ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಗೆ ಕುಸುರೆಳ್ಳು ತಯಾರಿ ಹೇಗೆ?

Published 12 ಜನವರಿ 2024, 21:36 IST
Last Updated 12 ಜನವರಿ 2024, 21:36 IST
ಅಕ್ಷರ ಗಾತ್ರ

ಮಕರ ಸಂಕ್ರಾಂತಿಯು ಸೂರ್ಯನನ್ನು ಆರಾಧಿಸುವ ಹಬ್ಬ. ಶಿಶಿರ ಋತು (ಚಳಿಗಾಲ) ಅಂತ್ಯವಾಗಿ ವಸಂತ ಋತುವಿನ ಆಗಮ‌ನದ ಸಂಕೇತ. ವಿವಿಧ ಬಗೆಯ ಖಾದ್ಯಗಳ‌ ಸೇವನೆ ಈ ಹಬ್ಬದ ಆಚರಣೆಯ ವಿಶೇಷ.

ಸಂಕ್ರಾಂತಿ ಎಂದಾಕ್ಷಣ ನಾಲಿಗೆಗೆ ಸಾಂಪ್ರದಾಯಿಕ ಖಾದ್ಯಗಳ ರುಚಿಯೇ ನೆನಪಾಗಿ ಬಿಡುತ್ತದೆ. ಅದರಲ್ಲಿ ವಿಶೇಷವಾಗಿ ಕುಸುರೆಳ್ಳು. ಈ ಕುಸುರೆಳ್ಳು ನಮ್ಮ ಸಾಂಪ್ರದಾಯದ ಆಹಾರ ಪದ್ಧತಿಯ ಪ್ರತೀಕವೇ. ಸಂಕ್ರಾಂತಿಗೆ ಕುಸುರೆಳ್ಳು ಮಾಡಿ ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಹಂಚುವ ಖುಷಿಯೊಳಗೆ ಪರಸ್ಪರೆಡೆಗೆ ವೃದ್ಧಿಯಾಗುವ ಪ್ರೀತಿ ಬದುಕಿಗೆ ಹೊಸ ಉಲ್ಲಾಸ ಕೊಡುವುದು. ಈ ಪ್ರೀತಿ ಹಬ್ಬಿಸುವ ಕುಸುರೆಳ್ಳನ್ನು ಮಾಡುವ ವಿಧಾನವನ್ನು ಅರಿಯೋಣ ಬನ್ನಿ

ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಸಕ್ಕರೆ, ಒಂದು ಕಪ್ ಹಾಲು, ಬಿಳಿ ಎಳ್ಳು ಮತ್ತು ಅಡುಗೆಗೆ ಬಳಸುವ ಕಲರ್ ಪೌಡರ್‌.

ಮಾಡುವ ವಿಧಾನ: ಒಲೆ ಮೇಲೆ ಒಂದು ಬಾಣಲೆಗೆ ಸಕ್ಕರೆ, ಸ್ವಲ್ಪ ನೀರು ಮತ್ತು ಹಾಲು ಹಾಕಿ ಒಂದೆಳೆ ಬರುವ ಹಾಗೆ ಪಾಕ ಮಾಡಿಕೊಳ್ಳಬೇಕು. ನಂತರ ಒಂದು ಜಾಲರಿಗೆ (ಚಹಾ ಸೋಸುವ ಸಾಣಿಗೆ) ಒಂದು ತೆಳುವಾದ ಕಾಟನ ಬಟ್ಟೆ ಹಾಕಿ ಒಂದು ಬೌಲ್‌ನಲ್ಲಿ ಸೊಸಿಕೊಳ್ಳಬೇಕು. ಹಿತ್ತಾಳೆ ಪಾತ್ರೆಯನ್ನಾದರೂ ಬಳಸಬಹುದು ಅಥವಾ ನಾನ್‌ಸ್ಟಿಕ್‌ ಬಾಣಲೆಯನ್ನಾದರೂ ಬಳಸಬಹುದು. ಸಣ್ಣ ಉರಿಯಲ್ಲಿ ಕಾಯ್ದ ಬಾಣಲೆಗೆ ಒಂದು ಚಮಚದಷ್ಟು ಬಿಳಿ ಎಳ್ಳನ್ನು ಹಾಕಿ ಬಿಸಿ ಮಾಡಬೇಕು, ನಂತರ ಸ್ವಲ್ಪ ಸ್ವಲ್ಪ ಸಕ್ಕರೆ ಪಾಕ ಹಾಕಿ  ಹುರಿದುಕೊಳ್ಳಬೇಕು. ಮೂರರಿಂದ ನಾಲ್ಕು ಬಾರಿ ಎಳ್ಳು ಮತ್ತು ಸಕ್ಕರೆ ಪಾಕ ಹಾಕಿ ಮಿಶ್ರಣ ಮಾಡಬೇಕು. ನಮಗೆ ಬೇಕಾದ ಗಾತ್ರದಲ್ಲಿ ಕುಸುರೆಳ್ಳು ಆಕಾರಕ್ಕೆ ಬರುವವರೆಗೂ ಸಕ್ಕರೆ ಪಾಕ ಮಿಶ್ರಣ ಮಾಡುತ್ತಿರಬೇಕು.

ರೆಡಿಮಾಡಿಕೊಂಡ ಕುಸುರೆಳ್ಳಿಗೆ ಅಡುಗೆ ಬಳಸುವ ನಮಗೆ ಬೇಕಾದ ಕಲರ್‌ ಅನ್ನು ಒಂದು ಸ್ಪೂನ್‌ನಷ್ಟು ಸಕ್ಕರೆ ಪಾಕಕ್ಕೆ ನಮಗೆ ಬೇಕಾದ ಕಲರ್‌ ಹಾಕಿ ಮಿಶ್ರಣ ಮಾಡಿ ಕುಸುರೆಳ್ಳಿಗೆ ಮಿಶ್ರಣ ಮಾಡಬಹುದು. ಹೀಗೆ ನಿಮಗಿಷ್ಟ ಆಗುವ ಕಲರ್‌ ಬಳಸಿ ಬಿಳಿ ಕುಸುರೆಳ್ಳಿಗೆ ಬೆರೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT