತಿನ್ನುತ್ತೇವೆ. ಇಂತಹ ತಿಂಡಿಗಳು ಮಕ್ಕಳಿಂದ ಹಿಡಿದು ಹಿರಿಯರಿಗೂ ಇಷ್ಟವಾಗುತ್ತದೆ. ಮಕ್ಕಳಿಗಂತೂ ಆಲೂಗೆಡ್ಡೆಯಿಂದ ತಯಾರಿಸುವ ರೆಸಿಪಿಗಳು ಬಹಳ ಇಷ್ಟವಾಗುತ್ತವೆ. ಇದರಿಂದ ಪದೇ ಪದೇ ಒಂದೇ ಬಗೆಯ ರೆಸಿಪಿಗಳನ್ನು ತಯಾರಿಸಿ ತಿನ್ನುವುದಕ್ಕಿಂತ ಅದರಲ್ಲೇ ವೆರೈಟಿ ಎನ್ನಿಸುವ ರೆಸಿಪಿಯನ್ನು ತಯಾರಿಸಬಹುದು. ಇದು ನಿಮ್ಮ ಬಾಯಿಯ ರುಚಿ ತಣಿಸುವುದರಲ್ಲಿ ಸಂಶಯವಿಲ್ಲ.

ಆಲೂಗೆಡ್ಡೆ ಚೀಸ್‌ ಪ್ಯಾನ್‌ಕೇಕ್‌ ಮಾಡಿದರೆ ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತಿನ್ನುವ ಈ ತಿಂಡಿ ಸಂಜೆಯ ಸ್ನ್ಯಾಕ್ಸ್‌ಗೆ ಹೆಚ್ಚು ಹೊಂದುತ್ತದೆ. ಅದನ್ನು ಮಾಡುವುದು ಬಲು ಸುಲಭ. ಜೊತೆಗೆ ಮನೆಯಲ್ಲೇ ಇರುವ ಕಡಿಮೆ ಸಾಮಗ್ರಿಗಳಿಂದ ಬಲು ಬೇಗನೆ ತಯಾರಿಸಬಹುದು.

ಆಲೂಗೆಡ್ಡೆ ಪ್ಯಾನ್‌ಕೇಕ್‌ಗೆ
ಬೇಕಾಗುವ ಸಾಮಗ್ರಿಗಳು:
ಪುಡಿ ಮಾಡಿದ ಆಲೂಗೆಡ್ಡೆ – 4, ಚೀಸ್‌ – 2 ಕಪ್‌, ಮೊಟ್ಟೆ – 1, ಮೈದಾಹಿಟ್ಟು – 1/4 ಕಪ್‌, ಈರುಳ್ಳಿ ದಂಟು – 2, 1/2 ಟೇಬಲ್ ಚಮಚ, ಬ್ರೆಡ್‌ ಪುಡಿ – 1/2 ಕಪ್‌, ಅಡುಗೆ ಎಣ್ಣೆ – 2 ಟೇಬಲ್ ಚಮಚ, ಕ್ರೀಮ್‌ – ನೆಂಚಿಕೊಳ್ಳಲು.

ತಯಾರಿಸುವ ವಿಧಾನ
ಆಲೂಗೆಡ್ಡೆ ಮ್ಯಾಷ್ ಮಾಡುವುದು:
ಪಾತ್ರೆಯಲ್ಲಿ ನೀರಿಟ್ಟು ಅದಕ್ಕೆ 1 ಚಮಚ ಉಪ್ಪು ಹಾಗೂ ಸಿಪ್ಪೆ ತೆಗೆದ ಆಲೂಗೆಡ್ಡೆ ಹಾಕಿ. ಚೆನ್ನಾಗಿ ಬೇಯಿಸಿ. ಅದನ್ನು ತಣ್ಣಗಾಗಿಸಿ ಅದಕ್ಕೆ 4 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕಿವುಚಿ.

ಪ್ಯಾನ್‌ಕೇಕ್ ಮಾಡುವುದು: ಒಂದು ಅಗಲವಾದ ಮಿಕ್ಸಿಂಗ್ ಬೌಲ್‌ನಲ್ಲಿ 4 ಕಪ್‌ ಕಿವುಚಿದ ಆಲೂಗೆಡ್ಡೆ, 2 ಕಪ್ ತುರಿದ ಚೀಸ್‌, 1 ಮೊಟ್ಟೆ, ಕಾಲು ಕಪ್‌ ಹಿಟ್ಟು ಹಾಗೂ 2 ಚಮಚ ಈರುಳ್ಳಿ ದಂಟನ್ನು ಕತ್ತರಿಸಿ ಹಾಕಿ. ಇವೆಲ್ಲವನ್ನೂ ಕಿವುಚಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ದಪ್ಪವಾಗಿರಬೇಕು. ಮಿಶ್ರಣವನ್ನು ತೆಗೆದುಕೊಂಡು ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಅದರ ಎರಡೂ ಬದಿಗೆ ಬ್ರೆಡ್‌ ಪುಡಿ ಅಂಟುವಂತೆ ನೋಡಿಕೊಳ್ಳಿ. ನಂತರ ಎಣ್ಣೆ ಬಿಸಿಮಾಡಿ ಪ್ಯಾನ್‌ಕೇಕ್‌ ಅನ್ನು ಎಣ್ಣೆಯಲ್ಲಿ 3 ರಿಂದ 4 ನಿಮಿಷ ಕರಿಯಿರಿ. ಎರಡೂ ಭಾಗ ಕಂದು ಬಣ್ಣ ಬರುವವರೆಗೂ ಕರಿದು ತೆಗೆಯಿರಿ. ಈಗ ನಿಮ್ಮ ಮುಂದೆ ರುಚಿಯಾದ ಆಲೂಗೆಡ್ಡೆ ಚೀಸ್‌ ಪ್ಯಾನ್‌ಕೇಕ್ ತಿನ್ನಲು ಸಿದ್ಧವಾಗಿರುತ್ತದೆ. ಇದನ್ನು ಸಾಸ್‌ ಅಥವಾ ಕೆಚಪ್‌ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು