ಸೀ ಫುಡ್ಗಳಲ್ಲಿ ಹೆಚ್ಚು ರುಚಿ ಎನ್ನಿಸುವುದು ಮರುವಾಯಿ ಅಥವಾ ಕಪ್ಪೆಚಿಪ್ಪು. ಕೆಲವು ಸೀಸನ್ಗಳಲ್ಲಿ ಮಾತ್ರ ಸಿಗುವ ಅಪರೂಪದ ಕಪ್ಪೆಚಿಪ್ಪಿನಲ್ಲಿ ಮಾಂಸ ಕಮ್ಮಿ ಇದ್ದರೂ ತಿನ್ನಲು ಬಲು ರುಚಿ. ತೆಂಗಿನತುರಿ ಸೇರಿಸಿ ಮಾಡಿದ ಬಿಸಿಬಿಸಿ ಸುಕ್ಕ ತಿಂದರೆ ಮತ್ತೊಮ್ಮೆ ತಿನ್ನಬೇಕು ಅನ್ನಿಸದೇ ಇರದು. ಬಸಳೆ ಸೊಪ್ಪು ಹಾಗೂ ಚಿಪ್ಪು ಸೇರಿಸಿ ಮಾಡಿದ ಸಾಂಬಾರು ಕುಚ್ಚಲಕ್ಕಿ ಅನ್ನಕ್ಕೆ ಸೂಪರ್ ಕಾಂಬಿನೇಷನ್. ಮಂಗಳೂರು, ಉಡುಪಿ ಭಾಗದ ಖಾದ್ಯ ಮರುವಾಯಿ ಪುಂಡಿಯ ರುಚಿ ಸವಿದೇ ನೋಡಬೇಕು. ಇದನೆಲ್ಲಾ ನೀವು ಮನೆಯಲ್ಲೇ ಮಾಡಿ ತಿನ್ನಿ ಎನ್ನುತ್ತಾರೆ ಪವಿತ್ರಾ ರಾಘವೇಂದ್ರ ಶೆಟ್ಟಿ.

ಮರುವಾಯಿ ಗಸಿ
(ಕಪ್ಪೆ ಚಿಪ್ಪು ಗಸಿ)

ಬೇಕಾಗುವ ಸಾಮಗ್ರಿಗಳು: ಮರುವಾಯಿ – 1 ಕೆ.ಜಿ. ಚೆನ್ನಾಗಿ ತೊಳೆದು ಭಾಗ ಮಾಡಿಟ್ಟುಕೊಳ್ಳಿ.

ಮಸಾಲೆಗೆ: ತೆಂಗಿನಕಾಯಿ – 1½ ಕಪ್, ಕೆಂಪು ಮೆಣಸು – 10ರಿಂದ 12, ಜೀರಿಗೆ – ಸ್ವಲ್ಪ, ಕೊತ್ತಂಬರಿ – 1 ಟೇಬಲ್ ಚಮಚ, ಮೆಂತ್ಯೆ – ಸ್ವಲ್ಪ, ಕಾಳುಮೆಣಸು – 5 ಕಾಳು, ಹದ ಗಾತ್ರದ ಈರುಳ್ಳಿ – 1, ಅರಿಸಿನ – ಸ್ವಲ್ಪ, ಬೆಳ್ಳುಳ್ಳಿ – 4 ಎಸಳು, ಹುಳಿ- ನೆಲ್ಲಿಕಾಯಿ ಗಾತ್ರದ್ದು.

ತಯಾರಿಸುವ ವಿಧಾನ: ಮಸಾಲೆ ಸಾಮಗ್ರಿಗೆ ಸ್ವಲ್ಪ ನೀರು ಬೆರೆಸಿ ನಯವಾಗಿ ರುಬ್ಬಿಟ್ಟುಕೊಳ್ಳಿ. ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಆಮೇಲೆ ಕರಿಬೇವು, 3 ಎಸಳು ಬೆಳ್ಳುಳ್ಳಿ ಹಾಕಿ. ತದನಂತರ ಈರುಳ್ಳಿ ಹಾಕಿ ಕೆಂಪಗಾದ ನಂತರ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ. ನಂತರ ಒಂದು ಟೊಮೆಟೊ ಕತ್ತರಿಸಿ ಹಾಕಿ. ಒಂದು ಕುದಿ ಬರುವವರೆಗೂ ಚೆನ್ನಾಗಿ ಕುದಿಸಿ ಆಮೇಲೆ ಅದಕ್ಕೆ ಮರುವಾಯಿ ಹಾಕಿ. ಮಸಾಲೆ ತುಂಬಾ ಗಟ್ಟಿ ಆಗಿದ್ದರೆ ಸಾರಿನ ಹದಕ್ಕೆ ಬರುವಷ್ಟು ನೀರು ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕುದಿಸಿ.

ಮರುವಾಯಿ ಪುಂಡಿ

ಪುಂಡಿಗೆ ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಕಪ್, ರುಬ್ಬಲು ಸ್ವಲ್ಪ ನೀರು, ಉಪ್ಪು.

ಪುಂಡಿ ತಯಾರಿಸುವ ವಿಧಾನ: ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಎರಡು ಗಂಟೆ ನೆನೆಸಿಡಿ. ನಂತರ ಗ್ರೈಂಡರ್ ಅಥವಾ ಮಿಕ್ಸಿಗೆ ನೆನೆಸಿಟ್ಟ ಅಕ್ಕಿ ಹಾಕಿ ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಉಂಡೆ ಕಟ್ಟುವ ಹದಕ್ಕೆ ರುಬ್ಬಿಕೊಳ್ಳಿ. ನಂತರ ಪುಂಡಿ ಬೇಯಿಸಿಕೊಳ್ಳುವ ಪಾತ್ರೆಗೆ ಹಾಕಿ ಅದನ್ನು ಬೇಯಿಸಿಟ್ಟುಕೊಂಡು ಒಂದೊಂದು ಉಂಡೆಯನ್ನು ನಾಲ್ಕು ತುಂಡುಗಳಾಗಿ ಮಾಡಿಟ್ಟುಕೊಳ್ಳಿ.

ಮರುವಾಯಿ ಗಸಿ ತಯಾರಿಸುವ ವಿಧಾನ: ಒಂದು ಬಾಣಲೆಗೆ 1 ಟೀ ಚಮಚ ಎಣ್ಣೆ ಹಾಕಿ. ಅದಕ್ಕೆ ಎಂಟರಿಂದ ಹತ್ತು ಒಣಮೆಣಸು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. 3 ಚಮಚ ಕೊತ್ತಂಬರಿ, 5ರಿಂದ 6 ಕಾಳು ಮೆಂತ್ಯೆ, 1 ಚಮಚ ಜೀರಿಗೆ ಹಾಕಿ ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ. ಹದವಾಗಿ ಹುರಿದರೆ ಸಾಕು. ನಂತರ ರುಬ್ಬುವುದಕ್ಕೆ ಮಿಕ್ಸಿಗೆ ಹಾಕುವಾಗ ಒಂದು ಕಪ್ ತೆಂಗಿನತುರಿ, ಸಣ್ಣ ಚೂರು ಹುಣಸೆಹಣ್ಣು ಹಾಗೂ ಕಾಲು ಚಮಚ ಅರಿಸಿನ, 4 ಎಸಳು ಬೆಳ್ಳುಳ್ಳಿ ಹಾಕಿ ತುಸು ನೀರು ಬೆರೆಸಿ ನಯವಾಗಿ ರುಬ್ಬಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಉಪ್ಪು, ಬೇಕಾದಷ್ಟು ನೀರು ಸೇರಿಸಿ ಕುದಿಸಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಮರುವಾಯಿ ಹಾಕಿ ಕುದಿಯಲು ಬಿಡಿ ಆಮೇಲೆ ಅದಕ್ಕೆ ಕತ್ತರಿಸಿಟ್ಟುಕೊಂಡ ಪುಂಡಿಯನ್ನು ಹಾಕಿ ಕುದಿಯಲು ಬಿಡಿ. ರಾತ್ರಿ ಮಾಡಿಟ್ಟು ಬೆಳಿಗ್ಗೆ ತಿನ್ನಲು ರುಚಿಯಾಗಿರುತ್ತದೆ.

ಮರುವಾಯಿ ಸುಕ್ಕಾ

ಬೇಕಾಗುವ ಸಾಮಗ್ರಿಗಳು: ಮರುವಾಯಿ – 1 ಕೆ.ಜಿ., ತೆಂಗಿನತುರಿ – 2 ಕಪ್, ಟೊಮೆಟೊ – 2, ಈರುಳ್ಳಿ – 1, ಅರಿಸಿನ – ಚಿಟಿಕೆ, ಉಪ್ಪು – ರುಚಿಗೆ, ಬೆಳ್ಳಳ್ಳಿ – 4 ಎಸಳು, ಖಾರದಪುಡಿ – 3 ಚಮಚ.

