ಮಂಗಳವಾರ, ನವೆಂಬರ್ 29, 2022
21 °C

‘ಗೌರಿ–ಗಣೇಶ‘ರ ನೆನಪಲ್ಲಿ ಕಡುಬು, ಮೋದಕ ವೈವಿಧ್ಯ

ಸುಮಾ ಬಿ. Updated:

ಅಕ್ಷರ ಗಾತ್ರ : | |

Prajavani

ಉದ್ದಿನಕಡುಬು

ಬೇಕಾಗುವ ಸಾಮಗ್ರಿಗಳು: ಉದ್ದಿನ ಬೇಳೆ, ಹೆಸರು ಬೇಳೆ, ಕಡ್ಲೆ ಬೇಳೆ  ತಲಾ ಕಾಲು ಕಪ್ಪು, ಕೊತ್ತಂಬರಿ ಬೀಜ– 1 ಟೀ ಚಮಚ, ಜೀರಿಗೆ– 1 ಟೀ ಚಮಚ, ಬೆಳ್ಳುಳ್ಳಿ– ನಾಲ್ಕೈದು ಎಸಳು, ಹಸಿ ಮೆಣಸಿನ ಕಾಯಿ– ನಾಲ್ಕೈದು, ಅಕ್ಕಿ ಹಿಟ್ಟು– 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ನೀರು ಹದಕ್ಕೆ ಬೇಕಾದಷ್ಟು.

ತಯಾರಿಸುವ ವಿಧಾನ: ಹಿಂದಿನ ದಿನ ರಾತ್ರಿ ಮೂರೂ ಬೇಳೆಗಳನ್ನು ಸಮ ಪ್ರಮಾಣದಲ್ಲಿ ಹಾಕಿ ನೆನೆಸಿ ಇಡಬೇಕು. (ರಾತ್ರಿ ನೆನಪಾಗದಿದ್ದರೆ ಬೆಳಿಗ್ಗೆ ಬಿಸಿನೀರಿನಲ್ಲಿ ಒಂದು ಗಂಟೆ ನೆನೆಸಿಡಬಹುದು). ಬೆಳಿಗ್ಗೆ ನೆನೆದ ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಹಸಿ ಮೆಣಸು, ಉಪ್ಪು ಹಾಕಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. (ಅಗತ್ಯವಿದ್ದರೆ ಸ್ವಲ್ಪ ನೀರು ಬಳಸಬಹುದು).

ಇತ್ತ ಒಂದು ಪಾತ್ರೆಯಲ್ಲಿ ಮೂರು ಲೋಟ ನೀರು ಇಟ್ಟು, ಸ್ವಲ್ಪ ಉಪ್ಪು ಹಾಕಿ ಕುದಿಯಲು ಬಿಡಬೇಕು. ನೀರು ಕುದಿ ಬಂದ ಬಳಿಕ ಅಕ್ಕಿ ಹಿಟ್ಟು ಹಾಕಿ ಕೂಡಿಸಬೇಕು. ಹಿಟ್ಟು ನೀರಿನೊಂದಿಗೆ ಚೆನ್ನಾಗಿ ಬೆರೆತು ಗಟ್ಟಿಯಾದ ಬಳಿಕ 2 ನಿಮಿಷ ಬಿಟ್ಟು ಒಲೆಯಿಂದ ಕೆಳಗಿಸಬೇಕು. ಹಿಟ್ಟು ಆರಿದ ಬಳಿಕ ಚೆನ್ನಾಗಿ ರೊಟ್ಟಿ ಹಿಟ್ಟಿನ ಹದಕ್ಕೆ ನಾದಿಕೊಂಡು ಬಟ್ಟಲ ರೀತಿ ಮಾಡಿಕೊಂಡು ಅದರ ಒಳಗೆ ರುಬ್ಬಿಕೊಂಡ ಮಿಶ್ರಣ ಹಾಕಿ ಎರಡು ಬದಿಯನ್ನು ಮುಚ್ಚಬೇಕು. ಹೀಗೆ ಎಲ್ಲವನ್ನೂ ಮಾಡಿಟ್ಟುಕೊಂಡು ಬಳಿಕ ಹಬೆಯಲ್ಲಿ ಬೇಯಿಸಬೇಕು. ಒಂದು ಪಾತ್ರೆಗೆ ತಳಭಾಗದಲ್ಲಿ ನೀರು ಹಾಕಿ ರಂಧ್ರಗಳಿರುವ ಇರುವ ಇನ್ನೊಂದು ಪಾತ್ರೆಯನ್ನು ಮೇಲ್ಭಾಗದಲ್ಲಿ ಇಡಬೇಕು. ಆ ಪಾತ್ರೆಯಲ್ಲಿ ಮಾಡಿಟ್ಟುಕೊಂಡ ಕಡುಬುಗಳನ್ನು ಇಟ್ಟು 20 ನಿಮಿಷ ಮಧ್ಯಮ ಉರಿಯಲ್ಲಿ ಬೇಹಿಸಬೇಕು. ಕಾಯಿ ಚಟ್ನಿ ಜತೆ ಬಿಸಿ ಇರುವಾಗಲೇ ಸವಿಯಿರಿ.

ಮಾಹಿತಿ: ಸುಮಾ ಬಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.