ತಯಾರಿಸುವ ವಿಧಾನ: ಒಂದು ಕೆ.ಜಿ ಮರುವಾಯಿಯನ್ನು ಚೆನ್ನಾಗಿ ತೊಳೆದು ಭಾಗ ಮಾಡಿಟ್ಟುಕೊಳ್ಳಿ. ಇದಕ್ಕೆ ಎರಡು ಕಪ್ ತೆಂಗಿನತುರಿ, 2 ಟೊಮೆಟೊ, ಒಂದು ದೊಡ್ಡ ಈರುಳ್ಳಿ, ಅರಿಶಿನ ಸ್ವಲ್ಪ, ಉಪ್ಪು, ನಾಲ್ಕು ಎಸಳು ಜಜ್ಜಿದ ಬೆಳ್ಳುಳ್ಳಿ, 3 ಚಮಚ ಖಾರದಪುಡಿ, ಒಂದು ಕಪ್ ನೀರು ಹಾಕಿ ಚೆನ್ನಾಗಿ ಕೈಯಿಂದ ಮಿಶ್ರ ಮಾಡಿ ಗ್ಯಾಸ್ ಮೇಲೆ ಇಡಿ. ಇದನ್ನು ಚೆನ್ನಾಗಿ ಕುದಿಯಲು ಬಿಡಿ. ಹುಳಿ, ಕಡಿಮೆಯಾಗಿದ್ದರೆ, ಹುಳಿ ನೀರನ್ನು ಸೇರಿಸಿ. ನಿಮ್ಮ ರುಚಿಗೆ ತಕ್ಕಷ್ಟು ಖಾರ, ಉಪ್ಪನ್ನು ಸೇರಿಸಿ. ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ.

ಬಸಳೆ, ಮರುವಾಯಿ ಗಸಿ

ಮರುವಾಯಿ ಗಸಿಗೆ ಬೇಕಾದ ಮಸಾಲೆ: ಒಂದು ಬಾಣಲೆಗೆ ಒಂದು ಟೀ ಚಮಚ ಎಣ್ಣೆ ಹಾಕಿ, ಅದಕ್ಕೆ ಎರಡು ಚಮಚ ಕೊತ್ತಂಬರಿ ಕಾಳು, ಅರ್ಧ ಚಮಚ ಜೀರಿಗೆ, 4ರಿಂದ 5 ಕಾಳು ಕಾಳುಮೆಣಸು, 4 ಕಾಳು ಮೆಂತ್ಯೆ, 10 ಒಣಮೆಣಸು ಹಾಕಿ ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ. ರುಬ್ಬುವಾಗ ಅರ್ಧ ಈರುಳ್ಳಿ, 4 ಎಸಳು ಬೆಳ್ಳುಳ್ಳಿ, ನೆಲ್ಲಿಕಾಯಿ ಗಾತ್ರದ ಹುಳಿ ಹಾಕಿ ಮಸಾಲೆ ರುಬ್ಬಿಟ್ಟುಕೊಳ್ಳಿ.

ಒಂದು ಕಟ್ಟು ಬಸಳೆಯನ್ನು ತಂದು ಚೆನ್ನಾಗಿ ತೊಳೆದು ಅದರ ಎಲೆ, ದಂಟುಗಳನ್ನು ಕತ್ತರಿಸಿಟ್ಟುಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಒಂದು ಈರುಳ್ಳಿ , ಟೊಮೆಟೊ, ಉಪ್ಪು, ಅರಿಸಿನ ಹಾಕಿ ಬೇಯಿಸಿಕೊಳ್ಳಿ. ಅರ್ಧ ಕೆ.ಜಿ. ಮರುವಾಯಿಯನ್ನು ಚೆನ್ನಾಗಿ ತೊಳೆದು ಭಾಗಮಾಡಿಟ್ಟುಕೊಳ್ಳಿ. ಇದನ್ನು ಬೆಂದ ಬಸಳೆಗೆ ಹಾಕಿ ಒಂದು ಕುದಿ ಬರಿಸಿ. ನಂತರ ಅದಕ್ಕೆ ಮಸಾಲೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 2 ಕುದಿ ಕುದಿಸಿದರೆ ಮರುವಾಯಿ ಬಸಳೆ ಗಸಿ ರೆಡಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.